Posts

Showing posts from December, 2023

Security Breach in Loksabha: ಪ್ರತಾಪ್‌ ಸಿಂಹ ಕಚೇರಿಗೆ ಕಾಂಗ್ರೆಸ್‌ ಮುತ್ತಿಗೆ ಯತ್ನ, ಗಲಾಟೆ

Image
 Security Breach in Loksabha: ಮೈಸೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು, ಪ್ರತಾಪ್‌ ಸಿಂಹ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಮೈಸೂರು:  ಸಂಸತ್‌ನಲ್ಲಿ ಭದ್ರತಾ ಲೋಪಕ್ಕೆ (Security Breach in Loksabha) ಕಾರಣವಾದ ಸಂಸದ ಪ್ರತಾಪ್‌ ಸಿಂಹ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ನಗರದ ಸಂಸದರ ಕಚೇರಿ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು. ಈ ವೇಳೆ ಮೈಸೂರು-ಹುಣಸೂರು ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪ್ರತಾಪ್‌ ಸಿಂಹ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ನಗರದ ಜಲದರ್ಶಿನಿ ಮುಂಭಾಗವಿರುವ ಪ್ರತಾಪ್ ಸಿಂಹ ಕಚೇರಿ ಎದುರು ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಭಾಗಿಯಾಗಿದ್ದರು. ಪಾರ್ಲಿಮೆಂಟಿಗೆ ನುಗ್ಗಿ ಭಯೋತ್ಪಾದನಾ ಕೃತ್ಯ ನಡೆಸುವ ಸಂಚಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಈ ಅವಾಂತರಕ್ಕೆ ಪ್ರತಾಪ್ ಸಿಂಹ ಅವರೇ ನೇರ ಹೊಣೆ ಆಕ್ರೋಶ ಹೊರಹಾಕಿದರು. ಮೈಸೂರು-ಹುಣಸೂರು ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲ ಕಾರ್ಯಕರ್ತರು ರಸ್ತೆಯಲ್ಲಿ ಮ...

CM Siddaramaiah: ಸಿದ್ದರಾಮಯ್ಯಗೆ ಧಮ್ಮು, ತಾಕತ್ತು ಇದ್ದರೆ NIAಗೆ ಮೌಲ್ವಿ ಪ್ರಕರಣ ವಹಿಸಲಿ: ಯತ್ನಾಳ್

Image
 CM Siddaramaiah: ಕಾಂಗ್ರೆಸ್‌ನವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಮೂಲ ಮೌಲ್ವಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ‌. ಸಿದ್ದರಾಮಯ್ಯ ಸರ್ಕಾರಕ್ಕೆ, ಸಚಿವರಿಗೆ ಧಮ್ಮು ತಾಕತ್ತು ಇದ್ದರೆ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡಲಿ. ಎಲ್ಲ ಸತ್ಯಾಂಶಗಳು ಹೊರಗೆ ಬರುತ್ತವೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್ ಸವಾಲು ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಈಚೆಗೆ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ (Muslim conference) ಸಿಎಂ ಸಿದ್ದರಾಮಯ್ಯ ‌ಅವರು ವೇದಿಕೆ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ಎನ್‌ಐಎ ತನಿಖೆ ಆಗಬೇಕು ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿ, ಯತ್ನಾಳ ಒಬ್ಬ ಮಹಾನ್ ಸುಳ್ಳುಗಾರ. ತನ್ವೀರ್‌ ಪೀರಾ ಅವರ ಜತೆಗೆ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಸುಮ್ಮನಿದ್ದರು? ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೆ, ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಹೀಗಾಗಿ ತನಿಖೆ ನಡೆಸಿ ಪ್ರೂವ್‌ ಮಾಡಿ ಎಂದು ಸವಾಲು ಹಾಕಿದ್ದರು. ಈಗ ಇದಕ್ಕೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್, ಸಿದ್ದರಾಮಯ್ಯ ಸರ್ಕಾರಕ್ಕೆ, ಸಚಿವರಿಗೆ ಧಮ್ಮು, ತಾಕತ್ತು ಇದ್ದರೆ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲಿ. ಮೌಲ್ವಿ ವಿರುದ್ಧದ ತನಿಖೆಗೆ ನಾನು ಸಿದ್ಧನಿದ್ದೇನೆ. ಎನ್‌ಐಎ ತನಿಖೆ ಮಾಡುತ್ತದೆ. ಕಾಂಗ್ರೆಸ್‌ನವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಮೂಲ ಮೌಲ್ವಿ...

ವಿಧಾನಸೌಧ ರೌಂಡ್ಸ್: ಕಾಂಗ್ರೆಸ್‌ ಹೀನಾಯ ಸೋಲು; ಈಗ ಹೇಳಿ, ʼಪನೌತಿʼ ಯಾರು ಅಂತಿದ್ದಾರೆ ಜನ!

Image
  ಮಿಜೊರಾಂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್‌ ಹೀನಾಯ ಹಿನ್ನಡೆ ಕಂಡಿದೆ. ತೆಲಂಗಾಣ ಬಿಟ್ಟರೆ ಉಳಿದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಅಸ್ತ್ರ ಕೆಲಸ ಮಾಡಿಲ್ಲ! ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಹತ್ತು ವರ್ಷಗಳ ಕಳೆಯುತ್ತ ಬಂದರೂ ಅವರ ಮೇಲೆ ನೆಗೆಟಿವ್ ಇಂಪ್ರೆಷನ್ ಕ್ರಿಯೆಟ್ ಆಗಿಲ್ಲ ಅನ್ನೋದು ಪದೇಪದೇ ಸಾಬೀತಾಗಿದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲೂ ಮೋದಿ ಪ್ರಭಾವ ಮತ್ತೊಮ್ಮೆ ಪ್ರಜ್ವಲಿಸಿದೆ. ಉತ್ತರ ಭಾರತ- ದಕ್ಷಿಣ ಭಾರತದ ಕೊಂಡಿಯಾಗಿರುವ ಮಧ್ಯಪ್ರದೇಶದಲ್ಲಿ ಯಾರೂ ಊಹೆ ಮಾಡದ ರೀತಿಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ಐದು ರಾಜ್ಯಗಳ ಪೈಕಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದಿದೆ. ಮಿಜೊರಾಂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್‌ ಹೀನಾಯ ಹಿನ್ನಡೆ ಕಂಡಿದೆ. ಹಾಗೆಂದ ಮಾತ್ರಕ್ಕೆ ಮೋದಿ ಪವಾಡ ಪುರುಷ ಅಲ್ಲ. ಅವರ ಅಸಾಧಾರಣ ಪ್ರಭಾವ ಮತ್ತು ಜನಪರ ಯೋಜನೆಗಳ ಎದುರು ಪ್ರತಿಪಕ್ಷಗಳು ಮಂಕಾಗಿವೆ ಅಷ್ಟೆ! ದೇಶದ ರಾಜಕಾರಣದ ದಿಕ್ಕನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರತಿ ಚುನಾವಣೆಯಲ್ಲೂ ವಿಪಕ್ಷಗಳು ಎಡುವುತ್ತಿವೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಶಕ್ತಿ ಹೀನ ತಂತ್ರಗಾರಿಕೆ ಫಲ ನೀಡುತ್ತಿಲ್ಲ. ಹೊಸ ತಲೆಮಾರಿನ ರಾಜಕಾರಣವನ್ನು ಅರ್ಥ ಮಾಡಿಕೊಂಡಿರುವ ಮೋದಿ, ಅಮಿತ್ ಶಾ ಟೀಮ್...

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Image
  Congress Guarantee : ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳನ್ನು ಪಡೆಯುವ ಜನರು ಸಮಾಜದ ಒಳಿತಿಗಾಗಿ ಮತ್ತೆ ಕೊಡುಗೆ ನೀಡಬೇಕು. ನಾವು ಬಡ ಸಮುದಾಯಕ್ಕೆ ಉತ್ತಮ ಸೌಲಭ್ಯವನ್ನು ಹೇಗೆ ಕಲ್ಪಿಸಿ ಕೊಡಬೇಕು ಎಂಬುದನ್ನು ನೋಡಬೇಕು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ. ಬೆಂಗಳೂರು:  ರಾಜ್ಯ ಕಾಂಗ್ರೆಸ್‌ ಸರ್ಕಾರದ (Congress Government) ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ (Congress Guarantee) ಬಗ್ಗೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Infosys Narayana Murthy) ಅವರಿಂದ ಆಕ್ಷೇಪ ಕೇಳಿಬಂದಿದೆ. ಯಾವುದನ್ನೂ ಉಚಿತವಾಗಿ ನೀಡಬಾರದು. ನಾನು ಹೆಚ್ಚು ತೆರಿಗೆ ಕಟ್ಟುತ್ತೇನೆ ಎಂಬ ಕಾರಣದಿಂದ ಇದನ್ನು ಹೇಳುತ್ತಿಲ್ಲ. ಯಾವ ಉತ್ತಮ ಸೌಲಭ್ಯ ಕೊಟ್ಟರೆ ಅದು ಹೇಗೆ ಸಮಾಜಕ್ಕೆ ವಾಪಸ್ ಬರುತ್ತದೆ ಅನ್ನೋದನ್ನು ನೋಡಬೇಕು ಎಂದು ಸಲಹೆ ನೀಡಿದ್ದಾರೆ. ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ (Bangalore Tech Summit) ಮಾತನಾಡಿದ ನಾರಾಯಣ ಮೂರ್ತಿ, ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳನ್ನು ಪಡೆಯುವ ಜನರು ಸಮಾಜದ ಒಳಿತಿಗಾಗಿ ಮತ್ತೆ ಕೊಡುಗೆ ನೀಡಬೇಕು. ನಾವು ಬಡ ಸಮುದಾಯಕ್ಕೆ ಉತ್ತಮ ಸೌಲಭ್ಯವನ್ನು ಹೇಗೆ ಕಲ್ಪಿಸಿ ಕೊಡಬೇಕು ಎಂಬುದನ್ನು ನೋಡಬೇಕು. ಯಾವ ಉತ್ತಮ ಸೌಲಭ್ಯ ಕೊಟ್ಟರೆ ಅದು ಹೇಗೆ ಸಮಾಜಕ್ಕೆ ವಾಪಸ್ ಬರುತ್ತದೆ ಅನ್ನೋದನ್ನು ನಾವು ನೋಡಬೇಕು ಎಂದು ಕಿವಿಮಾತ...