Security Breach in Loksabha: ಪ್ರತಾಪ್ ಸಿಂಹ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ ಯತ್ನ, ಗಲಾಟೆ
Security Breach in Loksabha: ಮೈಸೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಪ್ರತಾಪ್ ಸಿಂಹ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಮೈಸೂರು: ಸಂಸತ್‌ನಲ್ಲಿ ಭದ್ರತಾ ಲೋಪಕ್ಕೆ (Security Breach in Loksabha) ಕಾರಣವಾದ ಸಂಸದ ಪ್ರತಾಪ್ ಸಿಂಹ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ನಗರದ ಸಂಸದರ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು. ಈ ವೇಳೆ ಮೈಸೂರು-ಹುಣಸೂರು ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪ್ರತಾಪ್ ಸಿಂಹ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ನಗರದ ಜಲದರ್ಶಿನಿ ಮುಂಭಾಗವಿರುವ ಪ್ರತಾಪ್ ಸಿಂಹ ಕಚೇರಿ ಎದುರು ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಪಾರ್ಲಿಮೆಂಟಿಗೆ ನುಗ್ಗಿ ಭಯೋತ್ಪಾದನಾ ಕೃತ್ಯ ನಡೆಸುವ ಸಂಚಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಈ ಅವಾಂತರಕ್ಕೆ ಪ್ರತಾಪ್ ಸಿಂಹ ಅವರೇ ನೇರ ಹೊಣೆ ಆಕ್ರೋಶ ಹೊರಹಾಕಿದರು.
ಮೈಸೂರು-ಹುಣಸೂರು ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲ ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಣ ಮಾಡಿದರು.
ಸಂಸದ ಪ್ರತಾಪ್ ಸಿಂಹ ವಿರುದ್ಧ ತನಿಖೆಯಾಗಲಿ
ಸಂಸತ್ ಒಳಗೆ ನುಗ್ಗಿರುವ ದುಷ್ಕರ್ಮಿಗಳು ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದಾರೆ. ಹಾಗಾಗಿ ಪ್ರತಾಪ್ ಸಿಂಹಗೆ ದುಷ್ಕರ್ಮಿಗಳ ಪರಿಚಯ ಇದ್ದೇ ಇರುತ್ತೆ. ಈ ಘಟನೆ ಬೇರೆ ಯಾರಾದರೂ ಮಾಡಿದರೆ ಪ್ರತಾಪ್ ಸಿಂಹ ವೀರಾವೇಷ ತಾಳುತ್ತಿದ್ದರು. ಕೂಡಲೇ ಪ್ರತಾಪ್ ಸಿಂಹಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು. ಅವರ ವಿರುದ್ಧವೂ ತನಿಖೆಯಾಗಬೇಕು ಎಂದು ಮೈಸೂರಿನಲ್ಲಿ ಎಸ್‌ಡಿಪಿಐ ಪಾರ್ಟಿ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದರು.
ದಾಳಿಕೋರರಿಗೆ ಪಾಸ್ ಕೊಟ್ಟ ಪ್ರತಾಪ್ ಪದಚ್ಯುತಿಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು: ಅತಿ ಭದ್ರತೆಯ ನೂತನ ಸಂಸತ್ ಭವನದಲ್ಲಿ (New Parliament Building) ಲೋಕಸಭಾ ಕಲಾಪ ನಡೆಯುತ್ತಿರುವಾಗಲೇ ಭದ್ರತೆಯನ್ನು ಭೇದಿಸಿ ಇಬ್ಬರು ಒಳಪ್ರವೇಶಿಸಿದ್ದಲ್ಲದೆ (Security breach in Loksabha), ಕಲರ್ ಬಾಂಬ್ ಸಿಡಿಸಿದ ಘಟನೆಯ ಬಳಿಕ ದೇಶದಲ್ಲಿ ಎರಡು ವಿಚಾರಗಳು ಗಂಭೀರವಾಗಿ ಚರ್ಚೆಗೆ ಒಳಗಾಗಿವೆ. ಒಂದು ಗ್ಯಾಲರಿಯಿಂದ ಕಲಾಪ ಪ್ರದೇಶಕ್ಕೆ ಜಿಗಿದು ಮೇಜುಗಳ ಮೇಲೆ ಜಿಗಿಯುತ್ತಾ ಸಾಗಿದ ಸಾಗರ್ ಶರ್ಮಾ ಎಂಬ ಹರ್ಯಾಣದ ದುಷ್ಕರ್ಮಿಗೆ ಸಂಸತ್ ಪ್ರವೇಶಕ್ಕೆ ಪಾಸ್ ನೀಡಿದ ಮೈಸೂರಿನ ಸಂಸದ ಪ್ರತಾಪ್ ಸಿಂಹ (MP Pratapsimha) ಅವರ ಬಗ್ಗೆ, ಇನ್ನೊಂದು ಲೋಕಸಭೆಯಲ್ಲಿ ಸಂಸದರಿಗೇ ಭದ್ರತೆ ನೀಡಲಾಗದು ಚೌಕಿದಾರರು ದೇಶ ಕಾಯುವರೇ ಎಂಬ ಪ್ರಶ್ನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಚುಚ್ಚುವ ಪ್ರಯತ್ನ.
ಸಂಪೂರ್ಣ ಸುದ್ದಿಗಾಗಿ/ಮಾಹಿತಿಗಾಗಿ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ 👉 Kannada news
ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 today kannada news

Comments
Post a Comment