Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

 Prajwal Revanna Case: ಈ ಬಗ್ಗೆ ಜರ್ಮನಿ ಮ್ಯೂನಿಕ್ ಏರ್‌ಪೋರ್ಟ್‌ನಿಂದ ವಿಸ್ತಾರ ನ್ಯೂಸ್‌ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಬೆಂಗಳೂರಿಗೆ ಬರುವ ಫ್ಲೈಟ್‌ನಲ್ಲಿ ಪ್ರಜ್ವಲ್‌ ಹತ್ತಿಲ್ಲ ಎಂಬ ಸಂಗತಿ ಗೊತ್ತಾಗಿದೆ. ಎಲ್ಲ ಪ್ರಯಾಣಿಕರಿಗೆ ಫ್ಲೈಟ್‌ ಹತ್ತಲು ಬೋರ್ಡಿಂಗ್‌ ಕ್ಲೋಸ್‌ ಆಗಿತ್ತು. 3.35ಕ್ಕೆ ಲುಫ್ತಾನ್ಸಾ ಏರ್‌ಲೈನ್ಸ್ LH764 ಟೇಕ್‌ ಆಫ್‌ ಆಗಿದೆ. ಈ ನಡುವೆ ಇನ್ನು ಸಿಬಿಐ ಮೂಲಕ ಇಂಟರ್‌ಪೋಲ್‌ನಿಂದ ಬ್ಲೂ ಕಾರ್ನರ್ ನೋಟಿಸ್‌ ಕೂಡಾ ಜಾರಿ ಮಾಡಲಾಗಿದ್ದು, ಕಾನೂನಿಗೆ ಡೋಂಟ್‌ ಕೇರ್ ಎಂದು ಪ್ರಜ್ವಲ್ ಹೇಳುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.


ಬೆಂಗಳೂರು: ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ (Prajwal Revanna Case) ಎಸ್‌ಐಟಿ ಮೋಸ್ಟ್ ವಾಂಟೆಡ್‌ ಲಿಸ್ಟ್‌ನಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣ, ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಎಂಬುದು ಸುಳ್ಳಾಗಿದೆ. ಅವರು ಜರ್ಮನಿ ಮ್ಯೂನಿಕ್ ಏರ್‌ಪೋರ್ಟ್‌ನ ಲಾಂಜ್‌ನಲ್ಲಿಯೇ ಕಾಣಿಸಿಕೊಂಡಿಲ್ಲ ಎಂಬ ಸಂಗತಿ ಗೊತ್ತಾಗಿದೆ. ಅಲ್ಲದೆ, ಫ್ಲೈಟ್‌ ಟೇಕ್‌ ಆಫ್‌ ಆಗಿದ್ದರೂ ಅವರು ಅವರು ಅತ್ತ ಸುಳಿದಿಲ್ಲ. ಹೀಗಾಗಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಟಿಕೆಟ್‌ ಮಾಡಿಸಿಯೂ ಅವರು ವಿಮಾನವನ್ನು ಹತ್ತಿಲ್ಲ ಎಂಬ ಸಂಗತಿ ಗೊತ್ತಾಗಿದೆ.

ಈ ಬಗ್ಗೆ ಜರ್ಮನಿ ಮ್ಯೂನಿಕ್ ಏರ್‌ಪೋರ್ಟ್‌ನಿಂದ ವಿಸ್ತಾರ ನ್ಯೂಸ್‌ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಬೆಂಗಳೂರಿಗೆ ಬರುವ ಫ್ಲೈಟ್‌ನಲ್ಲಿ ಪ್ರಜ್ವಲ್‌ ಹತ್ತಿಲ್ಲ ಎಂಬ ಸಂಗತಿ ಗೊತ್ತಾಗಿದೆ. ಎಲ್ಲ ಪ್ರಯಾಣಿಕರಿಗೆ ಫ್ಲೈಟ್‌ ಹತ್ತಲು ಬೋರ್ಡಿಂಗ್‌ ಕ್ಲೋಸ್‌ ಆಗಿತ್ತು. 3.35ಕ್ಕೆ ಲುಫ್ತಾನ್ಸಾ ಏರ್‌ಲೈನ್ಸ್ LH764 ಟೇಕ್‌ ಆಫ್‌ ಆಗಿದೆ. ಇದರ ಬ್ಯುಸಿನೆಸ್ ಕ್ಲಾಸ್ ಫ್ಲೈಟ್ ಟಿಕೆಟ್‌ಗೆ
ಸುಮಾರು 3 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ. ಇಷ್ಟಾದರೂ ಪ್ರಜ್ವಲ್ ಅಲ್ಲಿಂದ ಹೊರಟೇ ಇಲ್ಲ ಎಂದು ತಿಳಿದುಬಂದಿದೆ.

First Published on Vistara News.

Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!