Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!
Prajwal Revanna Case: ಪ್ರಜ್ವಲ್ ರೇವಣ್ಣ ಮೇಲೆ ಕೇಸ್ ದಾಖಲಾಗಿ 17 ದಿನವೇ ಗತಿಸಿಹೋಗಿದೆ. ಇನ್ನು ಈ ಕೇಸ್‌ಗೆ ಸಂಬಂಧಿಸಿ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪ ಎದುರಿಸಿ ಎಚ್.ಡಿ. ರೇವಣ್ಣ ಜೈಲು ಸೇರಿದ್ದರೂ ಆ ಕಡೆ ಭವಾನಿ ಕಣ್ಣೆತ್ತಿಯೂ ನೋಡಿಲ್ಲ. ಇನ್ನು ಇದೇ ಕೇಸ್ ವಿಚಾರವಾಗಿ ಎಸ್ಐಟಿ ಎರಡು ಬಾರಿ ನೋಟಿಸ್ ಕೊಟ್ಟರೂ ಡೋಂಟ್ ಕೇರ್ ಎಂಬಂತೆ ಕುಳಿತುಬಿಟ್ಟಿದ್ದಾರೆ. ಪ್ರಜ್ವಲ್ ರೀತಿಯಲ್ಲಿ ತಾಯಿಯೂ ವಿಚಾರಣೆಗೆ ಬರಲು ಹಿಂದೇಟು ಹಾಕಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ರೇವಣ್ಣ ಅವರಿಗೆ ಜಾಮೀನು ಸಿಕ್ಕರೂ ಖುಷಿ ವ್ಯಕ್ತಪಡಿಸೋಕೆ ಕೂಡಾ ಅವರು ಕಾಣಿಸಿಕೊಳ್ಳಲಿಲ್ಲ. ಇದೆಲ್ಲವೂ ದೇವೇಗೌಡರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಸಂಬಂಧ ಎಚ್.ಡಿ. ರೇವಣ್ಣ ಅವರ ಬಳಿ ವಿಸ್ತೃತವಾಗಿ ಚರ್ಚೆ ಮಾಡಿ ತಾಕೀತು ಮಾಡಿದ್ದಾರೆನ್ನಲಾಗಿದೆ.
ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣ ಹಾಗೂ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭವಾನಿ ರೇವಣ್ಣ (Bhavani Revanna) ಅವರ ನಡೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (HD Devegowda) ಗರಂ ಆಗಿದ್ದಾರೆ ಎನ್ನಲಾಗಿದೆ. ಇನ್ನು ಮುಂದೆ ಕುಟುಂಬಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೋ, ಅವರಿಗೆ ಆ ನಿಟ್ಟಿನಲ್ಲಿ ಯಾವ ರೀತಿ ಎಚ್ಚರಿಕೆ ನೀಡುತ್ತೀಯೋ ನಿನಗೆ ಬಿಟ್ಟಿದ್ದು ಎಂಬುದಾಗಿ ಪುತ್ರ ಎಚ್.ಡಿ. ರೇವಣ್ಣ ಅವರಿಗೆ ಕಡ್ಡಿ ಮುರಿದಂತೆ ಹೇಳಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ಮೇಲೆ ಕೇಸ್ ದಾಖಲಾಗಿ 17 ದಿನವೇ ಗತಿಸಿಹೋಗಿದೆ. ಇನ್ನು ಈ ಕೇಸ್‌ಗೆ ಸಂಬಂಧಿಸಿ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪ ಎದುರಿಸಿ ಎಚ್.ಡಿ. ರೇವಣ್ಣ ಜೈಲು ಸೇರಿದ್ದರೂ ಆ ಕಡೆ ಭವಾನಿ ಕಣ್ಣೆತ್ತಿಯೂ ನೋಡಿಲ್ಲ. ಇನ್ನು ಇದೇ ಕೇಸ್ ವಿಚಾರವಾಗಿ ಎಸ್ಐಟಿ ಎರಡು ಬಾರಿ ನೋಟಿಸ್ ಕೊಟ್ಟರೂ ಡೋಂಟ್ ಕೇರ್ ಎಂಬಂತೆ ಕುಳಿತುಬಿಟ್ಟಿದ್ದಾರೆ. ಪ್ರಜ್ವಲ್ ರೀತಿಯಲ್ಲಿ ತಾಯಿಯೂ ವಿಚಾರಣೆಗೆ ಬರಲು ಹಿಂದೇಟು ಹಾಕಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ರೇವಣ್ಣ ಅವರಿಗೆ ಜಾಮೀನು ಸಿಕ್ಕರೂ ಖುಷಿ ವ್ಯಕ್ತಪಡಿಸೋಕೆ ಕೂಡಾ ಅವರು ಕಾಣಿಸಿಕೊಳ್ಳಲಿಲ್ಲ. ಅಲ್ಲದೆ, ದೇವೇಗೌಡರ ಮನೆಯತ್ತಲೂ ಸುಳಿಯಲಿಲ್ಲ. ಇದು ದೇವೇಗೌಡರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗಿದೆ. ತಾವು ಗಳಿಸಿಟ್ಟ ಗೌರವ, ಹೆಸರನ್ನು ಮಣ್ಣು ಪಾಲಾಗಲು ಬಿಡುವುದಿಲ್ಲ. ಆ ರೀತಿ ಮಾಡಲು ಇನ್ನು ಮುಂದೆ ಅವಕಾಶವನ್ನೂ ಕೊಡುವುದಿಲ್ಲ ಎಂದು ಗುಡುಗಿದ್ದಾರೆನ್ನಲಾಗಿದೆ.

Comments
Post a Comment