Posts

Showing posts from February, 2024

‌Caste Census Report: ಜಾತಿ ಗಣತಿ ಸ್ವೀಕಾರದ ಹಿಂದೆ ಸಿದ್ದರಾಮಯ್ಯ ಪ್ಲ್ಯಾನ್‌ ಏನು? ಕಾರಣ ಬಿಚ್ಚಿಟ್ಟಿದ್ದಾರೆ ಸುನಿಲ್‌ ಕುಮಾರ್!

Image
  ‌ Caste Census Report : ಸಿಎಂ ಸಿದ್ದರಾಮಯ್ಯ ಪಲಾಯನವಾದ ಮಾಡಿದ್ದಾರೆ. ಈ ಪಲಾಯನವಾದ ಸಾಕು. ಬದ್ಧತೆ ಇದ್ದರೆ ತಕ್ಷಣ ಸಂಪುಟ ಸಭೆಯಲ್ಲಿ ವರದಿ ಸ್ವೀಕರಿಸಿ, ಚರ್ಚೆ ನಡೆಸುವುದಕ್ಕೆ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಿರಿ ಎಂದು ವಿ. ಸುನಿಲ್‌ ಕುಮಾರ್ ಸವಾಲು ಹಾಕಿದ್ದಾರೆ. ಬೆಂಗಳೂರು:  ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೊಳಗೊಂಡ (Social and Economic Survey) ಜಾತಿ ಗಣತಿ ವರದಿಯನ್ನು (Caste Census report) ಸಿಎಂ ಸಿದ್ದರಾಮಯ್ಯ ( CM Siddaramaiah ) ಅವರು ಅಧಿಕೃತವಾಗಿ ಈಗ ಸ್ವೀಕಾರ ಮಾಡಿದ್ದಾರೆ. ಆದರೆ, ಈ ಮೂಲಕ ಸಿದ್ದರಾಮಯ್ಯ ಅವರು ಗೊಂದಲವನ್ನು ಸೃಷ್ಟಿ ಮಾಡಿದ್ದಾರೆ. ಈ ವರದಿಯ ಸ್ವರೂಪ ಏನೆಂಬುದು ಮೊದಲು ನಿರ್ಧಾರ ಆಗಬೇಕಿದೆ. ಜಾರಿಗೆ ಮುನ್ನ ವಿಸ್ತೃತ ಚರ್ಚೆ ಆಗಬೇಕಿದೆ. ಸಿಎಂಗೆ ಬದ್ಧತೆ ಇದ್ದಿದ್ದರೆ ರಾಜ್ಯಪಾಲರ ಭಾಷಣ ಮುಗಿದ ತಕ್ಷಣವೇ ವರದಿಯನ್ನು ಸ್ವೀಕರಿಸಿ ಸದನದಲ್ಲಿ ಮಂಡಿಸಬೇಕಿತ್ತು. ಇಲ್ಲಿ ನಿಮ್ಮ ಉದ್ದೇಶ ಗೊಂದಲವನ್ನು ಜೀವಂತವಾಗಿಡುವುದಷ್ಟೇ ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ. ಸುನಿಲ್‌ ಕುಮಾರ್‌ (V Sunil Kumar) ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸುನಿಲ್‌ ಕುಮಾರ್‌, ಸಿಎಂ ಸಿದ್ದರಾಮಯ್ಯ ಪಲಾಯನವಾದ ಮಾಡಿದ್ದಾರೆ. ಈ ಪಲಾಯನವಾದ ಸಾಕು. ಬದ್ಧತೆ ಇದ್ದರೆ ತಕ್ಷಣ ಸಂಪುಟ ಸಭೆಯಲ್ಲಿ ವರದಿ ಸ್ವೀಕರಿಸಿ, ಚರ್ಚೆ ನಡೆಸುವುದಕ್ಕೆ ...

Caste Census : ಜಾತಿ ಗಣತಿ ವರದಿಗೆ ಭಾರಿ ಅಪಸ್ವರ; ಅವೈಜ್ಞಾನಿಕ ಎಂದ ಸಿದ್ದಗಂಗಾ ಶ್ರೀ

Image
  Caste Census : ಜಾತಿ ಗಣತಿ ವರದಿ ಮತ್ತೆ ಸುದ್ದಿ ಮಾಡುತ್ತಿದೆ. ಅದು ಮಂಡನೆಯಾಗುತ್ತಿದ್ದಂತೆಯೇ ಅದು ಅವೈಜ್ಞಾನಿಕ ಎಂಬ ಆಪಾದನೆಗಳಿಗೆ ಮತ್ತೆ ಚಾಲನೆ ಸಿಕ್ಕಿದೆ. ಬೆಂಗಳೂರು:  ಬಹು ವಿವಾದಿತ ಜಾತಿ ಗಣತಿ ವರದಿಯನ್ನು ( Caste Census report) ಕೊನೆಗೂ ರಾಜ್ಯ ಸರ್ಕಾರ ಸ್ವೀಕಾರ ಮಾಡಿದೆ. ಇದರ ನಡುವೆಯೇ ಈ ವರದಿ ಅವೈಜ್ಞಾನಿಕ ಎಂಬ ಅಪಸ್ವರ ಮತ್ತೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ (Backward Classes Commission) ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ (Jayaprakash Hegde) ಅವರಿಂದ ಸ್ವೀಕಾರ ಮಾಡಿದ ಈ ವರದಿಯ ಬಗ್ಗೆ ಮೊದಲಿನಿಂದಲೂ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದಿಂದ ಆಕ್ಷೇಪವಿದೆ. ವರದಿ ಮಂಡನೆಯಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ (Siddalinga swameeji) ಅವರು, ಇದು ವೈಜ್ಞಾನಿಕವಾಗಿಲ್ಲ ಎಂಬ ಪರೋಕ್ಷ ಅಭಿಪ್ರಾಯ ವ್ಯಕ್ತಪಡಿಸಿದರು. ʻʻಜಾತಿ ಗಣತಿ‌ ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಇದಕ್ಕೆ ಯಾರೂ ವಿರೋಧ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಜಾತಿ ಆಧಾರದ ಮೇಲೆ ಸವಲತ್ತುಗಳನ್ನು ಕೊಡಬೇಕಾಗುತ್ತದೆ. ಈ ವರದಿಯನ್ನು ವೈಜ್ಞಾನಿಕವಾಗಿ ರೂಪಿಸಲಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆʼʼ ಎಂದು ಶ್ರೀಗಳು ಹೇಳಿದರು. First Published on Vistara News .

Caste Census report: ಜಾತಿ ಗಣತಿ ವರದಿಗೆ ಕಾಂಗ್ರೆಸ್‌ನಲ್ಲಿ ಅಪಸ್ವರ; ಒಪ್ಪಲ್ಲವೆಂದ ಕುಲಕರ್ಣಿ, ದೋಷವಿದೆ ಅಂದ್ರು ಲಕ್ಷ್ಮಿ

Image
  Caste Census report : ಜಾತಿಗಣತಿ ವರದಿ ಸ್ವೀಕಾರಕ್ಕೆ ಕಾಂಗ್ರೆಸ್‌ನಲ್ಲಿಯೇ ಅಪಸ್ವರಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ ಶಾಸಕರು ಹಾಗೂ ಸಚಿವರಿಂದ ತೀವ್ರ ವಿರೋಧಗಳು ವ್ಯಕ್ತವಾಗತೊಡಗಿವೆ. ಇದನ್ನು ಒಪ್ಪುವುದೇ ಇಲ್ಲ ಎಂದು ಶಾಸಕ ವಿನಯ್‌ ಕುಲಕರ್ಣಿ ಹೇಳಿದ್ದರೆ, ವರದಿಯಲ್ಲಿ ದೋಷಗಳಿವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ. ಬೆಂಗಳೂರು:  ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೊಳಗೊಂಡ ಜಾತಿ ಗಣತಿ ವರದಿಯನ್ನು (Caste Census report) ಸಿಎಂ ಸಿದ್ದರಾಮಯ್ಯ ( CM Siddaramaiah ) ಅವರು ಅಧಿಕೃತವಾಗಿ ಸ್ವೀಕಾರ ಮಾಡಿದ್ದಾರೆ. ಆದರೆ, ಇದಕ್ಕೆ ಈಗ ಕಾಂಗ್ರೆಸ್‌ನಲ್ಲಿಯೇ ಅಪಸ್ವರಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ ಶಾಸಕರು ಹಾಗೂ ಸಚಿವರಿಂದ ತೀವ್ರ ವಿರೋಧಗಳು ವ್ಯಕ್ತವಾಗತೊಡಗಿವೆ. ಇದನ್ನು ಒಪ್ಪುವುದೇ ಇಲ್ಲ ಎಂದು ಶಾಸಕ ವಿನಯ್‌ ಕುಲಕರ್ಣಿ (Vinay Kulakarni) ಹೇಳಿದ್ದರೆ, ವರದಿಯಲ್ಲಿ ದೋಷಗಳಿವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಹೇಳಿದ್ದಾರೆ. ಕಾಂತರಾಜು ಆಯೋಗದ ವರದಿ ಸಲ್ಲಿಕೆ ಕುರಿತು ಕಾಂಗ್ರೆಸ್ ಹಿರಿಯ ಶಾಸಕ ವಿನಯ್ ಕುಲಕರ್ಣಿ ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ. ನಾವು ಜಾತಿಗಣತಿ ವಿರೋಧಿ ಅಲ್ಲ. ಆದರೆ, ಈ ವರದಿಯನ್ನು ನಾವು ಒಪ್ಪಲ್ಲ. ನಮ್ಮ ಲಿಂಗಾಯತ ಸಮುದಾಯಕ್ಕೆ ಸೇರಿದ ಸಣ್ಣ ಉಪ ಪಂಗಡವನ್ನು ಕೈ ಬಿಡಲಾಗಿದೆ. ಈ ಹಿನ್ನೆ...

Rajyasabha Election : ಸೋಮಶೇಖರ್‌ ಮಾಡಿದ್ದು ರಾಜಕೀಯ ವ್ಯಭಿಚಾರ ಎಂದ ಸಿ.ಟಿ ರವಿ

Image
  Rajyasabha Election : ಪಕ್ಷ-ಪಕ್ಷ ಅನ್ನೋ ನಾವು ಪ್ರಶ್ನೆಗಳಿಗೆ ಒಳಗಾಗ್ತೀವಿ. ಆದರೆ, ರಾಜಕಾರಣದ ವ್ಯಭೀಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ. ರಾಜಕೀಯ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಹೋಗಿ ಸುಲಭವಾಗಿ ಸೆಟ್ ಆಗ್ತಾರೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ. ಚಿಕ್ಕಮಗಳೂರು:  ರಾಜ್ಯಸಭೆ ಚುನಾವಣೆಯಲ್ಲಿ ( Rajyasabha Election ) ಯಶವಂತ ಪುರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ (ST Somashekhar) ಅವರು ಅಡ್ಡ ಮತದಾನ (Cross Voting) ಮಾಡಿದ್ದನ್ನು ರಾಜಕೀಯ ವ್ಯಭಿಚಾರ (Political Adultery) ಎಂದು ಮಾಜಿ ಶಾಸಕ ಸಿ.ಟಿ ರವಿ (CT Ravi) ವ್ಯಾಖ್ಯಾನಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಅವರು ಅಡ್ಡ ಮತದಾನ ರಾಜಕೀಯ ವ್ಯಭಿಚಾರಕ್ಕೆ ಸಮ ಎಂದು ಹೇಳಿದರು. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಎಸ್.ಟಿ. ಸೋಮಶೇಖರ್‌ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವ ಬದಲು ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ಮತ ಹಾಕುವ ಮೂಲಕ ವಿಪ್‌ ಉಲ್ಲಂಘನೆ ಮಾಡಿದ್ದರು. ಅದಕ್ಕಿಂತ ಮೊದಲು ಮಾತನಾಡಿದ್ದ ಅವರು, ನನ್ನ ಕ್ಷೇತ್ರಕ್ಕೆ ಯಾರು ಅನುದಾನ ಕೊಡುತ್ತಾರೋ ಅವರಿಗೆ ಮತ ಹಾಕುತ್ತೇನೆ, ವಿಪ್‌, ಶಿಸ್ತು ಕ್ರಮ ಯಾವುದೂ ಲೆಕ್ಕಕ್ಕಿಲ್ಲ ಎಂದು ಹೇಳಿದ್ದರು. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ.ಟಿ. ರವಿ ಅವರು, ವ್ಯಕ್ತಿ ಸಂ...

7ನೇ ವೇತನ ಆಯೋಗದ ವರದಿ ಬಂದ ನಂತರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಸಿಎಂ ಭರವಸೆ

Image
  ಬೆಂಗಳೂರಿನಲ್ಲಿ ಸೋಮವಾರ ನಡೆದ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಬೆಂಗಳೂರು:  ಪಂಚ ಗ್ಯಾರಂಟಿಗಳ ಜಾರಿಯಿಂದ ಉಂಟಾದ ಆರ್ಥಿಕ ಹೊರೆಯ ನಡುವೆಯೂ 7ನೇ ವೇತನ ಆಯೋಗದ ಅಂತಿಮ ವರದಿ ಬಂದ ನಂತರ ಸರ್ಕಾರಿ ನೌಕರರ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರ ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah ) ಭರವಸೆ ನೀಡಿದ್ದಾರೆ. ನಗರದಲ್ಲಿ ಮಂಗಳವಾರ ನಡೆದ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ (Govt Employees Conference) ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿರ್ಧರಿಸಿದಂತೆ ತುಟ್ಟಿಭತ್ಯೆಯನ್ನು ಯಾವುದೇ ವಿಳಂಬವಿಲ್ಲದೇ ರಾಜ್ಯದಲ್ಲಿ ನೀಡಲಾಗುತ್ತಿದೆ. ಎನ್‌ಪಿಎಸ್ ತೆಗೆದು ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವ ಬಗ್ಗೆಯೂ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು. First Published on  Vistara New s.

Rajyasabha Election : ದ್ರೋಹ ಎಸಗಿದ ಸೋಮಶೇಖರ್‌ ವಿರುದ್ಧ ಸಿಡಿದ ಬಿಜೆಪಿ; ಪ್ರತಿಕೃತಿಗೆ ಬೆಂಕಿ, ಚಪ್ಪಲಿ ಏಟು

Image
  Rajyasabha Election : ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಎಸ್‌.ಟಿ. ಸೋಮಶೇಖರ್‌ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ ಆಕ್ರೋಶ ಭುಗಿಲೆದ್ದಿದೆ. ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಬೆಂಗಳೂರು:  ರಾಜ್ಯಸಭಾ ಚುನಾವಣೆಯಲ್ಲಿ ( Rajyasabha Election ) ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಮತ ಹಾಕದೆ ಕಾಂಗ್ರೆಸ್‌ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿದ ಮಾಜಿ ಸಚಿವ, ಯಶವಂತಪುರದ ಶಾಸಕ ಎಸ್‌.ಟಿ ಸೋಮಶೇಖರ್‌ (ST Somashekhar) ವಿರುದ್ಧ ಬಿಜೆಪಿ ಕಾರ್ಯಕರ್ತರ (BJP Activists protest) ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ಕಾರ್ಯಕರ್ತರು ಹಲವು ಕಡೆ ಅವರ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿದ್ದಲ್ಲದೆ, ಬೆಂಕಿ ಹಚ್ಚಿ ತಮ್ಮ ಸಿಟ್ಟನ್ನು ಪ್ರದರ್ಶಿಸಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ಯಶವಂತಪುರದಲ್ಲಿ ಬಿಜೆಪಿ ಕಚೇರಿಯ ಎದುರು, ಅವರ ಮನೆಯ ಹತ್ತಿರ ಮತ್ತು ಜೆಡಿಎಸ್‌ ಕಚೇರಿ ಜೆಪಿ ಭವನದ ಮುಂಭಾಗ ಪ್ರತಿಭಟನೆ ನಡೆದಿದೆ. ಜೆಡಿಎಸ್‌ ಕೂಡಾ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ‌ನಾಲ್ಕು ಸ್ಥಾನಗಳಿಗಾಗಿ ನಡೆದ ಚುನಾವಣೆಗೆ ಕಾಂಗ್ರೆಸ್‌ ಮೂವರು, ಬಿಜೆಪಿ ಒಬ್ಬರು ಮತ್ತು ಎನ್‌ಡಿಎ ಕಡೆಯಿಂದ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಲಾಗಿತ್ತು. ಬಿಜೆಪಿ ಶಾಸಕರಾಗಿರುವ ಎಸ್‌.ಟಿ ಸೋಮಶೇಖರ್‌ ಅವರು ಅಧಿಕೃತ ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಅವರಿಗೆ ಮತ ಹಾಕಲು ವಿಪ್‌ ಪಡೆದಿ...

Rajya Sabha Election: ನಾಳೆ ರಾಜ್ಯಸಭಾ ಕದನ; ಅಡ್ಡಮತದಾನ ಭೀತಿ, ಕೈಗೆ ಫಜೀತಿ! ಲೆಕ್ಕಾಚಾರ ಹೇಗೆ?

Image
  Rajya Sabha Election : ಶಾಸಕ ರಾಜವೆಂಕಟಪ್ಪ ನಾಯಕ ಅವರ ನಿಧನದಿಂದ ಈಗ ಕಾಂಗ್ರೆಸ್‌ ಸಂಖ್ಯಾಬಲ 134ಕ್ಕೆ ಇಳಿದಿದೆ. ಗೆಲ್ಲಲು 135 ಸೀಟುಗಳು ಬೇಕಿದೆ. ಇದು ಕೈಪಡೆ ಇಕ್ಕಟ್ಟಿಗೆ ಕಾರಣವಾಗಿದೆ. ಆದರೆ, ಪಕ್ಷೇತರ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ಹೇಳಿದ್ದರೂ ಅವರಿಗೆ ಈಗ ಡಿಮ್ಯಾಂಡ್‌ ಜಾಸ್ತಿ ಇದೆ. ಬೆಂಗಳೂರು:  ರಾಜ್ಯದಲ್ಲಿ ರಾಜ್ಯಸಭಾ ಕದನ ( Rajya Sabha Election ) ಕುತೂಹಲ ಕೆರಳಿಸಿದೆ. “ನಂಬರ್‌ ಗೇಮ್‌” ಆರಂಭವಾಗಿರುವ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳೂ ತಂತ್ರಗಾರಿಕೆಯಲ್ಲಿ ತೊಡಗಿವೆ. ಒಟ್ಟು ನಾಲ್ಕು ಸ್ಥಾನಕ್ಕೆ ಐವರು ಅಭ್ಯರ್ಥಿಗಳು ಇರುವುದರಿಂದ ಚುನಾವಣಾ ಕಣ ರೋಚಕವಾಗಿದೆ. ಈ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಕಾಂಗ್ರೆಸ್‌ ತನ್ನ ಶಾಸಕರನ್ನು (Congress MLAs) ರೆಸಾರ್ಟ್‌ಗೆ (Resort Politics) ಶಿಫ್ಟ್‌ ಮಾಡಲು ಪ್ಲ್ಯಾನ್‌ ಮಾಡಿದೆ. ಈ ಸಂಬಂಧ ಈಗಾಗಲೇ ಸೂಚನೆಯನ್ನೂ ನೀಡಿದೆ. ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮೂವರನ್ನು ಗೆಲ್ಲಿಸಿಕೊಂಡು ಬರಲು ಸ್ಪಷ್ಟ ಬಹುಮತ ಇತ್ತು. ಆದರೆ, ಭಾನುವಾರ ಶಾಸಕ ರಾಜವೆಂಕಟಪ್ಪ ನಾಯಕ ಅವರ ನಿಧನದಿಂದ ಈಗ ಕಾಂಗ್ರೆಸ್‌ ಸಂಖ್ಯಾಬಲ 134ಕ್ಕೆ ಇಳಿದಿದೆ. ಗೆಲ್ಲಲು 135 ಸೀಟುಗಳು ಬೇಕಿದೆ. ಇದು ಕೈಪಡೆ ಇಕ್ಕಟ್ಟಿಗೆ ಕಾರಣವಾಗಿದೆ. ಆದರೆ, ಪಕ್ಷೇತರ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ಹೇಳಿದ್ದರೂ ...

Rajya Sabha Election: ಸಿಎಂ, ಡಿಸಿಎಂ ಭೇಟಿ ಮಾಡಿದ ಜನಾರ್ದನ ರೆಡ್ಡಿ; ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ?

Image
  Rajya Sabha Election : ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈಗ ಅವರು ಕಾಂಗ್ರೆಸ್‌ ಪಾಳೆಯದಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಕರೆತರುವಲ್ಲಿ, ಅವರ ಬೆಂಬಲ ಪಡೆಯುವಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರು:  ರಾಜ್ಯಸಭಾ ಚುನಾವಣೆ ( Rajya Sabha Election ) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ತಂತ್ರಗಾರಿಕೆ ಜೋರಾಗಿದೆ. ಬಹುಮತ ಇರುವ ಕಾಂಗ್ರೆಸ್‌ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಈ ನಡುವೆ ಭಾನುವಾರ ತಮ್ಮ ಪಕ್ಷದ ಶಾಸಕ ರಾಜವೆಂಕಟಪ್ಪ ನಾಯಕ (Raja Venkatappa Nayaka) ಅವರ ನಿಧನ ಕೈಪಡೆಗೆ ತಲೆಬಿಸಿ ತಂದೊಡ್ಡಿದೆ. ಹೀಗಾಗಿ ಗೆಲ್ಲಲು ಇನ್ನೊಂದು ಮತದ ಅವಶ್ಯಕತೆ ಇದೆ. ಈ ನಡುವೆ ಅಡ್ಡ ಮತದಾನದ ಭೀತಿ ಇರುವುದರಿಂದ ಪಕ್ಷೇತರ ಶಾಸಕರತ್ತ ಕೈಪಡೆ ಕಣ್ಣಿಟ್ಟಿದೆ. ಇದರ ಭಾಗವಾಗಿ ಈ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಅವರನ್ನು ತನ್ನತ್ತ ಸೆಳೆದುಕೊಂಡಿತೇ ಎಂಬ ಅನುಮಾನ ಮೂಡಿದೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ರೆಡ್ಡಿ ಅವರು ಸಿಎಂ ನಿವಾಸ ಕಾವೇರಿಯಲ್ಲಿ ಸೋಮವಾರ ಭೇಟಿ ಮಾಡಿರುವುದು ಇದನ್ನು ಪುಷ್ಟೀಕರಿಸುತ್ತದೆ. ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಜನಾರ್...

Rajya Sabha Election: ಕೆಆರ್‌ಪಿಪಿ ಏಜೆಂಟ್‌ ಆಗಿ ಡಿಕೆಶಿ ಆಪ್ತ ಯೋಗೇಂದ್ರ ನೇಮಕ; ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ರೆಡ್ಡಿ ಬೆಂಬಲ

Image
  Rajya Sabha Election : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ ಅವರು ಯೋಗೇಂದ್ರ ವಿಕ್ರಂ ಅವರನ್ನು ತಮ್ಮ ಪಕ್ಷದ ಪರವಾಗಿ ಚುನಾವಣೆ ಏಜೆಂಟ್ ಆಗಿ ನೇಮಕ ಮಾಡಿದ್ದಾರೆ. ಬೆಂಗಳೂರು:  ವಿಧಾನಸಭೆಯಿಂದ ರಾಜ್ಯಸಭೆಗೆ ಮಂಗಳವಾರ (ಫೆ. 27) ನಡೆಯಲಿರುವ ಚುನಾವಣೆ ( Rajya Sabha Election ) ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ (Janardhana Reddy) ಅವರು ಯೋಗೇಂದ್ರ ವಿಕ್ರಂ (Yogendra Vikram) ಅವರನ್ನು ಚುನಾವಣೆ ಏಜೆಂಟ್ ಆಗಿ ನೇಮಕ ಮಾಡಿದ್ದಾರೆ. ಇವರು ಡಿಸಿಎಂ ಡಿ.ಕೆ. ಶಿವಕುಮಾರ್‌ ಆಪ್ತರಾಗಿದ್ದಾರೆ. ಹೀಗಾಗಿ ರೆಡ್ಡಿ ಮತ ಕಾಂಗ್ರೆಸ್‌ಗೆ ಖಚಿತ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ವಿಕ್ರಂ ಅವರು ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ಸೋಮವಾರ ಪತ್ರ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವ ಶಿವರಾಜ್ ತಂಗಡಗಿ ಉಪಸ್ಥಿತರಿದ್ದರು. ರಾಜ್ಯಸಭಾ ಚುನಾವಣೆ (Rajya Sabha Election) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ತಂತ್ರಗಾರಿಕೆ ಜೋರಾಗಿದೆ. ಬಹುಮತ ಇರುವ ಕಾಂಗ್ರೆಸ್‌ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯನ್ನು ತಮ್ಮತ್ತ ಸೆಳೆದುಕೊಂಡಿದ್ದು, ಪಕ್ಷದ ಅಭ್ಯರ್ಥಿ ಪರ ಮತ ಹಾಕಿಸಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿ...

Karnataka Politics: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿಯ ‘ನಿರ್ಣಯ’ ಕದನ; ಅಶೋಕ್‌ ಬಿಟ್ಟ ಅನುದಾನದ ಬಾಣ

Image
  Karnataka Politics : ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ರಾಜ್ಯಕ್ಕೆ ಬಂದಿದೆ. ರೈಲ್ವೆ, ಗ್ರಾಮೀಣಾಭಿವೃದ್ಧಿ, ವಿಮಾನ ನಿಲ್ದಾಣ, ಹೆದ್ದಾರಿ ಸೇರಿದಂತೆ ಅನೇಕ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉತ್ತಮ ಅನುದಾನ ನೀಡಿದೆ. ಇದಕ್ಕಾಗಿ ಅಭಿನಂದನೆ ಸಲ್ಲಿಸಿ ನಿರ್ಣಯ ಮಂಡಿಸಲಾಗಿದೆ ಎಂದು ಆರ್.‌ ಅಶೋಕ್‌ ಹೇಳಿದ್ದಾರೆ. ಬೆಂಗಳೂರು:  ರಾಜ್ಯ ರಾಜಕೀಯದಲ್ಲಿ ( Karnataka Politics ) ಈಗ ಅನುದಾನ ತಾರತಮ್ಯಕ್ಕೆ ಸಂಬಂಧಪಟ್ಟಂತೆ ಕದನ ಶುರುವಾಗಿದೆ. ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮಂಡಿಸಿದ ನಿರ್ಣಯಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರದಿಂದ ಬಂದಂತಹ ಅನುದಾನದ ಲೆಕ್ಕ ಸಹಿತ ತನ್ನ “ನಿರ್ಣಯ”ವನ್ನು ಮಂಡಿಸಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರ ಕಿವಿಮಾತನ್ನೂ ಹೇಳಿದೆ. ಈ ಸಂಬಂಧ ವಿಧಾನಸಭೆಯಲ್ಲಿ ಬಿಜೆಪಿ ವತಿಯಿಂದ ನಿರ್ಣಯ ಮಂಡನೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashok), ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ಬಂದಿದ್ದು, ಈ ಕುರಿತು ಅಭಿನಂದನೆ ಸಲ್ಲಿಸಿ ನಿರ್ಣಯ ಕೈಗೊಳ್ಳಲಾಗಿದೆ. ಜತೆಗೆ ಕೇಂದ್ರವನ್ನು ದೂಷಿಸುವ ಪ್ರವೃತ್ತಿಯನ್ನು ಕೈ ಬಿಡಬೇಕೆಂದು ಒತ್ತಾಯಿಸಲಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾ...

Karnataka Budget Session 2024: ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ; ದಂಡದ ಪ್ರಮಾಣ ಶೇ.50 ಕಡಿತ

Image
  Karnataka Budget Session 2024 : ಈ ವಿಧೇಯಕ ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. 2020ರಲ್ಲಿ ಬಿಜೆಪಿ ಸರ್ಕಾರ ತಿಳಿಯದೇ ಮಾಡಿದ್ದ ತಪ್ಪಿನಿಂದ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹೆಚ್ಚಾಗುತ್ತಿತ್ತು. ನಮ್ಮ ಸರ್ಕಾರ ಈ ಭಾರವನ್ನು ಇಳಿಸಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರು:  ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ (Property Tax) ಮೇಲಿನ ದಂಡದ ಪ್ರಮಾಣ ಶೇಕಡಾ 50ರಷ್ಟು ಕಡಿತ ಸೇರಿದಂತೆ ಜನಸ್ನೇಹಿ ಬಿಬಿಎಂಪಿ (ತಿದ್ದುಪಡಿ) ವಿಧೇಯಕ 2024 ( Property Tax Amendment Bill 2024 ) ಅನ್ನು ವಿಧಾನ ಪರಿಷತ್ತಿನಲ್ಲಿ ಗುರುವಾರ ಅಂಗೀಕರಿಸಲಾಯಿತು. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಮಾತನಾಡಿ, ಈ ವಿಧೇಯಕ ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. 2020ರಲ್ಲಿ ಬಿಜೆಪಿ ಸರ್ಕಾರ ತಿಳಿಯದೇ ಮಾಡಿದ್ದ ತಪ್ಪಿನಿಂದ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹೆಚ್ಚಾಗುತ್ತಿತ್ತು. ನಮ್ಮ ಸರ್ಕಾರ ಈ ಭಾರವನ್ನು ಇಳಿಸಿದೆ ಎಂದು ಹೇಳಿದರು. ಆಸ್ತಿ ತೆರಿಗೆ ತಕರಾರು ಇದ್ದವರು ಈ ಮೊದಲು ಟ್ರಿಬ್ಯುನಲ್ ಅಥವಾ ಹೈಕೋರ್ಟ್‌ಗೆ ಹೋಗಬೇಕಿತ್ತು. ಈ ತೊಂದರೆಯನ್ನು ತಪ್ಪಿಸಲು ಮೇಲ್ಮನವಿ ಸಮಿತಿ ರಚಿಸಿದ್ದು, ಜನರು ಕೋರ್ಟ್‌ಗೆ ಅಲೆಯುವುದು ತಪ್ಪಲಿದೆ...

C J Chandrachud : ಯೋಗ, ಸಸ್ಯಾಹಾರ; ಒತ್ತಡ ನಿವಾರಣೆ ತಂತ್ರ ವಿವರಿಸಿದ ಸುಪ್ರಿಂ ಕೋರ್ಟ್​​ ಮುಖ್ಯ​ ನ್ಯಾಯಮೂರ್ತಿ

Image
  DY Chandrachud : ಚಂದ್ರಚೂಡ್​ ಅವರು ಆಯುಷ್​ ಸಮಗ್ರ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಸಸ್ಯಾಹಾರ ಹಾಗೂ ಯೋಗಕ್ಕೆ ಒತ್ತು ನೀಡುವಂತೆ ಕರೆಕೊಟ್ಟರು. ನವದೆಹಲಿ:  ಪ್ರತಿ ನಿತ್ಯ ಮುಂಜಾನೆ 3:30ಕ್ಕೆ ಎದ್ದು ಕಠಿಣ ಯೋಗ ಮಾಡಿ ಮತ್ತು ಸಸ್ಯ ಜನ್ಯ ಆಹಾರವನ್ನೇ ಸೇವಿಸಿ. ಇದರಿಂದ ಕಾರ್ಯದೊತ್ತಡ ನಿರ್ವಹಿಸಬಹುದು. ಹೀಗೆಂದವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​​ (C J Chandrachud) . ತಮ್ಮ ಸಹೋದ್ಯೋಗಿಗಳು ಸೇರಿದಂತೆ ದೇಶದೆಲ್ಲೆಡೆ ಜನರು ಎದುರಿಸುತ್ತಿರುವ ಕೆಲಸ ಸಂಬಂಧಿತ ಒತ್ತಡವನ್ನು ನಿಭಾಯಿಸಲು ಸಮಗ್ರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ಕೊಟ್ಟಿದ್ದಾರೆ. ಅದಕ್ಕವರು ತಮ್ಮದೇ ಉದಾಹಣೆಯನ್ನು ತೆಗೆದುಕೊಂಡಿದ್ದಾರೆ. ಇಂದು ಸುಪ್ರೀಂ ಕೋರ್ಟ್​​ನಲ್ಲಿ ಆಯುಷ್ ಸಮಗ್ರ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿದ ಮುಖ್ಯ ನ್ಯಾಯಮೂರ್ತಿಗಳು, ಇಂತಹ ಅಭ್ಯಾಸಗಳ ಮಹತ್ವವು ನ್ಯಾಯಾಧೀಶರು ಮತ್ತು ಅವರ ಕುಟುಂಬಗಳಿಗೆ ಮಾತ್ರವಲ್ಲ, ಇಡೀ ಸುಪ್ರೀಂ ಕೋರ್ಟ್ ಸಿಬ್ಬಂದಿಯ ಯೋಗಕ್ಷೇಮಕ್ಕೂ ಒಳ್ಳೆಯದು ಎಂದು ಹೇಳಿದ್ದಾರೆ. ನಾನು ನಿತ್ಯ ಯೋಗಾಭ್ಯಾಸ ಮಾಡುತ್ತೇನೆ. ಯೋಗ ಮಾಡಲು ಇಂದು ಮುಂಜಾನೆ 3: 30 ಕ್ಕೆ ಏಳುತ್ತೇನೆ. ಹೆಚ್ಚುವರಿಯಾಗಿ ನಾನು ಕಳೆದ 5 ತಿಂಗಳುಗಳಿಂದ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿದ್ದೇನೆ. ನಾನು ಜೀವನ ಶೈಲಿಯ ಸಮಗ್ರ ಮಾದರಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದೇನೆ. ಅದು ನೀವು ಏನು ತಿನ್...

Kannada Name Board : ಕನ್ನಡ ನಾಮಫಲಕ ನಿಯಮ ಜಾರಿ ಆಗ್ಲೇಬೇಕು; ಸಚಿವ ತಂಗಡಗಿ ಆದೇಶ

Image
  Kannada Name Board : ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯ ನಿಯಮ ಜಾರಿಗೆ ಸರಿಯಾದ ಕ್ರಮ ಕೈಗೊಳ್ಳುವಂತೆ ಸಚಿವ ಶಿವರಾಜ್‌ ತಂಗಡಗಿ ಸೂಚಿಸಿದರು. ಬಿಬಿಎಂಪಿ ಆಯುಕ್ತರು ಪಾಲಿಕೆಯ ಪ್ಲ್ಯಾನ್‌ ವಿವರಿಸಿದರು. ಬೆಂಗಳೂರು:  ಬೆಂಗಳೂರಿನ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ (Kannada Name board) ಶೇ.60ರಷ್ಟು ಕನ್ನಡ ಕಡ್ಡಾಯವಾಗಿ ಬಳಸುವ ಸಂಬಂದ ಕ್ರಮ ಕೈಗೊಳ್ಳುವಂತೆ ಪಾಲಿಕೆ‌ ಆಯುಕ್ತರಿಗೆ (BBMP Commissioner) ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾ ಣ ಇಲಾಖೆ‌ ಸಚಿವ ಶಿವರಾಜ್ ತಂಗಡಗಿ (Minister Shivaraja Tangadagi) ಅವರು ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ಬಿಬಿಎಂಪಿ‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾಧಿಕಾರಿಗಳ ಸಭೆ ನಡೆಸಿ ಅವರು ಈ ಸೂಚನೆ ನೀಡಿದರು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯ ಮಾಡಲಾಗಿದ್ದು, ಇದನ್ನು ಅಳವಡಿಸಲು ಫೆ.28 ಕೊನೆಯ ದಿನವಾಗಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಅವರು ತಿಳಿಸಿದ್ದಾರೆ. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಳವಡಿಕೆ ವಿಚಾರದಲ್ಲಿ ಬಿಬಿಎಂಪ...

Karnataka Budget Session 2024: ಅನಧಿಕೃತ ಹುಕ್ಕಾಬಾರ್‌ ತೆರೆದ್ರೆ 3 ವರ್ಷ ಜೈಲು; ಮಸೂದೆ ಪಾಸ್

Image
  Karnataka Budget Session 2024 : ಹುಕ್ಕಾ ಬಾರ್ (Hookah Bar) ಅನ್ನು ಅನಧಿಕೃತ ನಡೆಸಿದರೆ ಒಂದರಿಂದ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಇಂಥದ್ದೊಂದು ವಿಧೇಯಕವನ್ನು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಬೆಂಗಳೂರು :  ಧೂಮಪಾನ ಪ್ರಿಯರಿಗೆ ಸರ್ಕಾರ ಶಾಕ್‌ ಕೊಟ್ಟಿದೆ. ಇನ್ನು ಮುಂದೆ ಕಂಡ ಕಂಡಲ್ಲಿ ಸಿಗರೇಟ್‌ ಸೇದುವಂತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಹೊಗೆ ಬಿಟ್ಟರೆ, ಅಂಥವರ ಜೇಬು ಸುಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದಿದರೆ (Smoking Cigarette) 1 ಸಾವಿರ ರೂಪಾಯಿ ದಂಡ ಪಾವತಿ ಮಾಡಬೇಕಿದೆ. ಅಲ್ಲದೆ, ಹುಕ್ಕಾ ಬಾರ್ (Hookah Bar) ಅನ್ನು ಅನಧಿಕೃತ ನಡೆಸಿದರೆ ಒಂದರಿಂದ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಇಂಥದ್ದೊಂದು ವಿಧೇಯಕವನ್ನು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ಈ ವಿಧೇಯಕವನ್ನು ಮಂಡಿಸಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 2024ರ ಸಿಗರೇಟ್ ಸೇವನೆ ಮತ್ತು ಜಾಹೀರಾತು ನಿಷೇಧ.. ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ ಮತ್ತು ಸರಬರಾಜು ತಿದ್ದುಪಡಿ ವಿಧೇಯಕವನ್ನು ಮಂಡನೆ ಮಾಡಿದರು. ಈ ವೇಳೆ ಮಾತನಾಡಿದ ಸಚಿವ ದಿನೇಶ್‌ ಗ...

Karnataka Budget Session 2024: 110 ಹಳ್ಳಿಗಳಿಗೆ ಮೇಯೊಳಗೆ ಕುಡಿಯಲು ಕಾವೇರಿ ನೀರು: ಡಿ.ಕೆ.ಶಿವಕುಮಾರ್

Image
  Karnataka Budget Session 2024 : ಬೆಂಗಳೂರಿನ ಕುಡಿಯುವ ನೀರನ್ನು ಮುಂದಿನ ಮೇ ತಿಂಗಳಲ್ಲಿ ಪೂರೈಸಲಾಗುವುದು. ಆದರೆ‌, ಸೀವೇಜ್ ಪ್ಲಾಂಟ್ ಸೇರಿದಂತೆ ಇತರೆ ಕಾಮಗಾರಿಗಳು ಪೂರ್ಣಗೊಳ್ಳಲು 2 ವರ್ಷಗಳು ಬೇಕಾಗಬಹುದು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಬೆಂಗಳೂರು:  ವಿಧಾನ ಮಂಡಲ ಅಧಿವೇಶನದಲ್ಲಿ ( Karnataka Budget Session 2024 ) ಬೆಂಗಳೂರಿನ ಹೊರ ವಲಯಕ್ಕೆ ಕಾವೇರಿ ನೀರನ್ನು ತರುವ ಬಗ್ಗೆ ಚರ್ಚೆಯಾಗಿದೆ. ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಮತ್ತಷ್ಟು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಮುಂದೆ ಸಾಗುತ್ತಿದೆ. ಹೀಗಾಗಿ ಇಲ್ಲಿ ಕೆಲವು ಕಡೆ ಮೂಲಭೂತ ಸೌಕರ್ಯಗಳು ಆಗಬೇಕಿದೆ. ಬಹುಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಹ ಕಾರ್ಯೋನ್ಮುಖವಾಗಿದೆ. ಬೆಂಗಳೂರು ಹೊರವಲಯದ 110 ಹಳ್ಳಿಗಳಿಗೆ ಮೇ ವೇಳೆಗೆ ಕುಡಿಯಲು ಕಾವೇರಿ ನೀರು ಪೂರೈಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, “ಕುಡಿಯುವ ನೀರನ್ನು ಮುಂದಿನ ಮೇ ತಿಂಗಳಲ್ಲಿ ಪೂರೈಸಲಾಗುವುದು. ಆದರೆ‌, ಸೀವೇಜ್ ಪ್ಲಾಂಟ್ ಸೇರಿದಂತೆ ಇತರೆ ಕಾಮಗಾರಿಗಳು ಪೂರ್ಣಗೊಳ್ಳಲು 2 ವರ್ಷಗಳು ಬೇಕಾಗಬಹುದು” ಎಂದು ತಿಳಿಸಿದರು. F...

Karnataka Budget Session 2024: ಸದನದಲ್ಲಿ ರಾಮನಗರ ಗದ್ದಲ; ಪಿಎಸ್‌ಐ ಸಸ್ಪೆಂಡ್‌ಗೆ ಬಿಜೆಪಿ – ಜೆಡಿಎಸ್‌ ಪಟ್ಟು!

Image
  Karnataka Budget Session 2024 : ರಾಮನಗರ ಗಲಾಟೆಗೆ ಸಂಬಂಧಪಟ್ಟಂತೆ ಲಾಯರ್‌ಗಳ ಚೇಂಬರ್‌ಗೆ ಕೆಲವರು ನುಗ್ಗಿ ಗಲಾಟೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲು ಮಾಡದ ಪೊಲೀಸರು, ವಕೀಲರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಹೀಗಾಗಿ ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಪಿಎಸ್‌ಐಯನ್ನು ವಜಾ ಮಾಡಿ ಎಂದು ಆಗ್ರಹಿಸಿದರು. ಇದಕ್ಕೆ ಗೃಹ ಸಚಿವರಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದು ಆಕ್ರೋಶಗೊಂಡು ಸದನದ ಬಾವಿಗಿಳಿದು ಪ್ರತಿಭಟನೆಯನ್ನು ನಡೆಸಲಾಗಿದೆ. ಬೆಂಗಳೂರು:  ವಿಧಾನ ಮಂಡಲ ಅಧಿವೇಶನದ ( Karnataka Budget Session 2024 ) ಶೂನ್ಯ ವೇಳೆಯಲ್ಲಿ ರಾಮನಗರ ವಿಚಾರ ಪ್ರಸ್ತಾಪವಾಗಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್ (R Ashok) ಅವರು ಈ ವಿಷಯವನ್ನು ಪ್ರಸ್ತಾಪ ಮಾಡಿ, ರಾಮನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸೂಕ್ಷ್ಮ ಪ್ರದೇಶವಾಗಿದೆ. ಈ ವಿಚಾರವಾಗಿ ಚಾಂದ್‌ ಪಾಶ ಎಂಬ ವ್ಯಕ್ತಿ ಸೋಷಿಯಲ್‌ ಮೀಡಿಯಾದಲ್ಲಿ ಜಡ್ಜ್‌ ಬಗ್ಗೆಯೇ ಅವಹೇಳನಕಾರಿಯಾಗಿ ಬರೆದಿದ್ದರಿಂದ ದೂರು ಕೊಡಲಾಗಿತ್ತು. ಆದರೆ, ಲಾಯರ್‌ಗಳ ಚೇಂಬರ್‌ಗೆ ಕೆಲವರು ನುಗ್ಗಿ ಗಲಾಟೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲು ಮಾಡದ ಪೊಲೀಸರು, ವಕೀಲರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಹೀಗಾಗಿ ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಪಿಎಸ್‌ಐಯನ್ನು ವಜಾ ಮಾಡಿ ಎಂದು ಆಗ್ರಹಿಸಿದರು. ಇದಕ್ಕೆ ಗೃಹ ಸಚಿವರಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂ...

Karnataka Budget Session 2024 : ಸರ್ಕಾರದಿಂದ ರೈತರಿಗೆ ಮೋಸ; ಟಿ. ಎ. ಶರವಣ ಆರೋಪ

Image
  Karnataka Budget Session 2024 : ಸರ್ಕಾರ ಕೇವಲ 2 ಸಾವಿರ ರೂಪಾಯಿ ಪರಿಹಾರ ನೀಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದೆ ಎಂದು ಶರವಣ ಅವರು ಆರೋಪಿಸಿದ್ದಾರೆ. ಬೆಂಗಳೂರು:  ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ಕಾಂಗ್ರೆಸ್​ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ವಿಧಾನ ಪರಿಷತ್​ ಸದಸ್ಯ ಟಿ. ಎ. ಶರವಣ ಆರೋಪಿಸಿದ್ದಾರೆ. ವಿಧಾನಪರಿಷತ್​ ಕಲಾಪದಲ್ಲಿ ( Karnataka Budget Session 2024 ) ಮಾತನಾಡಿದ ಅವರು, ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ಧನ ನೀಡದಿರುವ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಸಚಿವರ ಕ್ರಮವನ್ನು ಪ್ರಶ್ನಿಸಿದರು. ಸರಕಾರ ಕೊಟ್ಟಿರುವ ಉತ್ತರದಲ್ಲಿ ಒಂದೊಂದು ಎಕರೆಗೆ ಒಂದೊಂದು ದರ ನಿಗದಿ ಮಾಡಲಾಗಿದೆ. 5, 11, 208 ಎಕರೆ ಪ್ರದೇಶದ ಇಡೀ ತೋಟಗಾರಿಕೆ ಬೆಳೆ ನಾಶ ಆಗಿದೆ. ಆದರೆ ಸರ್ಕಾರ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಎನ್.ಡಿ.ಆರ್.ಆಫ್ ನಿಗದಿ ಮಾಡಿರುವ ರೀತಿಯಲ್ಲಿ ಮಳೆಯಾಶ್ರಿತ ತೋಟಗಾರಿಕೆ ಬೆಳೆಗೆ 8,500 ರೂಪಾಯಿ, ನೀರಾವರಿ ಬೆಳೆಗೆ 17 ಸಾವಿರ, ಬಹುವಾರ್ಷಿಕ ಬೆಳೆಗೆ 22500 ರೂಪಾಯಿ ಪರಿಹಾರ ನೀಡಬೇಕಾಗಿದೆ. ಆದರೆ ಸರ್ಕಾರ ರೈತರಿಗೆ ಭಿಕ್ಷೆ ಎಂಬಂತೆ ಕೇವಲ ಒಬ್ಬೊಬ್ಬರಿಗೆ 2 ಸಾವಿರ ರೂಪಾಯಿ ನೀಡಿದೆ. ಈ ಮೂಲಕ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಭಾಗ್ಯಗಳನ್ನು ನೀಡುವ ಮೂಲಕ ಸರ್ಕಾರದ ಬೊಕ್ಕಸದ ಹಣವನ್ನು ಖಾಲಿ ಮಾಡಲಾಗಿದೆ. ರೈತ...

Karnataka Budget 2024: ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಮಂಡನೆ; ನಾಮನಿರ್ದೇಶನ ಸಂಖ್ಯೆ 3ಕ್ಕೆ ಹೆಚ್ಚಳ

Image
  Karnataka Budget 2024 : ಸಹಕಾರಿ ಸಂಘಗಳಲ್ಲಿ ಸರ್ಕಾರ ಮಾಡುವ ನಾಮನಿರ್ದೇಶನಗಳ ಸಂಖ್ಯೆಯನ್ನು 3ಕ್ಕೆ ಹೆಚ್ಚಳ ಮಾಡಲು ತಿದ್ದುಪಡಿ ಮಾಡಲಾಗಿದೆ. ಪ್ರಾಥಮಿಕ, ಮಾಧ್ಯಮಿಕ, ಫೆಡರಲ್ ಹಾಗೂ ಅಪೆಕ್ಸ್ ಬ್ಯಾಂಕ್‌ಗಳಲ್ಲಿ ಪ್ರಾತಿನಿಧ್ಯ ಇಲ್ಲದ ವರ್ಗಗಳಿಗೆ ಪ್ರಾತಿನಿಧ್ಯ ಒದಗಿಸುವ ಉದ್ದೇಶವನ್ನು ಈ ವಿಧೇಯಕ ಹೊಂದಿದೆ. ಅಲ್ಲದೆ, ಅನಗತ್ಯ ವೆಚ್ಚ ಕಡಿತಕ್ಕಾಗಿ ಸಹಕಾರ ಚುನಾವಣಾ ಪ್ರಾಧಿಕಾರವನ್ನು ರದ್ದು ಮಾಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರು:  ಸುದೀರ್ಘ ಚರ್ಚೆಯ ಬಳಿಕ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ-2024 (Karnataka Co-operative Societies (Amendment) Bill 2024) ಅಂಗೀಕಾರವಾಗಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಮಂಡಿಸಿದ್ದ ಬಿಲ್ ಇದಾಗಿತ್ತು. ಈ ವೇಳೆ ನಿಯಮಗಳನ್ನು ‌ಮಾಡುವಾಗ ಕೆಲವೊಂದು ತಿದ್ದುಪಡಿ ಮಾಡುವಂತೆ ಸದನದಲ್ಲಿ ( Karnataka Budget 2024 ) ಸಲಹೆಗಳು ಕೇಳಿಬಂದವು. ಅದಕ್ಕೆ ಪ್ರತಿಕ್ರಿಯೆ ನೀಡಿದ ರಾಜಣ್ಣ, ಸಲಹೆಗಳೊಂದಿಗೆ ಪರಿಷ್ಕರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿಧೇಯಕವನ್ನು ಅಂಗೀಕಾರ ಮಾಡಲಾಯಿತು. ಸಹಕಾರಿ ಸಂಘಗಳಲ್ಲಿ ಸರ್ಕಾರ ಮಾಡುವ ನಾಮನಿರ್ದೇಶನಗಳ ಸಂಖ್ಯೆಯನ್ನು 3ಕ್ಕೆ ಹೆಚ್ಚಳ ಮಾಡಲು ತಿದ್ದುಪಡಿ ಮಾಡಲಾಗಿದೆ. ಪ್ರಾಥಮಿಕ, ಮಾಧ್ಯಮಿಕ, ಫೆಡರಲ್ ಹಾಗೂ ಅಪೆಕ್ಸ್ ಬ್ಯಾಂಕ್‌ಗಳಲ್ಲಿ ಪ್ರಾತಿನಿಧ್ಯ ಇಲ್ಲದ ವರ್ಗಗಳಿಗೆ ಪ್ರಾತಿನಿಧ್ಯ ಒದಗಿಸುವ ಉದ್ದ...

Budget Session : ನಮ್ಮ ಪಾಲು ಕೇಳೋದು ತಪ್ಪಾ, ಮೋದಿ ಸಿಎಂ ಆಗಿದ್ದಾಗ ಕೇಳಿಲ್ವಾ?; ಸಿದ್ದರಾಮಯ್ಯ

Image
  Budget Session : ನರೇಂದ್ರ ಮೋದಿ ಅವರೇ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಕ್ಕೆ 50% ಪಾಲು ಕೊಡಬೇಕು ಎಂದು ಕೇಳಿದ್ದರು. ಈಗ ಅವರು ಕೊಡಬೇಕಲ್ವಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು:  ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ಪಾಲನ್ನು ಕೇಳುವುದು ತಪ್ಪಾ? (Is Asking for Share is wrong?) ನರೇಂದ್ರ ಮೋದಿ (PM Narendra Modi) ಅವರು ಮುಖ್ಯಮಂತ್ರಿಯಾಗಿದ್ದಾಗ ಶೇ. 50ರಷ್ಟು ತೆರಿಗೆ ಪಾಲು ರಾಜ್ಯಕ್ಕೆ ವಾಪಾಸ್ ಕೊಡಿ ಎಂದು ಕೇಂದ್ರವನ್ನು ಕೇಳಿರಲಿಲ್ಲವೇ? ಈ ನಾವು ಕೇಳಿದರೆ ತಪ್ಪು ಹೇಗಾಗುತ್ತದೆ? – ಹೀಗೊಂದು ನೇರ ಪ್ರಶ್ನೆ ಕೇಳಿದ್ದಾರೆ ಸಿಎಂ ಸಿದ್ದರಾಮಯ್ಯ ( CM Siddaramaiah ). ವಿಧಾನಸಭೆಯಲ್ಲಿ ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ (Budget Session) ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶೇ 50ರಷ್ಟು ತೆರಿಗೆ ಪಾಲು ರಾಜ್ಯಕ್ಕೆ ವಾಪಸ್ ಕೊಡಿ ಎಂದು ಕೇಳಿದ್ದರು. ಈಗ ನಾವು ಕಟ್ಟುವ ಪ್ರತಿ ನೂರು ರೂಗೆ 12-13 ರೂ ಮಾತ್ರ ವಾಪಸ್ ಬರುತ್ತಿದೆ. ಇದು ಅವರಿಗೆ ಅರ್ಥವಾಗುತ್ತಿಲ್ಲವೇ? ಈ ಅನ್ಯಾಯಗಳ ಬಗ್ಗೆ ನಮ್ಮ ಸಂಸದರು ಬಾಯಿಯನ್ನೇ ಬಿಡುವುದಿಲ್ಲ. ಗಡಗಡ ನಡುಗುತ್ತಾರೆ ಎಂದು ವ್ಯಂಗ್ಯವಾಡಿದರು. ನಮ್ಮದು Good Economics ಎಂದ ಸಿದ್ದರಾಮಯ್ಯ ಶ್ರೀಮಂತರಿಂದ ತೆರಿಗೆಯನ್ನು ಕಾನೂನು ರೀತಿ ಸಂಗ್ರಹಿಸಿ, ಬಡವರಿಗೆ ಆರ್ಥಿಕ , ಸಾಮಾಜಿಕ ಶಕ್ತಿ...

Karnataka Budget Session 2024: ಕೇಂದ್ರದಿಂದ ಅನ್ಯಾಯ ಆಗಿದೆಯೇ? ಬಹಿರಂಗ ಚರ್ಚೆಗೆ ಬನ್ನಿ: ಸಿಎಂಗೆ ಎಚ್‌ಡಿಕೆ ಸವಾಲು

Image
  Karnataka Budget Session 2024 : ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂದಾದರೆ ಬಹಿರಂಗ ಚರ್ಚೆ ಮಾಡೋಣ. ಅಲ್ಲಿಗೆ ಆರ್ಥಿಕ ತಜ್ಞರು, ಮಾಧ್ಯಮಗಳು, ಸಾರ್ವಜನಿಕರು ಬರಲಿ. ಎಲ್ಲರ ಮುಂದೆ ಮುಂದೆ ಚರ್ಚೆ ನಡೆಸೋಣ. ಅನ್ಯಾಯ ಎಂದಾದರೆ ರಾಜ್ಯಸಭೆಯಲ್ಲಿ ಎಚ್.ಡಿ. ದೇವೇಗೌಡ ಅವರು ಮಾತನಾಡುತ್ತಿದ್ದಾಗ ನಿಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾಕೆ ಸುಮ್ಮನಿದ್ದರು? ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಬೆಂಗಳೂರು:  ತೆರಿಗೆ, ಅನುದಾನ ತಾರತಮ್ಯದ ಬಗ್ಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರಂತರ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನ ಮಂಡಲ ಅಧಿವೇಶನದಲ್ಲಿ ( Karnataka Budget Session 2024 ) ನೇರ ಸವಾಲು ಹಾಕಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು ಎಚ್.ಡಿ. ಕುಮಾರಸ್ವಾಮಿ, ರಾಷ್ಟ್ರದ ಹಿರಿಯ, ನುರಿತ ಆರ್ಥಿಕ ತಜ್ಞರನ್ನು, ಮಾಧ್ಯಮಗಳನ್ನು ಕರೆಸಿ ಎಲ್ಲರ ಎದುರು ಬಹಿರಂಗ ಚರ್ಚೆ ಮಾಡೋಣ ಬನ್ನಿ. ಕೇಂದ್ರದಿಂದ ಅನ್ಯಾಯ ಆಗುತ್ತಿದೆ ಎಂದು ನೀವು ನಿರೂಪಿಸಿದರೆ ನಿಮ್ಮ ಜತೆ ನಾವೂ ದನಿ ಎತ್ತುತ್ತೇವೆ. ನಿಮ್ಮಲ್ಲಿರುವ ಮಾಹಿತಿಯನ್ನು ನಾಡಿನ ಮುಂದೆ ಇಡಿ. ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಸವಾಲು ಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಾವೇಷದಿಂದ ಸದನದ ...