Rajya Sabha Election: ನಾಳೆ ರಾಜ್ಯಸಭಾ ಕದನ; ಅಡ್ಡಮತದಾನ ಭೀತಿ, ಕೈಗೆ ಫಜೀತಿ! ಲೆಕ್ಕಾಚಾರ ಹೇಗೆ?

 Rajya Sabha Election: ಶಾಸಕ ರಾಜವೆಂಕಟಪ್ಪ ನಾಯಕ ಅವರ ನಿಧನದಿಂದ ಈಗ ಕಾಂಗ್ರೆಸ್‌ ಸಂಖ್ಯಾಬಲ 134ಕ್ಕೆ ಇಳಿದಿದೆ. ಗೆಲ್ಲಲು 135 ಸೀಟುಗಳು ಬೇಕಿದೆ. ಇದು ಕೈಪಡೆ ಇಕ್ಕಟ್ಟಿಗೆ ಕಾರಣವಾಗಿದೆ. ಆದರೆ, ಪಕ್ಷೇತರ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ಹೇಳಿದ್ದರೂ ಅವರಿಗೆ ಈಗ ಡಿಮ್ಯಾಂಡ್‌ ಜಾಸ್ತಿ ಇದೆ.


ಬೆಂಗಳೂರು: ರಾಜ್ಯದಲ್ಲಿ ರಾಜ್ಯಸಭಾ ಕದನ (Rajya Sabha Election) ಕುತೂಹಲ ಕೆರಳಿಸಿದೆ. “ನಂಬರ್‌ ಗೇಮ್‌” ಆರಂಭವಾಗಿರುವ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳೂ ತಂತ್ರಗಾರಿಕೆಯಲ್ಲಿ ತೊಡಗಿವೆ. ಒಟ್ಟು ನಾಲ್ಕು ಸ್ಥಾನಕ್ಕೆ ಐವರು ಅಭ್ಯರ್ಥಿಗಳು ಇರುವುದರಿಂದ ಚುನಾವಣಾ ಕಣ ರೋಚಕವಾಗಿದೆ. ಈ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಕಾಂಗ್ರೆಸ್‌ ತನ್ನ ಶಾಸಕರನ್ನು (Congress MLAs) ರೆಸಾರ್ಟ್‌ಗೆ (Resort Politics) ಶಿಫ್ಟ್‌ ಮಾಡಲು ಪ್ಲ್ಯಾನ್‌ ಮಾಡಿದೆ. ಈ ಸಂಬಂಧ ಈಗಾಗಲೇ ಸೂಚನೆಯನ್ನೂ ನೀಡಿದೆ.

ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮೂವರನ್ನು ಗೆಲ್ಲಿಸಿಕೊಂಡು ಬರಲು ಸ್ಪಷ್ಟ ಬಹುಮತ ಇತ್ತು. ಆದರೆ, ಭಾನುವಾರ ಶಾಸಕ ರಾಜವೆಂಕಟಪ್ಪ ನಾಯಕ ಅವರ ನಿಧನದಿಂದ ಈಗ ಕಾಂಗ್ರೆಸ್‌ ಸಂಖ್ಯಾಬಲ 134ಕ್ಕೆ ಇಳಿದಿದೆ. ಗೆಲ್ಲಲು 135 ಸೀಟುಗಳು ಬೇಕಿದೆ. ಇದು ಕೈಪಡೆ ಇಕ್ಕಟ್ಟಿಗೆ ಕಾರಣವಾಗಿದೆ. ಆದರೆ, ಪಕ್ಷೇತರ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ಹೇಳಿದ್ದರೂ ಅವರಿಗೆ ಈಗ ಡಿಮ್ಯಾಂಡ್‌ ಜಾಸ್ತಿ ಇದೆ.

First Published on Vistara News.

Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!