C J Chandrachud : ಯೋಗ, ಸಸ್ಯಾಹಾರ; ಒತ್ತಡ ನಿವಾರಣೆ ತಂತ್ರ ವಿವರಿಸಿದ ಸುಪ್ರಿಂ ಕೋರ್ಟ್​​ ಮುಖ್ಯ​ ನ್ಯಾಯಮೂರ್ತಿ

 DY Chandrachud : ಚಂದ್ರಚೂಡ್​ ಅವರು ಆಯುಷ್​ ಸಮಗ್ರ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಸಸ್ಯಾಹಾರ ಹಾಗೂ ಯೋಗಕ್ಕೆ ಒತ್ತು ನೀಡುವಂತೆ ಕರೆಕೊಟ್ಟರು.


ನವದೆಹಲಿ: ಪ್ರತಿ ನಿತ್ಯ ಮುಂಜಾನೆ 3:30ಕ್ಕೆ ಎದ್ದು ಕಠಿಣ ಯೋಗ ಮಾಡಿ ಮತ್ತು ಸಸ್ಯ ಜನ್ಯ ಆಹಾರವನ್ನೇ ಸೇವಿಸಿ. ಇದರಿಂದ ಕಾರ್ಯದೊತ್ತಡ ನಿರ್ವಹಿಸಬಹುದು. ಹೀಗೆಂದವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​​ (C J Chandrachud). ತಮ್ಮ ಸಹೋದ್ಯೋಗಿಗಳು ಸೇರಿದಂತೆ ದೇಶದೆಲ್ಲೆಡೆ ಜನರು ಎದುರಿಸುತ್ತಿರುವ ಕೆಲಸ ಸಂಬಂಧಿತ ಒತ್ತಡವನ್ನು ನಿಭಾಯಿಸಲು ಸಮಗ್ರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ಕೊಟ್ಟಿದ್ದಾರೆ. ಅದಕ್ಕವರು ತಮ್ಮದೇ ಉದಾಹಣೆಯನ್ನು ತೆಗೆದುಕೊಂಡಿದ್ದಾರೆ.

ಇಂದು ಸುಪ್ರೀಂ ಕೋರ್ಟ್​​ನಲ್ಲಿ ಆಯುಷ್ ಸಮಗ್ರ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿದ ಮುಖ್ಯ ನ್ಯಾಯಮೂರ್ತಿಗಳು, ಇಂತಹ ಅಭ್ಯಾಸಗಳ ಮಹತ್ವವು ನ್ಯಾಯಾಧೀಶರು ಮತ್ತು ಅವರ ಕುಟುಂಬಗಳಿಗೆ ಮಾತ್ರವಲ್ಲ, ಇಡೀ ಸುಪ್ರೀಂ ಕೋರ್ಟ್ ಸಿಬ್ಬಂದಿಯ ಯೋಗಕ್ಷೇಮಕ್ಕೂ ಒಳ್ಳೆಯದು ಎಂದು ಹೇಳಿದ್ದಾರೆ.

ನಾನು ನಿತ್ಯ ಯೋಗಾಭ್ಯಾಸ ಮಾಡುತ್ತೇನೆ. ಯೋಗ ಮಾಡಲು ಇಂದು ಮುಂಜಾನೆ 3: 30 ಕ್ಕೆ ಏಳುತ್ತೇನೆ. ಹೆಚ್ಚುವರಿಯಾಗಿ ನಾನು ಕಳೆದ 5 ತಿಂಗಳುಗಳಿಂದ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿದ್ದೇನೆ. ನಾನು ಜೀವನ ಶೈಲಿಯ ಸಮಗ್ರ ಮಾದರಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದೇನೆ. ಅದು ನೀವು ಏನು ತಿನ್ನುತ್ತೀರಿ ಮತ್ತು ನಿಮ್ಮ ಜೀವನ ಶೈಲಿ ಹೇಗಿದೆ ಎಂಬುದರ ಮೇಲೆ ನಿಮ್ಮ ಕೆಲಸದೊತ್ತಡ ನಿರ್ವಹಿಸಬಹುದು ” ಎಂದು ಸಿಜೆಐ ಚಂದ್ರಚೂಡ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.

First Published on Vistara News.

Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!