Posts

Showing posts from January, 2024

Laxman Savadi: ಲಕ್ಷ್ಮಣ್‌ ಸವದಿ ಘರ್‌ ವಾಪ್ಸಿ? ಮಾತುಕತೆ ಫೈನಲ್‌, ಮಹತ್ವದ ಸುಳಿವು ಕೊಟ್ಟ ಕತ್ತಿ, ಜೊಲ್ಲೆ!

Image
 Laxman Savadi : ಕಿತ್ತೂರು ಕರ್ನಾಟಕ ಭಾಗದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಂಡರೆ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಕೊಪ್ಪಳದಲ್ಲಿ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಬೆಳಗಾವಿ:  ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Jagadish Shettar) ಬಳಿಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ( Laxman Savadi ) ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಈಗ ದಟ್ಟವಾಗಿ ಹರಡುತ್ತಿದೆ. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ತಂತ್ರಗಾರಿಕೆಯಲ್ಲಿ ತೊಡಗಿದ್ದು, ಘರ್‌ ವಾಪ್ಸಿಗೆ (Ghar Wapsi) ಚಾಲನೆ ನೀಡಿದೆ. ಇದರ ಭಾಗವಾಗಿ ಕಿತ್ತೂರು ಕರ್ನಾಟಕ (Kittur Karnataka) ಭಾಗದ ನಾಯಕರಾಗಿರುವ ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ವಾಪಸ್‌ ಕರೆತರಲು ಕಸರತ್ತು ತೀವ್ರಗೊಂಡಿದೆ. ಮಾಹಿತಿ ಪ್ರಕಾರ, ಅಂತಿಮ ಹಂತಕ್ಕೆ ಬಂದಿದೆ ಎಂದೇ ಹೇಳಲಾಗುತ್ತಿದೆ. ಲಕ್ಷ್ಮಣ ಸವದಿಯನ್ನು ಬಿಜೆಪಿ ಕರೆತರುವ ಪ್ರಯತ್ನಕ್ಕೆ ಸಂಬಂಧಪಟ್ಟಂತೆ ಹಾಲಿ ಮತ್ತು ಮಾಜಿ ಸಂಸದರು ಸುಳಿವು ನೀಡಿದ್ದಾರೆ. ಚಿಕ್ಕೋಡಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮಾಜಿ ಸಂಸದ ರಮೇಶ್ ಕತ್ತಿ ಸವದಿ ಸೇರ್ಪಡೆ ಬಗ್ಗೆ ಮಾತನಾಡಿದ್ದಾರೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕ...

pitbull dog Attack: ನಾಲ್ಕು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಡೇಂಜರಸ್‌ ಪಿಟ್‌ಬುಲ್‌ ನಾಯಿ

Image
  Pit bull dog  : ಬೆಂಗಳೂರಿನ ಸಂಜಯ ನಗರದಲ್ಲಿ ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಅಪಾಯಕಾರಿ ಪಿಟ್‌ಬುಲ್‌ ನಾಯಿ ದಾಳಿ ಮಾಡಿದೆ. ಬಾಲಕಿ ಅಪಾಯದಿಂದ ಬಚಾವಾಗಿದ್ದಾಳೆ. ಬೆಂಗಳೂರು:   ಅಪಾಯಕಾರಿ ಮತ್ತು ಆಕ್ರಮಣಕಾರಿ ಎಂದೇ ಹೇಳಲಾದ ಅಮೇರಿಕನ್ ಪಿಟ್ ಬುಲ್ (American pitbull dog attack) ಜಾತಿಗೆ ಸೇರಿದ ಸಾಕು ನಾಯಿಯೊಂದು ‌ನಾಲ್ಕು ವರ್ಷದ ಬಾಲಕಿ ಮೇಲೆ ದಾಳಿ (Dog attacks on 4 year old girl) ಮಾಡಿದ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ. ಕಳೆದ ಜನವರಿ 13ರಂದು ಬೆಂಗಳೂರಿನ ಸಂಜಯ ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡರೂ ಅಪಾಯದಿಂದ ಪಾರಾಗಿದ್ದಾಳೆ. ವ್ಯಕ್ತಿಯೊಬ್ಬರು ಆಕ್ರಮಣಕಾರಿ ಪ್ರವೃತ್ತಿ ಹೊಂದಿರುವ ಪಿಟ್ ಬುಲ್ ತಳಿಯ ನಾಯಿಯನ್ನು ಸಾಕಿದ್ದರು. ಆ ಮನೆಗೆ ನೇಪಾಳ ಮೂಲದ ಸುನಿಲ್‌ ಎಂಬಾತ ಕೆಲಸಕ್ಕೆ ಹೋಗುತ್ತಿದ್ದ. ಅದೊಂದು ದಿನ ಆತ ತನ್ನ ನಾಲ್ಕು ವರ್ಷದ ಮಗಳು ಸಾನಿಯಾಳನ್ನು ಕೂಡಾ ಜತೆಗೆ ಕರೆದುಕೊಂಡು ಹೋಗಿದ್ದ. ಹಾಗೆ ಮನೆಗೆ ಹೋಗಿದ್ದ ವೇಳೆ ಡೇಂಜರಸ್‌ ಪಿಟ್‌ಬುಲ್‌ ಆ ಪುಟ್ಟ ಬಾಲಕಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಸುಮ್ಮನೆ ಇದ್ದ ಮಗುವಿನ ಮೇಲೆ ಎರಗಿದ ಆಕೆಯ ದೇಹದಲ್ಲಿ ಹಲವು ಕಡೆ ಈ ನಾಯಿ ಗಾಯ ಮಾಡಿದೆ. ಸುನಿಲ್‌ ಮತ್ತು ಮನೆಯವರು ಸೇರಿ ಕೂಡಲೇ ಸಾನಿಯಾಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರಾದರೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ. ವಿಚಾರ ತಿಳಿದ ಪೊಲೀ...

Fighter Banned: ಗಲ್ಫ್ ದೇಶಗಳಲ್ಲಿ ಹೃತಿಕ್ ರೋಷನ್- ದೀಪಿಕಾ ಅಭಿನಯದ ʻಫೈಟರ್‌ʼ ಸಿನಿಮಾ ನಿಷೇಧ!

Image
 ಫಿಲ್ಮ್‌ ಬಿಸ್ನೆಸ್‌ ತಜ್ಞ ಮತ್ತು ನಿರ್ಮಾಪಕರಾದ ಗಿರೀಶ್‌ ಜೋಹಾರ್‌ ಪ್ರಕಾರ ಸದ್ಯ ಯುಎಇ (Fighter Banned) ಹೊರತುಪಡಿಸಿ ಇತರೆ ಗಲ್ಫ್‌ ದೇಶಗಳಲ್ಲಿ ಫೈಟರ್‌ ಸಿನಿಮಾಕ್ಕೆ ಅನುಮತಿ ದೊರಕಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಬೆಂಗಳೂರು : ಹೃತಿಕ್ ರೋಷನ್ ( Hrithik Roshan ) ಮತ್ತು ದೀಪಿಕಾ ಪಡುಕೋಣೆ (Deepika Padukone) ಅಭಿನಯದ ʻಫೈಟರ್ʼ ಬಿಡುಗಡೆಗಾಗಿ ಅವರ ಫ್ಯಾನ್ಸ್‌ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದ ಗಲ್ಫ್ ದೇಶಗಳಲ್ಲಿಯ ವೀಕ್ಷಕರಿಗೆ ಕೆಟ್ಟ ಸುದ್ದಿಯಿದೆ. ಫಿಲ್ಮ್‌ ಬಿಸ್ನೆಸ್‌ ತಜ್ಞ ಮತ್ತು ನಿರ್ಮಾಪಕರಾದ ಗಿರೀಶ್‌ ಜೋಹಾರ್‌ ಪ್ರಕಾರ ಸದ್ಯ ಯುಎಇ (Fighter Banned) ಹೊರತುಪಡಿಸಿ ಇತರೆ ಗಲ್ಫ್‌ ದೇಶಗಳಲ್ಲಿ ಫೈಟರ್‌ ಸಿನಿಮಾಕ್ಕೆ ಅನುಮತಿ ದೊರಕಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಗಲ್ಫ್‌ ದೇಶಗಳಲ್ಲಿ ಫೈಟರ್‌ ಸಿನಿಮಾ ಬಿಡುಗಡೆಯಾಗದೆ ಇರುವುದಕ್ಕೆ ಕಾರಣವೇನೆಂದು ಬಹಿರಂಗವಾಗಿಲ್ಲ. ಗಿರೀಶ್ ಟ್ವೀಟ್ ಮಾಡಿ ʻʻಫೈಟರ್‌ ಸಿನಿಮಾಗೆ ಒಂದು ಹಿನ್ನಡೆ, ಸಿನಿಮಾ ಮಧ್ಯ ಪ್ರಾಚ್ಯ ದೇಶಗಳಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿಲ್ಲ. ಇದಕ್ಕೆ ಆ ದೇಶಗಳು ಅಧಿಕೃತವಾಗಿ ನಿಷೇಧ ಹೇರಿವೆ. ಪಿಜಿ15 ಕ್ಲಾಸಿಫಿಕೇಷನ್‌ನೊಂದಿಗೆ ಯುಎಇಯಲ್ಲಿ ಮಾತ್ರ ಈ ಸಿನಿಮಾ ಬಿಡುಗಡೆಯಾಗಲಿದೆʼಎಂದು ಬರೆದುಕೊಂಡಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಹಸಿರು ನಿಶಾನೆ ದೊರಕಿಲ್ಲ. ಈ ಆಕ್ಷನ್ ಥ್ರಿ...

Ram mandir: ರಾಮನಗರಿ ಅಯೋಧ್ಯೆಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಭಾಗಿಯಾಗಿದ್ರು?

Image
  ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠೆ (Pran Pratishtha) ಮಾಡಲು ಕೆಲವೇ ಗಂಟೆಗಳು ಬಾಕಿ ಇವೆ.  ರಾಮನಗರಿ ಅಯೋಧ್ಯೆಯಲ್ಲಿ ಭಗವಾನ್‌ ಶ್ರೀರಾಮನ ಜಪ ಜೋರಾಗಿದೆ. ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠೆ (Pran Pratishtha) ಮಾಡಲು ಕೆಲವೇ ಗಂಟೆಗಳು ಬಾಕಿ ಇವೆ.  ರಿಷಬ್‌ ಹಾಗೂ ಪ್ರಗತಿ ಶೆಟ್ಟಿ ಅಯೋಧ್ಯೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಡದ್ದು ಹೀಗೆ.  ಕತ್ರಿನಾ ಗೋಲ್ಡನ್ ಸೀರೆಯಲ್ಲಿ ಮಿಂಚಿದರೆ, ವಿಕ್ಕಿ ಶೇರ್ವಾನಿ ಧರಿಸಿದ್ದರು.  ಜಾಕಿ ಶ್ರಾಫ್ ಕೂಡ ರಾಮಮಂದಿರ ಸಮಾರಂಭದಲ್ಲಿ ಇದ್ದರು. ಉದ್ಘಾಟನಾ ಸಮಾರಂಭದ ಮೊದಲು, ಜಾಕಿ ಮುಂಬೈ ರಾಮಮಂದಿರದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಆಲಿಯಾ ಸೀರಿಯಲ್ಲಿ ಕಂಡರೆ, ರಣಬೀರ್ ಕಪೂರ್ ಬಿಳಿ ಕುರ್ತಾ ಹಾಗೂ ಧೋತಿಯಲ್ಲಿ ಮಿಂಚಿದ್ದಾರೆ First Published on Vistara News.

Ram Mandir: ನಾಳೆಯಿಂದ ಸಾರ್ವಜನಿಕರಿಗೆ ರಾಮ ಮಂದಿರ ಮುಕ್ತ; ಆರತಿ, ದರ್ಶನಕ್ಕೆ ಸಮಯ ನಿಗದಿ

Image
Ram Mandir : ಸೋಮವಾರ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಯೋಧ್ಯಾ :  ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ಉದ್ಘಾಟನೆಯ ಸೋಮವಾರ ನಡೆದಿದ್ದು, ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಜ.22, ಸೋಮವಾರ ಉದ್ಘಾಟನೆಯಾಗಿರುವ ರಾಮ ಮಂದಿರವು ಜ.23, ಮಂಗಳವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ(Opens To Public). ಜನರು ರಾಮ ಲಲ್ಲಾನ (Ram Lalla)ದರ್ಶನವನ್ನು ಪಡೆದುಕೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಈ ವೇಳೆ, ಬಾಲಿವುಡ್ ಗಣ್ಯರಾದ ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಆಲಿಯಾ ಭಟ್, ರಣಬೀರ್ ಕಪೂರ್ ಹಾಗೂ ಉದ್ಯಮಿ ದಂಪತಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಕೂಡ ಹಾಜರಿದ್ದರು. ಅಯೋಧ್ಯೆಯ ರಾಮ ಮಂದಿರವು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ಭಗವಾನ್ ರಾಮನ ಜನ್ಮಸ್ಥಳವೆಂದು ನಂಬಲಾಗಿದೆ. ಇದನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನಿರ್ವಹಿಸುತ್ತದೆ. First Published on Vistara News.

Republic Day 2023: ನರೇಗಾದಡಿ ಭೀಮ್‌ಕೋಲ್ ಕೆರೆ ಅಭಿವೃದ್ಧಿ, ಕೆರೆ ದಂಡೆಯಲ್ಲೇ ನಡೆಯಿತು ಗಣರಾಜ್ಯೋತ್ಸವ

Image
Republic Day 2023 : ಭೀಮ್‌ಕೋಲ್ ಕೆರೆ ದಂಡೆಯ ಮೇಲೆ ಗ್ರಾಮದ ಹಿರಿಯ ನಾಗರಿಕರಾದ ಶಾಂತಾರಾಮ್ ಥಾಮಸೆ ಅವರಿಂದ ಧ್ವಜಾರೋಹಣವನ್ನು ನೆರವೇರಿಸಲಾಯಿತು.   ಕಾರವಾರ:  ತಾಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಟೆಗಾಳಿ ಗ್ರಾಮದಲ್ಲಿ ಭೀಮ್‌ಕೋಲ್ ಕೆರೆ ದಂಡೆಯ ಮೇಲೆ ಗಣರಾಜ್ಯೋತ್ಸವ ಆಚರಿಸಲಾಯಿತು ( Republic Day 2023 ). ಗ್ರಾಮದ ಹಿರಿಯ ನಾಗರಿಕರಾದ ಶಾಂತಾರಾಮ್ ಥಾಮಸೆ ಅವರು ಧ್ವಜಾರೋಹಣವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಾಲಪ್ಪನವರ ಆನಂದ ಕುಮಾರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಹಾಗೂ ಗಣತಂತ್ರ ವ್ಯವಸ್ಥೆ ಜಾರಿಯಾಗಿ 74 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಅಲ್ಲದೇ ಕೇಂದ್ರ ಸರಕಾರ ಅಮೃತ ಸರೋವರ ಅಭಿಯಾನ ಹಮ್ಮಿಕೊಂಡಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಪಂ ಸಿಇಒ ಅವರ ಮಾರ್ಗದರ್ಶನದಲ್ಲಿ ಭೀಮ್‌ಕೋಲ್ ಕೆರೆ ಅಭಿವೃದ್ಧಿಪಡಿಸಲಾಗಿದೆ. ಈ ಅಭಿವೃದ್ಧಿ ಕಾಮಗಾರಿಯಲ್ಲಿ ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ನರೇಗಾ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ ಎಂದರು. First Published on Vistara News.

Republic Day : ಗಣರಾಜ್ಯೋತ್ಸವ ಹಿನ್ನೆಲೆ ಸಿಹಿ ಹಂಚಿಕೊಂಡ ಭಾರತ, ಪಾಕಿಸ್ತಾನದ ಸೈನಿಕರು

Image
  ಗಣರಾಜ್ಯೋತ್ಸವ ಖುಷಿಯಲ್ಲಿದ್ದ ಭಾರತದ ಸೈನಿಕರು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯ ಸಿಬ್ಬಂದಿಗೆ ಸಿಹಿ ಹಂಚಿದರು. ನವ ದೆಹಲಿ  : ದೇಶಾದ್ಯಂತ ಗುರುವಾರ (ಜನವರಿ 26ರಂದು) ಗಣರಾಜ್ಯೋತ್ಸವ (Republic Day) ಆಚರಣೆ ಮಾಡಲಾಯಿತು. ಅಂತೆಯೇ ಗಡಿಯಲ್ಲೂ ಭಾರತದ ಗಡಿ ಭದ್ರತಾ ಸಿಬ್ಬಂದಿಗಳು ಸಂಭ್ರಮಾಚರಣೆ ನಡೆಸಿದರು. ಇದೇ ವೇಳೆ ಭಾರತ ಹಾಗೂ ಪಾಕಿಸ್ತಾನದ (India-Pak soldiers) ಸೇನಾ ಸಿಬ್ಬಂದಿಗಳು ಪರಸ್ಪರ ಸಿಹಿ ಹಂಚಿಕೊಂಡು ಖುಷಿ ಹಂಚಿಕೊಂಡರು. ಜಮ್ಮು ಕಾಶ್ಮೀರದ ಆರ್​ಎಸ್​ಪುರ ಪ್ರದೇಶದಲ್ಲಿ ಪಾಕಿಸ್ತಾನ ಹಾಗೂ ಭಾರತದ ಸೇನಾ ಸಿಬ್ಬಂದಿಗಳು ಸಿಹಿ ಹಂಚಿಕೊಂಡರು. ಭಾರತದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರೂ ಸಿಹಿ ಸೈನಿಕರಿಗೆ ಸಿಹಿ ವಿತರಣೆ ಮಾಡಿದರು. ಈ ಮಾಹಿತಿಯನ್ನು ಅವರು ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ. First Published on Vistara News.

Republic Day 2023: ಭಾರತವು ಬಲಿಷ್ಠ ಸಂವಿಧಾನವನ್ನು ಹೊಂದಿದೆ: ಪ್ರಸನ್ನನಾಥ ಸ್ವಾಮೀಜಿ

Image
  Republic Day 2023 : ಸ್ವಾತಂತ್ರ್ಯಾ ನಂತರ ಆಡಳಿತ ವೈಖರಿ ಯಾವ ರೀತಿ ನಡೆಯಬೇಕು ಎಂಬುದನ್ನು ತೋರಿಸಿಕೊಡುವ ಸಲುವಾಗಿ ಸಂವಿಧಾನವನ್ನು ರಚನೆ ಮಾಡಲಾಯಿತು ಎಂದು ಪ್ರಸನ್ನನಾಥ ಸ್ವಾಮೀಜಿ ಹೇಳಿದರು. ಶಿವಮೊಗ್ಗ:  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ತೋರಿಸಿಕೊಟ್ಟಂತಹ ಸಂವಿಧಾನ ( Republic Day 2023 ) ನಮ್ಮ ದೇಶದ್ದು, ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಗುರುಪುರದಲ್ಲಿರುವ ಬಿಜಿಎಸ್ ಶಾಲಾ ಕಾಲೇಜಿನಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ಭಾರತದ ಪ್ರಜೆಗಳಾದ ನಾವು ಹೇಗೆ ಬದುಕಬೇಕು, ನಮ್ಮ ಆಡಳಿತ ವೈಖರಿ ಯಾವ ರೀತಿ ನಡೆಯಬೇಕು ಎಂಬುದನ್ನು ತೋರಿಸಿಕೊಡುವ ಸಲುವಾಗಿ ನಿಯಮಗಳನ್ನು ರೂಪಿಸಲಾಯಿತು. ಅದುವೇ ನಮ್ಮ ಸಂವಿಧಾನ ಎಂದರು. First Published on Vistara News.

republic day : ಯೋಧರ ಮನೆ ಮಂದಿಗೆ ಕ್ರಿಕೆಟ್ ಪಂದ್ಯಕ್ಕೆ ಫ್ರೀ ಟಿಕೆಟ್​​!

Image
Ind vs Eng : ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಹೈದರಾಬಾದ್​ನಲ್ಲಿ ಜನವರಿ 25ರಂದು ಆರಂಭವಾಗಲಿದೆ.   ವಿಸ್ತಾರನ್ಯೂಸ್​ ಬೆಂಗಳೂರು :  ಮುಂಬರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಗಣರಾಜ್ಯೋತ್ಸವದಂದು ( republic day ) ಭಾರತೀಯ ಸೇನಾ ಸಿಬ್ಬಂದಿಯ ಕುಟುಂಬಗಳ ಸದಸ್ಯರಿಗೆ ಉಚಿತ ಪ್ರವೇಶ ನೀಡುವುದಾಗಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಘೋಷಿಸಿದೆ. ಜನವರಿ 25ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಹೈದಾರಾಬಾದ್ ಕ್ರಿಕೆಟ್​ ಸಂಸ್ಥೆ ಆತಿಥ್ಯ ವಹಿಸಲಿದೆ. ಉದ್ಘಾಟನಾ ಪಂದ್ಯ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಗಣರಾಜ್ಯೋತ್ಸವದ ಖುಷಿಯನ್ನು ಸಂಭ್ರಮಿಸಲು ಹಾಗೂ ಯೋಧರ ಸೇವೆಯನ್ನು ಗೌರವಿಸಲು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ನೇತೃತ್ವದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್, ಆ ನಿರ್ದಿಷ್ಟ ದಿನದಂದು ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳಿಗೆ ಉಚಿತ ಪ್ರವೇಶವನ್ನು ನೀಡಲು ನಿರ್ಧರಿಸಿದೆ. ಯೋಧರ ಕುಟುಂಬಗಳಿಗೆ ಉಚಿತ ಪ್ರವೇಶ ನೀಡುವ ನಿರ್ಧಾರವು ದೇಶವನ್ನು ಕಾಪಾಡುವವರ ಕುಟುಂಬದ ಸದಸ್ಯರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ವಿಶೇಷ ಮಾರ್ಗವಾಗಿದೆ. ಗಣರಾಜ್ಯೋತ್ಸವವು ಭಾರತದಲ್ಲಿ ಅಪಾರ ಮಹತ್ವವನ್ನು ಹೊಂದಿದೆ. ಅದನ್ನು ಕ್ರಿಕೆಟ್ ಪಂದ್ಯದೊಂದಿಗೆ ಸಂಯೋಜಿಸಿ ಆಚರಿಸುವ...

Republic Day 2024: ರಾಜ್ಯದ ಸ್ತಬ್ಧಚಿತ್ರ ನಿರಾಕರಿಸಿ ಕನ್ನಡಿಗರಿಗೆ ಅಪಮಾನ; ಕೇಂದ್ರದ ವಿರುದ್ಧ ಸಿಎಂ ಟೀಕೆ

Image
Republic Day 2024 : ಕನ್ನಡಿಗರನ್ನು ಅವಮಾನಿಸುವ ತನ್ನ ಚಾಳಿಯನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬೆಂಗಳೂರು:  ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ (Republic Day 2024) ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ (Tableau) ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ. ಕಳೆದ ವರ್ಷ ಕೂಡ ಮೊದಲಿಗೆ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿ, ವಿವಾದದ ಸ್ವರೂಪ ಪಡೆದ ನಂತರ ಅನುಮತಿ ನೀಡಿತ್ತು. ಈ ಬಾರಿ ಮತ್ತೆ ಕನ್ನಡಿಗರನ್ನು ಅವಮಾನಿಸುವ ತನ್ನ ಚಾಳಿಯನ್ನು ಮುಂದುವರಿಸಿದೆ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್, ಕಿತ್ತೂರು ಚೆನ್ನಮ್ಮ, ಬ್ರಾಂಡ್ ಬೆಂಗಳೂರು ಹಾಗೂ ಕರ್ನಾಟಕದ ನೈಸರ್ಗಿಕ ವ್ಯವಸ್ಥೆ ಸೇರಿ 4 ಸ್ತಬ್ಧಚಿತ್ರಕ್ಕೆ ಮಾದರಿಗಳಿಗೆ ಅವಕಾಶ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರದ ಆಯ್ಕೆ ಸಮಿತಿಯು ನಮ್ಮ ಮನವಿಯನ್ನು ತಿರಸ್ಕರಿಸಿ, ನಾಡಿನ ಅಸೀಮ ಸಾಧನೆ ಮತ್ತು ಮಾದರಿ ಸಾಧಕರನ್ನು ದೇಶಕ್ಕೆ ಪರಿಚಯಿಸುವ ಅವಕಾಶವನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ...

Republic Day: ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಬೈಡೆನ್‌ಗೆ ಆಹ್ವಾನ ನೀಡಿದ ಪ್ರಧಾನಿ ಮೋದಿ

Image
  Republic Day : ಭಾರತವು ಪ್ರತಿ ವರ್ಷ ಗಣರಾಜ್ಯೋತ್ಸವಕ್ಕೆ ವಿಶ್ವ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಸಂಪ್ರದಾಯವನ್ನು ಹಾಕಿಕೊಂಡಿದೆ. ನವದೆಹಲಿ:  2024ರ ಭಾರತದ ಗಣರಾಜ್ಯೋತ್ಸವಕ್ಕೆ (Republic Day 2024) ಮುಖ್ಯ ಅತಿಥಿಯಾಗಿ (Chief Guest) ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆಹ್ವಾನ ನೀಡಿದ್ದಾರೆ. ಸೆಪ್ಟೆಂಬರ್ 9 ಮತ್ತು 10ರಂದು ನಡೆದ  ಜಿ20 ಶೃಂಗಸಭೆ ಯ ಸಂದರ್ಭದಲ್ಲಿ ಪ್ರಧಾನಿ ಈ ಆಹ್ವಾನ ನೀಡಿದ್ದಾರೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಬುಧವಾರ ಹೇಳಿದ್ದಾರೆ(US Ambassador to India Eric Garcetti). ಗಣರಾಜ್ಯೋತ್ಸವದ ಸಂದರ್ಭದಲ್ಲೇ ಭಾರತದಲ್ಲಿ ಕ್ವಾಡ್ ಶೃಂಗಸಭೆಯನ್ನು ಆಯೋಜಿಸಲಾಗಿದೆಯೇ ಎಂಬ ಪ್ರಶ್ನೆಗೆ ಎರಿಕ್ ಗಾರ್ಸೆಟ್ಟಿ ಅವರು, ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು. ಕ್ವಾಟ್, ಭಾರತ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡ ಕೂಟವಾಗಿದೆ. ಮುಂದಿನ ಕ್ವಾಡ್ ಸಭೆಯನ್ನು ಆಯೋಜಿಸುವುದು ಭಾರತದ ಸರದಿಯಾಗಿದೆ. ಗಣರಾಜ್ಯೋತ್ಸವಕ್ಕೆ ಕ್ವಾಡ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಈ ಮಾಹಿತಿಯನ್ನು ನೀಡಿದರು. 2023ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಪಾಲ್ಗೊ...

Republic Day 2024: ಮುಂದಿನ ವರ್ಷ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸಂಪೂರ್ಣ ಮಹಿಳಾ ಬಲ!

Image
  ಗಣರಾಜ್ಯೋತ್ಸವರ ಪಥಸಂಚಲನ, ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸುವುದು, ಈ ಬಗ್ಗೆ ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸುವ ರಕ್ಷಣಾ ಇಲಾಖೆಯ ಸಾಂಪ್ರದಾಯಿಕ ಶಾಖೆ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ನವ ದೆಹಲಿ:  ಸೇನಾ ಮತ್ತು ಇತರ ಎಲ್ಲ ವಲಯಗಳಲ್ಲೂ ಮಹಿಳೆಯರ ಸಕ್ರಿಯತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಆ ಪ್ರಯತ್ನದ ಇನ್ನೊಂದು ಭಾಗವಾಗಿ 2024ನೇ ವರ್ಷದ ಗಣರಾಜ್ಯೋತ್ಸವವನ್ನು (Republic Day 2024) ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಿಡಲು ಕೇಂದ್ರ ರಕ್ಷಣಾ ಸಚಿವಾಲಯದಿಂದ ಯೋಜನೆ ರೂಪಿಸಲಾಗುತ್ತಿದೆ ಎಂದು ವರದಿಯಾಗಿದೆ. ಅಂದರೆ 2024ರ ಗಣರಾಜ್ಯೋತ್ಸವದ ಪಥ ಸಂಚಲನ, ಸ್ತಬ್ಧಚಿತ್ರಗಳು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲಲ್ಲ ಬರೀ ಮಹಿಳೆಯರ ಪ್ರದರ್ಶನವೇ ಇರುವಂತೆ ಪ್ಲ್ಯಾನ್ ಮಾಡಲಾಗುತ್ತಿದೆ. ಈ ಬಗ್ಗೆ ರಕ್ಷಣಾ ಪಡೆಗಳಿಗೆ ಮತ್ತು ಇತರ ಪ್ರಮುಖರಿಗೆ ರಕ್ಷಣಾ ಇಲಾಖೆಯ ಸಾಂಪ್ರದಾಯಿಕ ಶಾಖೆಯಿಂದ ಸುತ್ತೋಲೆಯೊಂದು ಹೋಗಿದೆ. ಅಂದಹಾಗೇ, ಗಣರಾಜ್ಯೋತ್ಸವರ ಪಥಸಂಚಲನ, ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸುವುದು, ಈ ಬಗ್ಗೆ ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸುವುದು ಇದೇ ಸಾಂಪ್ರದಾಯಿಕ ಶಾಖೆಯೇ ಆಗಿರುತ್ತದೆ. ಇದನ್ನೂ ಓದಿ: Beating Retreat 2023: ತುಂತುರು ಮಳೆ ಮಧ್ಯೆ ಗಣರಾಜ್ಯೋತ್ಸವ ಸಮಾರೋಪ, ಇಲ್ಲಿವೆ ರಮಣೀಯ ಫೋಟೊಗಳು ಗಣ...

Ram Mandir: ನೇಪಾಳದ ಸೀತೆಯ ಮನೆಯಿಂದ ರಾಮಮಂದಿರಕ್ಕೆ 3 ಸಾವಿರ ಉಡುಗೊರೆ!

Image
  Ram Mandir : ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಹಿಂದುಗಳೇ ಹೆಚ್ಚಿರುವ ನೇಪಾಳದಿಂದ 3 ಸಾವಿರಕ್ಕೂ ಅಧಿಕ ಉಡುಗೊರೆಗಳನ್ನು ಕಳುಹಿಸಲಾಗಿದೆ. ಅವುಗಳ ಫೋಟೊಗಳನ್ನು ಕೇಂದ್ರ ಸರ್ಕಾರ ಹಂಚಿಕೊಂಡಿದೆ. ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇವೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಬೃಹತ್‌ ಧಾರ್ಮಿಕ ಕಾರ್ಯಕ್ರಮದಲ್ಲಿ ದೇಶದ ಸಾವಿರಾರು ಗಣ್ಯರು ಭಾಗಿಯಾಗಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ರಾಮಮಂದಿರಕ್ಕಾಗಿ ನೇಪಾಳವು (Nepal) ಚಿನ್ನಾಭರಣ ಸೇರಿ ಸುಮಾರು 3 ಸಾವಿರ ಉಡುಗೊರೆಗಳನ್ನು ಕಳುಹಿಸಿದೆ. ಹೌದು, ನೇಪಾಳದ ಜನಕಪುರ ಧಾಮದಲ್ಲಿರುವ ಸೀತೆಯ ಮನೆಯಿಂದ ಚಿನ್ನ, ರಥ, ಬಾಣ, ಕಳಶ, ಬೆಳ್ಳಿಯ ಆಭರಣಗಳು ಸೇರಿ ಸುಮಾರು 3 ಸಾವಿರ ಉಡುಗೊರೆಗಳನ್ನು ಕಳುಹಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ, ನೇಪಾಳ ಕಳುಹಿಸಿದ ಉಡುಗೊರೆಗಳ ಫೋಟೊಗಳನ್ನು ಕೂಡ ಹಂಚಿಕೊಂಡಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ನೇಪಾಳದ ಗಣ್ಯರ ನಿಯೋಗ ಕೂಡ ಭಾಗಿಯಾಗಲಿದೆ. ಜನಕಪುರ ಧಾಮವು ಶ್ರೀರಾಮನ ಪತ್ನಿ ಸೀತೆ ಜನಿಸಿದ ಸ್ಥಳವಾಗಿದೆ. ಹಾಗಾಗಿ, ಉಡುಗೊರೆ ಕಳುಹಿಸಲಾಗಿದೆ. First Publis...

Ram Mandir: ಮಂದಿರ ಉದ್ಘಾಟನೆಗೆ ಬರಲಿದ್ದಾರೆ 55 ದೇಶಗಳ ನಾಯಕರು; ಇಲ್ಲಿದೆ ಪಟ್ಟಿ

Image
  Ram Mandir : ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಕಾರ್ಯಕ್ರಮಕ್ಕೆ ಬೇರೆ ದೇಶಗಳ ಗಣ್ಯರು ಕೂಡ ಆಗಮಿಸಲಿದ್ದಾರೆ. ನವದೆಹಲಿ:  ದೇಶಾದ್ಯಂತ ಈಗ ರಾಮನ ಜಪವೇ ಆರಂಭವಾಗಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಲಿದ್ದಾರೆ. ದೇಶಾದ್ಯಂತ ಸಾಧು-ಸಂತರು, ಗಣ್ಯರು, ಸಾಧಕರು ಸೇರಿ ಸಾವಿರಾರು ಗಣ್ಯರು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದ ಗಣ್ಯರು ಮಾತ್ರವಲ್ಲ, ಸುಮಾರು 55 ದೇಶಗಳ 100ಕ್ಕೂ ಅಧಿಕ ಗಣ್ಯರು ಕೂಡ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ವಿಶ್ವ ಹಿಂದು ಪರಿಷತ್‌ ಜಂಟಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿವೇಕಾನಂದ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. “ಅಮೆರಿಕ, ಬ್ರಿಟನ್‌ ಸೇರಿ 55 ದೇಶಗಳ ಸಂಸದರು, ರಾಯಭಾರಿಗಳು, ರಾಜತಾಂತ್ರಿಕ ಅಧಿಕಾರಿಗಳು ಸೇರಿ 100ಕ್ಕೂ ಅಧಿಕ ಗಣ್ಯರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಗಣ್ಯರು ಜನವರಿ 20ರಂದೇ ಲಖನೌಗೆ ಆಗಮಿಸಲಿದ್ದು, ಜನವರಿ 21ರಂದು ಅಯೋಧ್ಯೆಗೆ ತೆರಳಲಿದ್ದಾರೆ. ಅವರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ. ಯಾವ ದೇಶಗಳಿಂದ ಗಣ್ಯರ ಆಗಮನ? ಜರ್ಮನಿ, ಫಿಜಿ, ಫಿನ್‌ಲ್ಯಾಂಡ್‌, ಅಮೆರಿಕ, ಬ್ರಿಟನ್‌, ಜರ್ಮನಿ, ಇಂಡೋನೇ...