pitbull dog Attack: ನಾಲ್ಕು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಡೇಂಜರಸ್ ಪಿಟ್‌ಬುಲ್ ನಾಯಿ
Pit bull dog : ಬೆಂಗಳೂರಿನ ಸಂಜಯ ನಗರದಲ್ಲಿ ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಅಪಾಯಕಾರಿ ಪಿಟ್‌ಬುಲ್ ನಾಯಿ ದಾಳಿ ಮಾಡಿದೆ. ಬಾಲಕಿ ಅಪಾಯದಿಂದ ಬಚಾವಾಗಿದ್ದಾಳೆ.
ಬೆಂಗಳೂರು: ಅಪಾಯಕಾರಿ ಮತ್ತು ಆಕ್ರಮಣಕಾರಿ ಎಂದೇ ಹೇಳಲಾದ ಅಮೇರಿಕನ್ ಪಿಟ್ ಬುಲ್ (American pitbull dog attack) ಜಾತಿಗೆ ಸೇರಿದ ಸಾಕು ನಾಯಿಯೊಂದು ನಾಲ್ಕು ವರ್ಷದ ಬಾಲಕಿ ಮೇಲೆ ದಾಳಿ (Dog attacks on 4 year old girl) ಮಾಡಿದ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ.
ಕಳೆದ ಜನವರಿ 13ರಂದು ಬೆಂಗಳೂರಿನ ಸಂಜಯ ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡರೂ ಅಪಾಯದಿಂದ ಪಾರಾಗಿದ್ದಾಳೆ.
ವ್ಯಕ್ತಿಯೊಬ್ಬರು ಆಕ್ರಮಣಕಾರಿ ಪ್ರವೃತ್ತಿ ಹೊಂದಿರುವ ಪಿಟ್ ಬುಲ್ ತಳಿಯ ನಾಯಿಯನ್ನು ಸಾಕಿದ್ದರು. ಆ ಮನೆಗೆ ನೇಪಾಳ ಮೂಲದ ಸುನಿಲ್ ಎಂಬಾತ ಕೆಲಸಕ್ಕೆ ಹೋಗುತ್ತಿದ್ದ. ಅದೊಂದು ದಿನ ಆತ ತನ್ನ ನಾಲ್ಕು ವರ್ಷದ ಮಗಳು ಸಾನಿಯಾಳನ್ನು ಕೂಡಾ ಜತೆಗೆ ಕರೆದುಕೊಂಡು ಹೋಗಿದ್ದ.
ಹಾಗೆ ಮನೆಗೆ ಹೋಗಿದ್ದ ವೇಳೆ ಡೇಂಜರಸ್ ಪಿಟ್‌ಬುಲ್ ಆ ಪುಟ್ಟ ಬಾಲಕಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಸುಮ್ಮನೆ ಇದ್ದ ಮಗುವಿನ ಮೇಲೆ ಎರಗಿದ ಆಕೆಯ ದೇಹದಲ್ಲಿ ಹಲವು ಕಡೆ ಈ ನಾಯಿ ಗಾಯ ಮಾಡಿದೆ.
ಸುನಿಲ್ ಮತ್ತು ಮನೆಯವರು ಸೇರಿ ಕೂಡಲೇ ಸಾನಿಯಾಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರಾದರೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ. ವಿಚಾರ ತಿಳಿದ ಪೊಲೀಸರು ಬಾಲಕಿ ತಂದೆ ಸುನೀಲ್ ಬಳಿ ಮಾಹಿತಿ
ಕಲೆಹಾಕಿದ್ದಾರೆ, ಆದರೂ ದೂರು ನೀಡಲು ಬಾಲಕಿ ತಂದೆ ನಿರಾಕರಿಸಿದ್ದಾರೆ.
First Published on Vistara News

Comments
Post a Comment