Ram Mandir: ನೇಪಾಳದ ಸೀತೆಯ ಮನೆಯಿಂದ ರಾಮಮಂದಿರಕ್ಕೆ 3 ಸಾವಿರ ಉಡುಗೊರೆ!
Ram Mandir: ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಹಿಂದುಗಳೇ ಹೆಚ್ಚಿರುವ ನೇಪಾಳದಿಂದ 3 ಸಾವಿರಕ್ಕೂ ಅಧಿಕ ಉಡುಗೊರೆಗಳನ್ನು ಕಳುಹಿಸಲಾಗಿದೆ. ಅವುಗಳ ಫೋಟೊಗಳನ್ನು ಕೇಂದ್ರ ಸರ್ಕಾರ ಹಂಚಿಕೊಂಡಿದೆ.
ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇವೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ದೇಶದ ಸಾವಿರಾರು ಗಣ್ಯರು ಭಾಗಿಯಾಗಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ರಾಮಮಂದಿರಕ್ಕಾಗಿ ನೇಪಾಳವು (Nepal) ಚಿನ್ನಾಭರಣ ಸೇರಿ ಸುಮಾರು 3 ಸಾವಿರ ಉಡುಗೊರೆಗಳನ್ನು ಕಳುಹಿಸಿದೆ.
ಹೌದು, ನೇಪಾಳದ ಜನಕಪುರ ಧಾಮದಲ್ಲಿರುವ ಸೀತೆಯ ಮನೆಯಿಂದ ಚಿನ್ನ, ರಥ, ಬಾಣ, ಕಳಶ, ಬೆಳ್ಳಿಯ ಆಭರಣಗಳು ಸೇರಿ ಸುಮಾರು 3 ಸಾವಿರ ಉಡುಗೊರೆಗಳನ್ನು ಕಳುಹಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ, ನೇಪಾಳ ಕಳುಹಿಸಿದ ಉಡುಗೊರೆಗಳ ಫೋಟೊಗಳನ್ನು ಕೂಡ ಹಂಚಿಕೊಂಡಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ನೇಪಾಳದ ಗಣ್ಯರ ನಿಯೋಗ ಕೂಡ ಭಾಗಿಯಾಗಲಿದೆ. ಜನಕಪುರ ಧಾಮವು ಶ್ರೀರಾಮನ ಪತ್ನಿ ಸೀತೆ ಜನಿಸಿದ ಸ್ಥಳವಾಗಿದೆ. ಹಾಗಾಗಿ, ಉಡುಗೊರೆ ಕಳುಹಿಸಲಾಗಿದೆ.
First Published on Vistara News.

Comments
Post a Comment