Passport Ranking: ಪಾಸ್‌ಪೋರ್ಟ್‌ ರ‍್ಯಾಂಕಿಂಗ್‌ನಲ್ಲಿ ಕುಸಿದ ಭಾರತ; ಟಾಪ್‌ ದೇಶ ಯಾವುದು?

 Passport Ranking: ಹೆನ್ಲೆ ಪಾಸ್‌ಪೋರ್ಟ್‌ ಸೂಚ್ಯಂಕ ಪ್ರಕಟವಾಗಿದ್ದು, ಭಾರತವು ಒಂದು ಸ್ಥಾನ ಕುಸಿತ ಕಂಡಿದೆ. ಫ್ರಾನ್ಸ್‌ ಪಾಸ್‌ಪೋರ್ಟ್‌ ಈಗ ಜಗತ್ತಿನ ಶಕ್ತಿಶಾಲಿ ಪಾಸ್‌ಪೋರ್ಟ್‌ ಎನಿಸಿದೆ. ಯಾವ ದೇಶಕ್ಕೆ ಎಷ್ಟನೇ ಸ್ಥಾನ ಎಂಬುದರ ಮಾಹಿತಿ ಇಲ್ಲಿದೆ.


ನವದೆಹಲಿ: ಜಾಗತಿಕವಾಗಿ ಯಾವುದೇ ಪಾಸ್‌ಪೋರ್ಟ್‌ ಎಷ್ಟು ಬಲಿಷ್ಠವಾಗಿದೆ ಎಂಬುದರ ಆಧಾರದ ಮೇಲೆ ಆ ದೇಶದ ನಾಗರಿಕರಿಗೆ ಗೌರವ, ನಿಯಮಗಳ ಸಡಿಲಿಕೆ ಸೇರಿ ಹಲವು ಸೌಲಭ್ಯಗಳು ಸಿಗುತ್ತವೆ. ಆದರೆ, ಜಾಗತಿಕವಾಗಿ ಬಲಿಷ್ಠ ಪಾಸ್‌ಪೋರ್ಟ್‌ ಹೊಂದಿರುವ ದೇಶಗಳ ಪಟ್ಟಿಯಲ್ಲಿ (Passport Power Ranking) ಭಾರತದ ಒಂದು ಸ್ಥಾನ ಕುಸಿತವಾಗಿದೆ. ಭಾರತವು ಪಟ್ಟಿಯಲ್ಲಿ 84ನೇ ಸ್ಥಾನದಿಂದ 85ನೇ ಸ್ಥಾನಕ್ಕೆ (Indian Passport) ಕುಸಿತ ಕಂಡಿದೆ. ಮತ್ತೊಂದೆಡೆ, ಫ್ರಾನ್ಸ್‌ ಪಾಸ್‌ಪೋರ್ಟ್‌ (France Passport) ವಿಶ್ವದಲ್ಲೇ ಬಲಿಷ್ಠ ಪಾಸ್‌ಪೋರ್ಟ್‌ ಎನಿಸಿದ್ದು, ನಂಬರ್‌ 1 ಸ್ಥಾನ ಪಡೆದಿದೆ.

2024ನೇ ಸಾಲಿನ ಹೆನ್ಲೆ ಪಾಸ್‌ಪೋರ್ಟ್‌ ಸೂಚ್ಯಂಕ ಪ್ರಕಟವಾಗಿದೆ. ಸುಮಾರು 194 ದೇಶಗಳ ಮಾಹಿತಿ ಸಂಗ್ರಹಿಸಿ, ಪಾಸ್‌ಪೋರ್ಟ್‌ ದಕ್ಷತೆಯ ಆಧಾರದ ಮೇಲೆ ಪಟ್ಟಿ ತಯಾರಿಸಿದೆ. ಫ್ರಾನ್ಸ್‌ ನಂಬರ್‌ 1 ಸ್ಥಾನದಲ್ಲಿರುವುದರಿಂದ ಆ ದೇಶದ ನಾಗರಿಕರು 194 ದೇಶಗಳಿಗೂ ವೀಸಾ ಇಲ್ಲದೆ ಪ್ರಯಾಣಿಸಬಹುದಾಗಿದೆ. ಜರ್ಮನಿ, ಇಟಲಿ, ಜಪಾನ್‌, ಸಿಂಗಾಪುರ ಹಾಗೂ ಸ್ಪೇನ್‌ ಕೂಡ ಜಂಟಿಯಾಗಿ ಮೊದಲ ಸ್ಥಾನದಲ್ಲಿವೆ. ಪಾಕಿಸ್ತಾನವು ಕಳೆದ ವರ್ಷದಂತೆಯೇ 106ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶವು 101ನೇ ಸ್ಥಾನದಿಂದ 102ನೇ ಸ್ಥಾನಕ್ಕೆ ಕುಸಿತ ಕಂಡಿದೆ.

First Published on Vistara News.


Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!