Satnam Singh Sandhu: ಯಾರಿದು ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸತ್ನಮ್ ಸಿಂಗ್ ಸಂಧು?
Satnam Singh Sandhu: ಖ್ಯಾತ ಶಿಕ್ಷಣ ತಜ್ಞ ಸತ್ನಮ್ ಸಿಂಗ್ ಸಂಧು ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆ.
ನವದೆಹಲಿ: ದೇಶದ ಪ್ರಮುಖ ಶಿಕ್ಷಣ ತಜ್ಞರಲ್ಲಿ (educationist) ಒಬ್ಬರಾಗಿರುವ ಸತ್ನಮ್ ಸಿಂಗ್ ಸಂಧು (Satnam Singh Sandhu) ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (rashtrapati draupadi murmu) ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ(nominated to Rajya Sabha). ಭಾರತದ ಸಂವಿಧಾನದ 80 ನೇ ವಿಧಿಯ(1)ನೇ ವಿಧಿಯ (1) ಉಪ-ಕಲಂ (ಎ) ಮೂಲಕ ನೀಡಲಾದ ಅಧಿಕಾರಗಳ ಅನುಸಾರ ರಾಷ್ಟ್ರಪತಿಗಳು ಸತ್ನಮ್ ಸಿಂಗ್ ಸಂಧು ಅವರನ್ನು ನಾಮನಿರ್ದೇಶನ ಮಾಡಿದ್ದಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸತ್ನಮ್ ಸಿಂಗ್ ಸಂಧು ಅವರಿಗೆ ರಾಜ್ಯಸಭೆಯ ಚೇರ್ಮನ್ನರೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸ್ವಾಗತ ಕೋರಿದ್ದಾರೆ. ಸತ್ನಮ್ ಸಿಂಗ್ ಸಂಧು ಅವರನ್ನು ನಾನು ರಾಜ್ಯಸಭೆಗೆ ಸ್ವಾಗತಿಸುತ್ತೇನೆ. ಸಮುದಾಯ ಸೇವೆಯಲ್ಲಿನ ಅವರ ಹೆಚ್ಚುಗಾರಿಕೆ ಮತ್ತು ಶಿಕ್ಷಣದೆಡೆಗಿನ ಅವರ ಬದ್ಧತೆಯು, ನಾವೀನ್ಯತೆ ಮತ್ತು ಕಲಿಕೆಯು ರಾಜ್ಯಸಭೆಯ ಸಂಪನ್ಮೂಲಕ್ಕೆ ದೊಡ್ಡ ಬಲ ನೀಡಲಿದೆ. ಅವರ ರಾಜ್ಯಸಭೆ ಅವಧಿಗೆ ನಾನು ಶುಭಾಶಯ ಕೋರುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸತ್ನಮ್ ಸಿಂಗ್ ಸಂಧು ಅವರಿಗೂ ಶುಭಾಶಯ ಕೋರಿದ್ದಾರೆ.
First Published on Vistara News.

Comments
Post a Comment