Smriti Irani VS Rahul Gandhi: ಇಂದು ಅಮೇಥಿಯಲ್ಲಿ ಭಯ್ಯಾ VS ದೀದಿ; ಲೋಕಸಭೆ ಚುನಾವಣೆಗೆ ಪೀಠಿಕೆ
Smriti Irani VS Rahul Gandhi : 2022ರ ಉತ್ತರಪ್ರದೇಶ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಇಬ್ಬರು ನಾಯಕರು ಒಂದೇ ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಲಖನೌ: ಉತ್ತರಪ್ರದೇಶದ ಅಮೇಥಿ (Amethi) ಲೋಕಸಭೆ ಕ್ಷೇತ್ರ ಸೋಮವಾರ ಹೈ ಪ್ರೊಫೈಲ್ ರಾಜಕೀಯ ಹಣಾಹಣಿಗೆ ಸಿದ್ಧವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಇಬ್ಬರೂ ಒಂದೇ ದಿನದಲ್ಲಿ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಅವರಿಬ್ಬರೂ ಈ ಬಾರಿ ಚುನಾವಣೆಯಲ್ಲಿ ಮತ್ತೆ ಸಂಸತ್ತಿಗೆ ಇದೇ ಕ್ಷೇತ್ರದಲ್ಲಿ ಮುಖಾಮುಖಿಯಾಗಲಿದ್ದಾರೆ ಎಂಬ ಊಹಾಪೋಹ ಜೋರಾಗಿದೆ.
2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ, ಮೋದಿ ಅಲೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿ ಅಮೇಥಿಯನ್ನು ಗೆದ್ದಿದ್ದರು. 2022ರ ಉತ್ತರಪ್ರದೇಶ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಇಬ್ಬರು ನಾಯಕರು ಒಂದೇ ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಮೂರು ಬಾರಿ ಸೋತಿದೆ.
ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಅಮೇಥಿಗೆ ಪ್ರವೇಶಿಸಲಿದ್ದರೆ, ಇರಾನಿ ತಮ್ಮ ಜನಸಂವಾದ ವಿಕಾಸ ಯಾತ್ರೆಯ ಭಾಗವಾಗಿ ನಾಲ್ಕು ದಿನಗಳ ಕಾಲ ತಮ್ಮ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.
First Published on Vistara News.

Comments
Post a Comment