Bill Gates India Visit: “ಯಾವಾಗಲೂ ಸ್ಫೂರ್ತಿದಾಯಕ… ” ಮೋದಿ ಭೇಟಿ ಬಳಿಕ ಬಿಲ್‌ ಗೇಟ್ಸ್‌ ಹೇಳಿದ್ದೇನು?

 Bill Gates India Visit: ಬಿಲ್‌ ಗೇಟ್ಸ್‌ ಭಾರತ ಭೇಟಿಯಲ್ಲಿ ಅನೇಕ ಕಾರ್ಯಕ್ರಮಗಳಿದ್ದು, ಅದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.


ಹೊಸದಿಲ್ಲಿ: `ಪ್ರಧಾನ ಮಂತ್ರಿ ಮೋದಿ ಅವರ ಜೊತೆಗಿನ ಭೇಟಿ ಯಾವಾಗಲೂ ಸ್ಫೂರ್ತಿದಾಯಕವಾಗಿರುತ್ತದೆʼ ಎಂದು ಟೆಕ್‌ ದೈತ್ಯ, ಮೈಕ್ರೋಸಾಫ್ಟ್‌ (Microsoft) ಸಂಸ್ಥಾಪಕ ಬಿಲ್‌ ಗೇಟ್ಸ್‌ ಹೇಳಿದ್ದಾರೆ. ಭಾರತ ಪ್ರವಾಸದಲ್ಲಿರುವ ಬಿಲ್‌ ಗೇಟ್ಸ್‌ (Bill gates India visit), ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ ಹಲವು ವಿಷಯಗಳನ್ನು ಚರ್ಚಿಸಿದರು.

“ಮೋದಿಯವರೊಂದಿಗಿನ ಭೇಟಿ ಯಾವಾಗಲೂ ಸ್ಫೂರ್ತಿದಾಯಕ (inspiring). ನಮ್ಮ ನಡುವೆ ಚರ್ಚಿಸಲು ಬಹಳಷ್ಟು ವಿಷಯ ಇತ್ತು. ನಾವು ಸಾರ್ವಜನಿಕ ಒಳಿತಿಗಾಗಿ AI ಕುರಿತು ಮಾತನಾಡಿದೆವು. ಡಿಪಿಐ (ಡಿಜಿಟಲ್‌ ಮೂಲಸೌಕರ್ಯ); ಅಭಿವೃದ್ಧಿಯಲ್ಲಿ ಮಹಿಳಾ ನೇತೃತ್ವ; ಕೃಷಿ, ಆರೋಗ್ಯ ಮತ್ತು ಹವಾಮಾನ ಹೊಂದಾಣಿಕೆಯಲ್ಲಿ ನಾವೀನ್ಯತೆ; ಮತ್ತು ನಾವು ಭಾರತದಿಂದ ಜಗತ್ತಿಗೆ ಯಾವ ಪಾಠಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಚರ್ಚಸಿದೆವು” ಎಂದು ಬಿಲ್‌ ಗೇಟ್ಸ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

First Published on Vistara News.


Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!