China Flag: ಇಸ್ರೋ ರಾಕೆಟ್‌ನಲ್ಲಿ ಚೀನಾ ಧ್ವಜ; ʼಸಣ್ಣ ತಪ್ಪುʼ ಎಂದ ತಮಿಳುನಾಡು ಸಚಿವ

 China Flag: ತಮಿಳುನಾಡಿಗೆ ಎರಡು ದಿನಗಳ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಇಸ್ರೋ ಕೇಂದ್ರವನ್ನು ಉದ್ಘಾಟಿಸಿದ್ದರು. ನಂತರ ರ್ಯಾಲಿಯಲ್ಲಿ ಡಿಎಂಕೆ ಜಾಹೀರಾತನ್ನು ಟೀಕಿಸಿದ್ದರು.


ತೂತುಕುಡಿ: ತಮಿಳುನಾಡಿನಲ್ಲಿ ಇಸ್ರೋದ (ISRO) ಹೊಸ ಉಪಗ್ರಹ ಉಡಾವಣಾ ಸಂಕೀರ್ಣಕ್ಕೆ (Satellite launch complex) ಸಂಬಂಧಿಸಿದ ಜಾಹೀರಾತಿನಲ್ಲಿ (DMK advertisement) ಚೀನಾ ಧ್ವಜ (china flag) ಪ್ರಕಟಿಸಿರುವ ತಮಿಳುನಾಡು ಸರ್ಕಾರದ ತಪ್ಪು ಇದೀಗ ಟ್ರೋಲ್‌ ಆಗಿದೆ. ತಮಿಳುನಾಡಿನ ಸಚಿವರೊಬ್ಬರು ʼಇದೊಂದು ಸಣ್ಣ ತಪ್ಪುʼ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ʼಇದು ಜಾಹೀರಾತು ವಿನ್ಯಾಸಗಾರರ ಕುಚೋದ್ಯದಿಂದ ಉಂಟಾಗಿರುವುದು. ಇದೊಂದು ಸಣ್ಣ ತಪ್ಪು. ಡಿಎಂಕೆಗೆ ಇದರಲ್ಲಿ ಬೇರೆ ಯಾವುದೇ ಉದ್ದೇಶಗಳಿಲ್ಲ” ಎಂದು ಡಿಎಂಕೆ ನಾಯಕ, ಮೀನುಗಾರಿಕಾ ಸಚಿವ ಅನಿತ ಆರ್. ರಾಧಾಕೃಷ್ಣನ್ ಹೇಳಿದ್ದಾರೆ.

“ಜಾಹೀರಾತಿನಲ್ಲಿ ಒಂದು ಸಣ್ಣ ತಪ್ಪಾಗಿದೆ. ನಮಗೆ ಬೇರೆ ಉದ್ದೇಶವಿಲ್ಲ. ನಮ್ಮ ಹೃದಯದಲ್ಲಿ ಭಾರತದ ಬಗ್ಗೆ ಪ್ರೀತಿ ಮಾತ್ರ ಇದೆ. ಭಾರತವು ಜಾತಿ ಅಥವಾ ಧರ್ಮದ ಆಧಾರದಲ್ಲಿ ಯಾವುದೇ ಘರ್ಷಣೆಗೆ ಅವಕಾಶ ನೀಡದೆ ಒಗ್ಗಟ್ಟಿನಿಂದ ಇರಬೇಕೆಂಬುದು ತಮ್ಮ ಪಕ್ಷದ ನಿಲುವಾಗಿದೆ” ಎಂದು ಅವರು ಹೇಳಿದ್ದಾರೆ.

First Published on Vistara News

Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!