Lok Sabha Election 2024: ಸುಮಲತಾ ಆಗ್ತಾರಾ ರೆಬೆಲ್?; 3 ಕ್ಷೇತ್ರದಲ್ಲೂ ಜೆಡಿಎಸ್‌ಗೆ ಬಂಡಾಯದ ಟ್ರಬಲ್!
Lok Sabha Election 2024: ಕಳೆದ ಬಾರಿಯೇ ಮಂಡ್ಯದಂತಹ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ನಿಂತು ಗೆದ್ದು ತೋರಿಸಿದ್ದ ಸುಮಲತಾ ಅವರು ಈ ಬಾರಿ ರೆಬೆಲ್ ಆಗುತ್ತಾರಾ? ಜೆಡಿಎಸ್‌ಗೆ ಟ್ರಬಲ್ ಕೊಡುತ್ತಾರಾ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಯಾವುದಕ್ಕೂ ಈ ಬಗ್ಗೆ ಸೋಮವಾರ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ಅಲ್ಲದೆ, ಬಾಕಿ 2 ಕ್ಷೇತ್ರಗಳಾದ ಕೋಲಾರ ಹಾಗೂ ಹಾಸನದಲ್ಲಿ ಸಹ ಜೆಡಿಎಸ್‌ಗೆ ಬಿಜೆಪಿ ರೆಬೆಲ್‌ಗಳು ತಲೆನೋವು ತಂದಿದ್ದಾರೆ.
ಬೆಂಗಳೂರು: ಲೋಕಸಭಾ ಚುನಾವಣೆ 2024 (Lok Sabha Election 2024) ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಯಾರಿಗಳು ಜೋರಾಗಿ ನಡೆಯುತ್ತಿವೆ. ಕರ್ನಾಟಕದಲ್ಲಿಯೂ ಕೆಲವು ಹೈವೋಲ್ಟೇಜ್ ಕ್ಷೇತ್ರಗಳಿದ್ದು, ಎಲ್ಲರ ಕಣ್ಣು ಅದರತ್ತ ನೆಟ್ಟಿದೆ. ಇದರ ಭಾಗವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ಷೇತ್ರದ ಮೇಲೆ ಬಿಜೆಪಿ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಕಣ್ಣಿಟ್ಟಿರುವ ಹಾಲಿ ಸಂಸದೆ ಸುಮಲತಾ ಅಂಬರೀಶ್‌ಗೆ ಈಗ ಭಾರಿ ನಿರಾಸೆಯಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಎಂದು ಬಿಜೆಪಿ ಅಧಿಕೃತವಾಗಿ ಘೋಷಣೆ ಮಾಡಿದ ಬೆನ್ನಲ್ಲೆ ಎಚ್ಚೆತ್ತ ಸುಮಲತಾ ಮಂಡ್ಯದಲ್ಲಿ ಸೋಮವಾರ (ಮಾ. 25) ಮುಖಂಡರ ಸಭೆ ಕರೆದಿದ್ದಾರೆ.
ಕಳೆದ ಬಾರಿಯೇ ಮಂಡ್ಯದಂತಹ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ನಿಂತು ಗೆದ್ದು ತೋರಿಸಿದ್ದ ಸುಮಲತಾ ಅವರು ಈ ಬಾರಿ ರೆಬೆಲ್ ಆಗುತ್ತಾರಾ? ಜೆಡಿಎಸ್‌ಗೆ ಟ್ರಬಲ್ ಕೊಡುತ್ತಾರಾ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಯಾವುದಕ್ಕೂ ಈ ಬಗ್ಗೆ ಸೋಮವಾರ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ.
ಸಭೆಯಲ್ಲಿ ಆಪ್ತರೊಂದಿಗೆ ಚರ್ಚೆ ಮಾಡಿದ ನಂತರ ಮುಂದಿನ ನಿರ್ಧಾರದ ಬಗ್ಗೆ ಘೋಷಣೆ ಮಾಡಲಿದ್ದಾರೆ. ಇಲ್ಲಿ ಮೈತ್ರಿಗೆ ಸಪೋರ್ಟ್ ಮಾಡಬೇಕಾ? ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕೆ ಇಳಿಯಬೇಕಾ ಎಂಬುದನ್ನು ಸುಮಲತಾ ಅಂಬರೀಷ್ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
First Published on Vistara News.

Comments
Post a Comment