Lok Sabha Election 2024 : ಬಾಗಲಕೋಟೆ ಕೈ ಟಿಕೆಟ್‌; ಸಂಯುಕ್ತಾ ಪಾಟೀಲ್‌ಗೆ GO BACK ಬಿಸಿ ಮುಟ್ಟಿಸಿದ ವೀಣಾ

 Lok Sabha Election 2024 : ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗಾಗಿ ವೀಣಾ ಕಾಶಪ್ಪನವರ್‌ ಮತ್ತು ಸಂಯುಕ್ತಾ ಪಾಟೀಲ್‌ ನಡುವಿನ ಫೈಟ್‌ ಮುಗಿಲು ಮುಟ್ಟಿದೆ.


ಬಾಗಲಕೋಟೆ : ಬಾಗಲಕೋಟೆ ಲೋಕಸಭಾ ಕ್ಷೇತ್ರದ (Bagalakote Constituency) ಕಾಂಗ್ರೆಸ್‌ ಟಿಕೆಟ್‌ (Bagalakote Congress Ticket) ರಾಜ್ಯದ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಅವರ ಪುತ್ರಿ ಸಂಯುಕ್ತಾ ಪಾಟೀಲ್‌ (Samyukta Patil) ಅವರಿಗೆ ಸಿಗಲಿದೆ ಎಂಬ ಸುದ್ದಿ ಹರಡಿದೆ. ಅದರ ಬೆನ್ನಿಗೇ ಜಿಲ್ಲೆಯಲ್ಲಿ ಗೋ ಬ್ಯಾಕ್‌ ಸಂಯುಕ್ತಾ ಪಾಟೀಲ್‌ (Go Back Samyukta Patil) ಅಭಿಯಾನವೂ ಶುರುವಾಗಿದೆ. ಈ ಕ್ಷೇತ್ರದ (Lok Sabha Election 2024) ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ವೀಣಾ ಕಾಶಪ್ಪನವರ್‌ (Veena Kashappanavar) ಅವರ ಬೆಂಬಲಿಗರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅತ್ತ ವೀಣಾ ಕಾಶಪ್ಪನವರ್‌ ಅವರು ದಿಲ್ಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಮುಂದೆಯೇ ಟಿಕೆಟ್‌ಗಾಗಿ ಕಣ್ಣೀರು ಹಾಕಿದ್ದಾರೆ.

ವೀಣಾ ಕಾಶಪ್ಪನವರ್‌ ಅವರು ಬಾಗಲಕೋಟೆ ಜಿಲ್ಲೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರ ಪತ್ನಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಆದರೆ, ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡುತ್ತಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ, ವಿಜಯಪುರ ಜಿಲ್ಲೆಯವರಾಗಿರುವ ಸಂಯುಕ್ತಾ ಪಾಟೀಲ್‌ ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎಂಬ ಸುದ್ದಿ ವೀಣಾ ಬೆಂಬಲಿಗರನ್ನು ಕೆರಳಿಸಿದೆ.

First Published on Vistara News.

Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!