Lok Sabha Election 2024: ಕಾಂಗ್ರೆಸ್ ಪ್ರಣಾಳಿಕೆ ಪ್ರಕಟ; ʼನಾರಿ ನ್ಯಾಯ’ ಗ್ಯಾರಂಟಿಯಲ್ಲಿ ಏನೇನಿದೆ?
Lok Sabha Election 2024: ಮಹಿಳಾ ಮತದಾರರನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ʼನಾರಿ ನ್ಯಾಯ’ ಗ್ಯಾರಂಟಿ ಯೋಜನೆಯಲ್ಲಿ ಏನೇನು ಭರವಸೆ ಇದೆ? ಇಲ್ಲಿದೆ ಉತ್ತರ.
ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election 2024) ಕಾಂಗ್ರೆಸ್ ಸಜ್ಜಾಗಿದೆ. ಈ ಬಾರಿ ಹೇಗಾದರೂ ಅಧಿಕಾರ ಹಿಡಿಯಬೇಕು ಎನ್ನುವ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿದೆ. ಅದರ ಭಾಗವಾಗಿ ಇಂದು (ಮಾರ್ಚ್ 13) ಕೈ ಪಡೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 5 ಘೋಷಣೆಗಳನ್ನು ಹೊರಡಿಸಲಾಗಿದೆ. ಅದರಲ್ಲೂ ಮಹಿಳೆಯನ್ನು ಗಮನದಲ್ಲಿಟ್ಟು ಈ ಯೋಜನೆಗಳನ್ನು ಪ್ರಕಟಿಸಲಾಗಿದ್ದು, ಇದಕ್ಕೆ ʼನಾರಿ ನ್ಯಾಯ’ ಗ್ಯಾರಂಟಿ ಎಂದು ಹೆಸರಿಡಲಾಗಿದೆ. ಈ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
First Published on Vistara News.

Comments
Post a Comment