Lok sabha Election 2024 : ಟಿಕೆಟ್‌ ಕೈತಪ್ಪಿದ ಆಕ್ರೋಶ; ಬಿಜೆಪಿ ಕಚೇರಿಗೇ ಸಂಗಣ್ಣ ಕರಡಿ ಬೆಂಬಲಿಗರ ದಾಳಿ

 Lok sabha Election 2024 : ಕೊಪ್ಪಳದಲ್ಲಿ ಟಿಕೆಟ್‌ ಮಿಸ್‌ ಆಗಿರುವ ಸಂಗಣ್ಣ ಕರಡಿ ಅವರ ಬೆಂಬಲಿಗರು ಆಕ್ರೋಶಿತರಾಗಿ ಬಿಜೆಪಿ ಕಚೇರಿಗೇ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದಾರೆ. ಅಭ್ಯರ್ಥಿ ಬಸವರಾಜ ಅವರಿಗೂ ಮುತ್ತಿಗೆ ಹಾಕಿದ್ದಾರೆ.


ಕೊಪ್ಪಳ: ಕೊಪ್ಪಳ ಸಂಸದರಾಗಿರುವ ಕರಡಿ ಸಂಗಣ್ಣ (Koppala MP Sanganna Karadi) ಅವರಿಗೆ ಬಿಜೆಪಿ ಟಿಕೆಟ್‌ ಮಿಸ್‌ ಆಗಿರುವುದು ಅವರ ಬೆಂಬಲಿಗರನ್ನು ಕೆರಳಿಸಿದೆ. ಅವರು ಎಷ್ಟರ ಮಟ್ಟಿಗೆ ಆಕ್ರೋಶಿತರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಕಚೇರಿಗೇ ನುಗ್ಗಿ ದಾಂಧಲೆ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ (Lok sabha Election 2024) ಸಂಗಣ್ಣ ಕರಡಿ ಬದಲು ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್‌ ಪಡೆದಿರುವ ಡಾ. ಕೆ. ಬಸವರಾಜ (BJP Candidate Dr. K Basavaraja) ಹಾಗೂ ದೊಡ್ಡನಗೌಡ ಪಾಟೀಲ್ ಮಾಧ್ಯಮಗೋಷ್ಠಿ ನಡೆಯುತ್ತಿದ್ದಾಗಲೇ ಲಗ್ಗೆ ಇಟ್ಟ ಅಭಿಮಾನಿಗಳು ಕಲ್ಲು ತೂರಾಟ ನಡೆಸಿ ಕಿಟಕಿಗಳನ್ನು ಒಡೆದು ಹಾಕಿದ್ದಾರೆ. ಭಾರತ ಮಾತೆಯ ಫೋಟೊವನ್ನೂ ಪುಡಿಗಟ್ಟಿದ್ದಾರೆ.

ಸಂಗಣ್ಣ ಕರಡಿ ಮನೆಗೆ ಬಂದ ಅಭ್ಯರ್ಥಿ ಬಸವರಾಜ ಘೇರಾವ್‌

ಈ ನಡುವೆ, ನೂತನ ಅಭ್ಯರ್ಥಿ ಡಾ. ಕೆ. ಬಸವರಾಜ ಅವರು ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ಭೇಟಿಯಾಗಲು ಮನೆಗೆ ಬಂದಾಗಲೂ ಬೆಂಬಲಿಗರ ಆಕ್ರೋಶ ಜೋರಾಗಿತ್ತು. ಅಭ್ಯರ್ಥಿ ಡಾ. ಕೆ. ಬಸವರಾಜ ಅವರು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಜೊತೆಗೆ ಆಗಮಿಸಿದಾಗ ಅವರನ್ನು ತಡೆದ ಸಂಗಣ್ಣ ಬೆಂಬಲಿಗರು ಆಕ್ರೋ ವ್ಯಕ್ತಪಡಿಸಿದರು.

First Published on Vistara News.

Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!