Lok Sabha Election: ಮಹಾರಾಷ್ಟ್ರ ವಿಪಕ್ಷ ಮೈತ್ರಿಯಲ್ಲಿ ಒಪ್ಪಂದ ಪೂರ್ಣ; ಯಾರಿಗೆ ಎಷ್ಟು ಸೀಟು?
Lok Sabha Election: ಮಹಾರಾಷ್ಟ್ರದ ವಿಪಕ್ಷ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ 2024ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದವನ್ನು ಮಾಡಿಕೊಂಡಿದೆ. ಅದರಂತೆ ಕಾಂಗ್ರೆಸ್ 18 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎನ್ನಲಾಗಿದೆ. ಅಧಿಕೃತ ಘೋಷಣೆ ಸದ್ಯದಲ್ಲೇ ಹೊರ ಬೀಳಲಿದೆ.
ಮುಂಬೈ: ಮಹಾರಾಷ್ಟ್ರದ ವಿಪಕ್ಷ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ (Maha Vikas Aghadi) 2024ರ ಲೋಕಸಭೆ ಚುನಾವಣೆ (Lok Sabha Election)ಗೆ ಸೀಟು ಹಂಚಿಕೆ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. 48 ಗಂಟೆಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ ಬಣ ರಾಜ್ಯದ 48 ಲೋಕಸಭಾ ಸ್ಥಾನಗಳ ಪೈಕಿ 20ರಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ 18ರಲ್ಲಿ ಕಣಕ್ಕಿಳಿಯಿದೆ. ಇನ್ನುಳಿದ 10 ಸ್ಥಾನಗಳಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಈ ಹಿಂದೆ ಐದು ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದ ಪ್ರಾದೇಶಿಕ ಪಕ್ಷವಾದ ವಂಚಿತ್ ಬಹುಜನ್ ಅಘಾಡಿ (Vanchit Bahujan Aghadi) ಶಿವಸೇನೆಯ (ಯುಬಿಟಿ)ಯಿಂದ ಎರಡು ಸ್ಥಾನಗಳನ್ನು ಪಡೆಯಲಿದೆ.

Comments
Post a Comment