Madhavi Lata: ಓವೈಸಿ ವಿರುದ್ಧ ಹಿಂದು ಸಿಂಹಿಣಿಗೆ ಟಿಕೆಟ್‌ ಕೊಟ್ಟ ಬಿಜೆಪಿ; ಯಾರಿವರು ಮಾಧವಿ?

 Madhavi Latha: ಹಿಂದುತ್ವ ಕುರಿತು ಭಾಷಣಗಳ ಮೂಲಕವೇ ಮನೆಮಾತಾಗಿರುವ ಮಾಧವಿ ಲತಾ ಕೊಂಪೆಲ್ಲ ಅವರಿಗೆ ಬಿಜೆಪಿಯು ಹೈದರಾಬಾದ್‌ ಲೋಕಸಭೆ ಕ್ಷೇತ್ರದಿಂದ ಟಿಕೆಟ್‌ ನೀಡಿದೆ. ಇವರು ಅಸಾದುದ್ದೀನ್‌ ಓವೈಸಿಗೆ ಟಕ್ಕರ್‌ ಕೊಡಲಿದ್ದಾರೆ ಎಂದೇ ಹೇಳಲಾಗುತ್ತಿದೆ.


ಹೈದರಾಬಾದ್:‌ ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಬಿಜೆಪಿಯು 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ದೇಶದ ಘಟಾನುಘಟಿ ಅಭ್ಯರ್ಥಿಗಳ ವಿರುದ್ಧ ಘಟಾನುಘಟಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಕೇರಳದ ತಿರುವನಂತಪುರಂ ಕ್ಷೇತ್ರದಲ್ಲಿ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ (Rajeev Chandrashekhar) ಅವರಿಗೆ ಟಿಕೆಟ್‌ ನೀಡಲಾಗಿದ್ದು, ಕಾಂಗ್ರೆಸ್‌ನ ಶಶಿ ತರೂರ್‌ (Shashi Tharoor) ಅವರಿಗೆ ತೀವ್ರ ಸ್ಪರ್ಧೆ ಎದುರಾಗಿದೆ. ಅದರಲ್ಲೂ, ಹೈದರಾಬಾದ್‌ ಲೋಕಸಭೆ ಕ್ಷೇತ್ರದಲ್ಲಿ ಹಿಂದು ಫೈರ್‌ಬ್ರ್ಯಾಂಡ್‌ ಡಾ. ಮಾಧವಿ ಲತಾ ಕೊಂಪೆಲ್ಲ (Madhavi Latha Kompella) ಅವರಿಗೆ ಟಿಕೆಟ್‌ ನೀಡಲಾಗಿದೆ. ಇದು ಎಐಎಂಐಎಂ ಮುಖ್ಯಸ್ಥ, ಹಾಲಿ ಸಂಸದ ಅಸಾದುದ್ದೀನ್‌ ಓವೈಸಿ (Asaduddin Owaisi) ಅವರಿಗೆ ಬಿಜೆಪಿ ಒಡ್ಡಿರುವ ಬಹುದೊಡ್ಡ ಸವಾಲು ಎಂದೇ ಹೇಳಲಾಗುತ್ತಿದೆ.

ಹಿಂದು ಧರ್ಮದ ಕುರಿತು ಪ್ರಖರವಾಗಿ ಮಾತನಾಡುವ, ಹೈದರಾಬಾದ್‌ನಲ್ಲಿ ಎಐಎಂಐಎಂ ಪಕ್ಷದ ವೈಫಲ್ಯಗಳನ್ನು ತೋರಿಸುವ ಛಾತಿ ಹೊಂದಿರುವ ಡಾ. ಮಾಧವಿ ಲತಾ ಕೊಂಪೆಲ್ಲ ಅವರು ಹಿಂದು ಫೈರ್‌ ಬ್ರ್ಯಾಂಡ್‌ ಎನಿಸಿದ್ದಾರೆ. ಇವರಿಗೆ ಅಚ್ಚರಿಯ ರೀತಿಯಲ್ಲಿ ಬಿಜೆಪಿಯು ಹೈದರಾಬಾದ್‌ ಲೋಕಸಭೆ ಕ್ಷೇತ್ರದಿಂದ ಟಿಕೆಟ್‌ ನೀಡಿದೆ. ಹಾಗಾಗಿ, ಈ ಬಾರಿ ಹೈದರಾಬಾದ್‌ನಲ್ಲಿ ಡಾ. ಮಾಧವಿ ಲತಾ ಕೊಂಪೆಲ್ಲ ಅವರು ಅಸಾದುದ್ದೀನ್‌ ಓವೈಸಿ ಅವರಿಗೆ ತೀವ್ರ ಪೈಪೋಟಿ ನೀಡುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.


Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!