Naveen Patnaik: ಒಡಿಶಾದ ನವೀನ್‌ ಪಟ್ನಾಯಕ್‌ ಕೂಡ ಎನ್‌ಡಿಎಗೆ ಘರ್‌ ವಾಪ್ಸಿ, ಮಾತುಕತೆ ಅಂತಿಮ

 Naveen Patnaik: 2009ರಲ್ಲಿ ಎನ್‌ಡಿಎ ಜತೆ ಮುರಿದುಕೊಂಡ ತನ್ನ ಸಂಬಂಧವನ್ನು ಬಿಜೆಡಿ 15 ವರ್ಷಗಳ ನಂತರ ಮರುಸ್ಥಾಪಿಸಿದಂತಾಗಲಿದೆ. ಎರಡೂ ಪಕ್ಷಗಳು 1998ರಿಂದ 2009ರವರೆಗೆ ಮಿತ್ರಪಕ್ಷಗಳಾಗಿದ್ದವು.


ಹೊಸದಿಲ್ಲಿ: ಒಡಿಶಾದ ನವೀನ್‌ ಪಟ್ನಾಯಕ್‌ (Naveen Patnaik) ನೇತೃತ್ವದ ಬಿಜು ಜನತಾ ದಳ (Biju Janata DAl- BJD- ಬಿಜೆಡಿ) ಮತ್ತು ಭಾರತೀಯ ಜನತಾ ಪಕ್ಷ (BJP) ಭುವನೇಶ್ವರ ಮತ್ತು ದೆಹಲಿಯಲ್ಲಿ ಏಕಕಾಲದಲ್ಲಿ ಸಭೆಗಳನ್ನು ನಡೆಸಿದ್ದು, ಇಬ್ಬರ ನಡುವೆ ಮೈತ್ರಿ ಮಾತುಕತೆ (Seat sharing) ನಡೆದಿರುವುದು ಖಚಿತವಾಗಿದೆ. ಲೋಕಸಭೆ ಚುನಾವಣೆಗೆ (Lok Sabha Election 2024) ಎರಡೂ ಪಕ್ಷಗಳು ಜೊತೆಯಾಗಿ ಹೋಗಲಿವೆ.

ಒಡಿಶಾದ ಜಾಜ್‌ಪುರ ಜಿಲ್ಲೆಯ ಚಂಡಿಖೋಲ್ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬೃಹತ್ ಸಾರ್ವಜನಿಕ ಸಭೆಯ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಮಾತುಕತೆ ಅಂತಿಮ ಹಂತದಲ್ಲಿದ್ದು, ಕೇವಲ ಔಪಚಾರಿಕ ಪ್ರಕಟಣೆಗಾಗಿ ಕಾಯುತ್ತಿದೆ. ಮೈತ್ರಿ ಸಂಭವಿಸಿದಲ್ಲಿ, 2008ರ ಕಂಧಮಾಲ್ ಗಲಭೆಯ ನಂತರ 2009ರಲ್ಲಿ ಎನ್‌ಡಿಎ ಜತೆ ಮುರಿದುಕೊಂಡ ತನ್ನ ಸಂಬಂಧವನ್ನು 15 ವರ್ಷಗಳ ನಂತರ BJD ಮರುಸ್ಥಾಪಿಸಿದಂತಾಗಲಿದೆ.

First Published on Vistara News.

Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!