Randeep Hooda: ಸಾವರ್ಕರ್ ಪಾತ್ರಧಾರಿ ರಣದೀಪ್ ಹೂಡಾಗೆ ಬಿಜೆಪಿ ಲೋಕಸಭೆ ಟಿಕೆಟ್?
Randeep Hooda: ರಣದೀಪ್ ಹೂಡಾ ಅವರು ಹರಿಯಾಣದ ರೋಹ್ಟಕ್‌ನವರಾಗಿದ್ದಾರೆ. ಈ ಕ್ಷೇತ್ರದಲ್ಲಿ ಜಾಟ್ ಸಮುದಾಯದ ಪ್ರಾಬಲ್ಯವಿದೆ. ಹಾಗಾಗಿ, ನಟನಿಗೆ ಬಿಜೆಪಿ ನಾಯಕರು ಮಣೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸೇರಿ ಸಕಲ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಚುನಾವಣೆ ಪ್ರಚಾರ, ಅಭ್ಯರ್ಥಿಗಳ ಆಯ್ಕೆ ಸೇರಿ ಹಲವು ರೀತಿಯ ಕಸರತ್ತು ನಡೆಸುತ್ತಿವೆ. ಬಿಜೆಪಿಯು ಈಗಾಗಲೇ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಗೆಲ್ಲುವ ಕುದುರೆಗಳಿಗೆ ಹೆಚ್ಚಿನ ಮಣೆ ಹಾಕುತ್ತಿದೆ. ಇನ್ನು, ‘ಸ್ವತಂತ್ರ ವೀರ ಸಾವರ್ಕರ್’ (Swatantrya Veer Savarkar) ಸಿನಿಮಾದಲ್ಲಿ ವೀರ ಸಾವರ್ಕರ್ ಪಾತ್ರ ನಿರ್ವಹಿಸಿರುವ ನಟ ರಣದೀಪ್ ಹೂಡಾ (Randeep Hooda) ಅವರು ಕೂಡ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪರ್ಧಿಸಲಿದ್ದು, ಬಿಜೆಪಿ ಅವರಿಗೆ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದೆ.
ಹರಿಯಾಣದ ರೋಹ್ಟಕ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ರಣದೀಪ್ ಹೂಡಾ ಅವರು ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ರಣದೀಪ್ ಹೂಡಾ ಅವರು ಹರಿಯಾಣದ ರೋಹ್ಟಕ್‌ನವರಾಗಿದ್ದು, ವೀರ ಸಾವರ್ಕರ್ ಸಿನಿಮಾ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಡುತ್ತಿದೆ. ಅದರಲ್ಲೂ, ರಣದೀಪ್ ಹೂಡಾ ಹಾಗೂ ಬಿಜೆಪಿ ವಿಚಾರಗಳ ಮಧ್ಯೆ ಸಾಮ್ಯತೆ ಇರುವುದರಿಂದ ಬಿಜೆಪಿಯ ಹಿರಿಯ ನಾಯಕರು ರಣದೀಪ್ ಹೂಡಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
First Published on Vistara News.

Comments
Post a Comment