HD Devegowda: ನಾನು ಇನ್ನೆರಡು ವರ್ಷ ಬದುಕಬಹುದು ಎಂದು ಕಣ್ಣೀರು ಹಾಕಿದ ದೇವೇಗೌಡರು
HD Devegowda: ನಾನು ಇನ್ನೆರಡು ವರ್ಷ ಬದುಕಬಹುದು… ನಾನು ಏನು ಮಾಡಬೇಕು ಅನ್ನೊದು ನಿತ್ಯ ಯೋಚನೆ ಮಾಡುತ್ತಿರುತ್ತೇನೆ ಎಂದು ದೊಡ್ಡಗೌಡರು ಕಣ್ಣೀರು ಹಾಕಿದ್ದಾರೆ.
ಹಾಸನ: ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (HD Devegowda) ಅವರು ಕಣ್ಣೀರು ಹಾಕಿರುವುದು ಕಂಡುಬಂದಿದೆ. ಜಿಲ್ಲೆಯ ಸಕಲೇಶಪುರ ಕಟ್ಟಾಯ ಹೋಬಳಿ ಸತ್ತಿಗರಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ನಾನು ಇನ್ನೆರಡು ವರ್ಷ ಬದುಕಬಹುದು… ನಾನು ಏನು ಮಾಡಬೇಕು ಅನ್ನೊದು ನಿತ್ಯ ಯೋಚನೆ ಮಾಡುತ್ತಿರುತ್ತೇನೆ ಎಂದು ದೊಡ್ಡಗೌಡರು ಕಣ್ಣೀರು ಹಾಕಿದ್ದಾರೆ.
ನಾನು ಹನಿ ನೀರಾವರಿ, ಟ್ರ್ಯಾಕ್ಟರ್, ಟಿಲ್ಲರ್‌ಗೆ ಸಬ್ಸಿಡಿ ಕೊಟ್ಟಿದ್ದೆ. ಚಿಕ್ಕಬಳ್ಳಾಪುರ ಸಭೆಯಲ್ಲಿ ನಮ್ಮ ರಾಜ್ಯದ ಕಾವೇರಿ ನೀರನ್ನು ನಮಗೆ ಕೊಡಲ್ಲ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಹೇಳುತ್ತಿದ್ದಾರೆ ಎಂದು ಮೋದಿಗೆ ಹೇಳಿದೆ. ನೀವು ಕೇವಲ ಹಾಸನ ಮಾತ್ರವಲ್ಲ ರಾಜ್ಯದ 28ಕ್ಕೆ 28 ಕ್ಷೇತ್ರ ಗೆಲ್ಲಿಸಬೇಕು, ಅಮೇಲೆ ನೋಡುತ್ತೀನಿ ಎಂದು ಹೇಳಿದರು.
ನಮ್ಮ ಗೌಡ ಬರ್ತಾನೆ ಏನಾದರೂ ಮಾಡುತ್ತಾನೆ ಅಂತ ಇಲ್ಲಿ 20 ಹಳ್ಳಿ ಜನ ಸೇರಿದ್ದೀರಿ. ನನ್ನ ಮನಸ್ಸಲ್ಲಿ ನೋವಿದೆ, ಮೋದಿ ಜೊತೆ ಕೂತು ಪೋಟೋ ತೆಗೆಸಿಕೊಳ್ಳುವುದಲ್ಲ. ನಿಮ್ಮನ್ನು ನೋಡಿದಾಗ ನನಗೆ ತುಂಬಾ ನೋವಿದೆ. ನಿಮ್ಮನ್ನು ಗೆಲ್ಲಿಸುತ್ತೇವೆ ಅಂತ ಬಂದಿರುವ ಪುಣ್ಯಾತ್ಮರು ನೀವು, ನಿಮಗೆ ಸಾಷ್ಟಾಂಗ ನಮಸ್ಕಾರ. ನಾನು ಇನ್ನೆರಡು ವರ್ಷ ಬದುಕಬಹುದು… ನಾನು ಏನು ಮಾಡಬೇಕು ಅನ್ನೊದು ನಿತ್ಯ ಯೋಚನೆ ಮಾಡುತ್ತಿರುತ್ತೇನೆ. ಮೋದಿಯವರು 400 ಸೀಟು ಪಕ್ಕ ಅಂತಾರೆ, ಅವರು ಪ್ರಧಾನ ಮಂತ್ರಿ ಆಗೋದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು.
First Published on Vistara News.

Comments
Post a Comment