Himanta Biswa Sarma: ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಜನರಿಗೆ ಹೆಚ್ಚು ಸೂಕ್ತ: ಹಿಮಂತ ಬಿಸ್ವಾ ಶರ್ಮಾ
Himanta Biswa Sarma: ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ಸಂಭಾವ್ಯ ಉಮೇದುವಾರಿಕೆ ಕುರಿತು ಮಾತನಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಹಾಗೂ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಸ್ಸಾಂ: ಕಾಂಗ್ರೆಸ್ (congress) ಪಕ್ಷ ಪಾಕಿಸ್ತಾನದಲ್ಲಿ (pakistan) ಚುನಾವಣೆ (election) ಗೆಲ್ಲುವ ತಯಾರಿ ಮಾಡಿದಂತಿದೆ. ರಾಹುಲ್ ಗಾಂಧಿ (rahul gandhi) ಅವರು ಪ್ರಧಾನಿ (PM) ಅಭ್ಯರ್ಥಿಯಾಗಲು ಸೂಕ್ತವೇ ಎಂದು ಪ್ರಶ್ನಿಸಿರುವ ಅಸ್ಸಾಂ (assam) ಮುಖ್ಯಮಂತ್ರಿ (cm) ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಟೀಕಿಸಿ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ಸಂಭಾವ್ಯ ಉಮೇದುವಾರಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಪಪ್ಪುಗೆ ಉತ್ತಮ ಅಭ್ಯರ್ಥಿ ಎಂದು ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆ ಭಾರತಕ್ಕಿಂತ ಪಾಕಿಸ್ತಾನದ ಹಿತಾಸಕ್ತಿಗಳೊಂದಿಗೆ ಹೆಚ್ಚು ಹೊಂದಿಕೆಯಾಗಿದೆ. ಕಾಂಗ್ರೆಸ್ ಪಕ್ಷವು ಪಾಕಿಸ್ತಾನದಲ್ಲಿ ಚುನಾವಣೆ ಗೆಲ್ಲುವ ರೀತಿಯಲ್ಲಿ ಸಿದ್ಧವಾಗಿದೆ. ನಾವು ಪ್ರಣಾಳಿಕೆಯನ್ನು ಓದಿದ್ದೇವೆ ಮತ್ತು ಓದಿದ ಅನಂತರ ಈ ಪ್ರಣಾಳಿಕೆಯು ಪಾಕಿಸ್ತಾನಕ್ಕೆ ಹೆಚ್ಚು ಮತ್ತು ಭಾರತಕ್ಕೆ ಕಡಿಮೆ ಎಂದು ತೀರ್ಮಾನಿಸಿದೆವು ಎಂದು ತಿಳಿಸಿದರು.
First Published on Vistara News.

Comments
Post a Comment