KS Eshwarappa: ಮೋದಿ ಚಿತ್ರ ನಾನೂ ಬಳಸುವೆ: ಕೋರ್ಟ್ ಮೊರೆ ಹೋದ ಈಶ್ವರಪ್ಪ
ತಾನು ಮೋದಿಯವರ ಚಿತ್ರ ಬಳಸುವುದನ್ನು ಬಿಜೆಪಿ ತಡೆಯದಿರಲಿ ಎಂದು ಮುಂದಾಲೋಚನೆಯಿಂದ ಈಶ್ವರಪ್ಪ (KS Eshwarappa) ಕೋರ್ಟ್ ಮೊರೆ ಹೋಗಿದ್ದಾರೆ.
ಶಿವಮೊಗ್ಗ: ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದಲ್ಲಿ ಪಿಎಂ ನರೇಂದ್ರ ಮೋದಿ (PM Narendra Modi) ಅವರ ಭಾವಚಿತ್ರ ಬಳಸಿಕೊಳ್ಳುವ ವಿಚಾರದಲ್ಲಿ ಶಿವಮೊಗ್ಗದಲ್ಲಿ (Shimogga) ಬಿಗ್ ಫೈಟ್ ಶುರುವಾಗಿದೆ. ಬಿಜೆಪಿಯಿಂದ (BJP) ಸಿಡಿದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್ ಈಶ್ವರಪ್ಪ (KS Eshwarappa) ಮೋದಿ ಭಾವಚಿತ್ರ ಬಳಕೆಗೆ ಅವಕಾಶ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.
ಈಶ್ವರಪ್ಪ ಪ್ರಚಾರದ ವೇಳೆ ಮೋದಿ ಅವರ ಫೋಟೋ ಬಳಕೆ ಮಾಡಿಕೊಂಡಿದ್ದಕ್ಕೆ ಬಿ.ವೈ ರಾಘವೇಂದ್ರ ಅವರು ವ್ಯಂಗ್ಯವಾಡಿದ್ದರು. ರಾಘವೇಂದ್ರಗೆ ತಿರುಗೇಟು ನೀಡಿದ್ದ ಈಶ್ವರಪ್ಪ (KS Eshwarappa) ಅವರು, “ಮೋದಿ ಏನು ಅವರಪ್ಪನ ಮನೆಯ ಆಸ್ತಿನಾ?” ಎಂದು ಕಿಡಿಕಾರಿದ್ದರು. ಇದೀಗ, ಮೋದಿ ಚಿತ್ರ ಬಳಕೆಗೆ ಬಿಜೆಪಿಯವರು ತಡೆ ತಾರದಂತೆ ಮುಂಚಿತವಾಗಿಯೇ ಶಿವಮೊಗ್ಗ ಕೋರ್ಟ್‌ನಲ್ಲಿ ಕೆವಿಯಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಸಿಗದೆ ಇರುವ ಕಾತಣಕ್ಕೆ ಬಂಡಾಯವೆದ್ದಿರುವ ಈಶ್ವರಪ್ಪ, ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈಗಾಗಲೇ ಈಶ್ವರಪ್ಪ ಚುನಾವಣಾ ಪ್ರಚಾರದ ಕಾರ್ಯವನ್ನು ಶುರು ಮಾಡಿಕೊಂಡಿದ್ದಾರೆ. “ರಾಘವೇಂದ್ರ ಅವರನ್ನು ಸೋಲಿಸಲೆಂದೇ ನನ್ನನ್ನು ಪಕ್ಷೇತರನಾಗಿ ಸ್ಪರ್ಧಿಸುವಂತೆ ಅಮಿತ್ ಶಾ ಮಾಡಿದ್ದಾರೆ. ಆದ್ದರಿಂದ ನಾನು ಮಾತಾಡಲು ಅವಕಾಶ ಕೇಳಿ ದಿಲ್ಲಿಗೆ ಹೋದರೂ ಅವಕಾಶ ಕೊಟ್ಟಿಲ್ಲ. ಯಡಿಯೂರಪ್ಪ- ರಾಘವೇಂದ್ರ ಅವರನ್ನು ನಾನು ಸೋಲಿಸುವುದು ಅವರಿಗೆ ಬೇಕಾಗಿದೆ” ಎಂದು ಈಶ್ವರಪ್ಪ ಟಾಂಗ್ ನೀಡಿದ್ದರು.
First Published on Vistara News.

Comments
Post a Comment