Lok Sabha Election 2024: ಬೆಂಗಳೂರು ಗ್ರಾಮಾಂತರದಲ್ಲಿ 5 ಸಾವಿರ ರೂ. ಕಾರ್ಡ್ ಹಂಚುತ್ತಿರುವ ಡಿಕೆ ಬ್ರದರ್ಸ್! ಮುನಿರತ್ನ ಆಕ್ರೋಶ
Lok Sabha Election 2024: ನಮ್ಮ ಕ್ಷೇತ್ರದಲ್ಲಿ ರೌಡಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದರೆ ಊರು ಬಿಟ್ಟು ಹೋಗು ಅಂತ ಧಮ್ಕಿ ಹಾಕುತ್ತಿದ್ದಾರೆ. ಕನಕಪುರದಲ್ಲಿ ಹುಟ್ಟಿ ಬೆಳೆದವರು ಈ ರೀತಿ ಮಾಡುತ್ತಿದ್ದಾರೆ. ಗುತ್ತಿಗೆದಾರರ ದುಡ್ಡು, ಅಪಾರ್ಟ್ಮೆಂಟ್‌ಗಳ ದುಡ್ಡು ಬರುತ್ತಿದೆ ಅಂತ ಜನ ಹೇಳುತ್ತಿದ್ದಾರೆ. ಎಡಗೈಯಲ್ಲಿ ಅವರಿಂದ ಹಣ ಪಡೆಯಿರಿ, ಬಲಗೈಯಲ್ಲಿ ಮಂಜುನಾಥ್‌ಗೆ ವೋಟ್ ಹಾಕಿ. ಡಿಕೆಶಿ ನೋಟು ಡಾಕ್ಟರ್‌ಗೆ ವೋಟು ಅಂತ ಹೇಳುತ್ತಿದ್ದೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಹತ್ತು ವರ್ಷಗಳಿಂದ ಇರುವ ಬೇವು ಹೋಗಿ ಬೆಲ್ಲ ಸಿಗಲಿ ಎಂದು ಮುನಿರತ್ನ ಹೇಳಿದ್ದಾರೆ.
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ದಿನೇ ದಿನೆ ಕಾವು ಪಡೆದುಕೊಳ್ಳುತ್ತಿದೆ. ಎಲ್ಲಿ ನೋಡಿದರೂ ಪ್ರಚಾರದ ಭರಾಟೆ. ಈ ನಡುವೆ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ. ಮತದಾರರಿಗೆ ಸೀರೆ, ಕುಕ್ಕರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಉಡುಗೊರೆಯಾಗಿ ಕೊಡುವ ಮೂಲಕ ಆಮಿಷ ವೊಡ್ಡಲಾಗುತ್ತಿದೆ. ಈಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ (Bangalore Rural Lok Sabha constituency) ಕಾಂಗ್ರೆಸ್ ವಿರುದ್ಧ “ಕಾರ್ಡ್ ಪಾಲಿಟಿಕ್ಸ್”ನ (Card Politics) ಗಂಭೀರ ಆರೋಪವೊಂದು ಕೇಳಿಬಂದಿದೆ. ಪ್ರತಿ ಕುಟುಂಬಕ್ಕೆ ಐದು ಸಾವಿರ ರೂಪಾಯಿ ಕಾರ್ಡ್ ಕೊಡಲಾಗುತ್ತಿದೆ ಎಂದು ಶಾಸಕ ಮುನಿರತ್ನ (MLA Muniratna) ಆರೋಪ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಮುನಿರತ್ನ ಅವರು ಡಿಕೆ ಬ್ರದರ್ಸ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಹಿಂದೆ ಐದು ಸಾವಿರ ರೂಪಾಯಿ ಕಾರ್ಡ್ ಹಂಚಿಕೆ ಮಾಡಿ ಐದು ಕ್ಷೇತ್ರಗಳನ್ನು ಗೆದ್ದಿದ್ದರು. ಈಗ ಮತ್ತೆ ಕಾರ್ಡ್ ಹಂಚಿಕೆ ಮಾಡುತ್ತಿದ್ದಾರೆ. ಶೆಟ್ಟಿ ಕೊಟ್ಟಿರುವ ಸಾಲ ವಾಪಸ್ ಕೊಟ್ಟರೆ, ಹೊಸ ಸಾಲ ಕೊಡ್ತಾನೆ. ಇನ್ನು ಆ ಕಾರ್ಡ್ ಕೊಟ್ಟಿರುವ ಐದು ಸಾವಿರ ರೂಪಾಯಿ ತೀರಿಸಿಲ್ಲ. ಈ ಚುನಾವಣೆಯಲ್ಲಿ ನಮ್ಮ ಮತದಾರ ಪ್ರಭು ತೀರಿಸುತ್ತಾನೆ ಎಂದು ಆರೋಪ ಮಾಡಿದರು.
.png)
Comments
Post a Comment