Lok Sabha Election: ನಿನ್ನೆ ಈ ಗ್ರಾಮದ ಒಬ್ಬರೂ ಮತ ಹಾಕಲಿಲ್ಲ; ಇದ್ದಿದ್ದು ಯಾರ ಭಯ?

 Lok Sabha Election: ಛತ್ತೀಸ್‌ಗಢದ ಪುವರ್ತಿ ಗ್ರಾಮದಲ್ಲಿ 352 ಮತದಾರರಿದ್ದಾರೆ. ಗ್ರಾಮಕ್ಕೆ ತೆರಳಿದ ಚುನಾವಣೆ ಅಧಿಕಾರಿಗಳು ಮತದಾನಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿದ್ದರು. ಮತಗಟ್ಟೆ ಬಳಿ ಭದ್ರತಾ ಸಿಬ್ಬಂದಿಯು ಸಕಲ ರೀತಿಯಲ್ಲಿ ಭದ್ರತೆ ಒದಗಿಸಿದ್ದರು. ಇಷ್ಟಾದರೂ ಗ್ರಾಮದ ಒಬ್ಬನೇ ಒಬ್ಬ ಮತದಾರ ಹಕ್ಕು ಚಲಾಯಿಸಿಲ್ಲ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಮಾವೋವಾದಿ ನಾಯಕನ ಭಯದಿಂದಾಗಿ ಜನ ಮತದಾನ ಮಾಡಿಲ್ಲ ಎಂದು ತಿಳಿದುಬಂದಿದೆ.


ರಾಯ್‌ಪುರ: ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಶುಕ್ರವಾರ (ಏಪ್ರಿಲ್‌ 19) ಮುಕ್ತಾಯಗೊಂಡಿದೆ. 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನ ಮುಗಿದಿದ್ದು, ಶೇ.60ರಷ್ಟು ಮತದಾನ ದಾಖಲಾಗಿದೆ. ಕೆಲವು ಪ್ರದೇಶಗಳು ಹೊರತುಪಡಿಸಿ ಎಲ್ಲೆಡೆ ಶಾಂತಿಯುತವಾಗಿಯೇ ಮತದಾನ ನಡೆದಿದೆ. ಆದರೆ, ಛತ್ತೀಸ್‌ಗಢದ ಬಸ್ತಾರ್‌ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಪುವರ್ತಿ ಎಂಬ ಗ್ರಾಮದಲ್ಲಿ (Puvarti Village) ಮಾತ್ರ ಶುಕ್ರವಾರ ಒಬ್ಬರೇ ಒಬ್ಬರು ಮತದಾನ ಮಾಡಿಲ್ಲ. ಇದು ಮಾವೋವಾದಿಯೊಬ್ಬನ ಊರಾಗಿದ್ದು, ಆತನ ಭಯದಿಂದಾಗಿಒಬ್ಬರೂ ಮತದಾನ ಮಾಡಲ್ಲ ಎಂದು ತಿಳಿದುಬಂದಿದೆ.

ಹೌದು, ಪುವರ್ತಿ ಗ್ರಾಮವು ನಕ್ಸಲ್‌ ನಾಯಕ ಹಿದ್ಮಾ ಎಂಬಾತನ ಹುಟ್ಟೂರಾಗಿದೆ. ಇಡೀ ಬಸ್ತಾರ್‌ ವ್ಯಾಪ್ತಿಯಲ್ಲಿ ಹಿದ್ಮಾನ ಪ್ರಭಾವ ಇದೆ. ಈತನ ಭಯವು ಜನರಲ್ಲಿ ಹೆಚ್ಚು ಕಾಡುತ್ತಿದೆ.‌ ಬಸ್ತಾರ್‌ ಪ್ರದೇಶದಲ್ಲಿಯೇ ಎಲ್ಲಿಯೇ ಮಾವೋವಾದಿಗಳ ದಾಳಿಯಾಗಲಿ, ಭದ್ರತಾ ಸಿಬ್ಬಂದಿ ಸೇರಿ ಸಾರ್ವಜನಿಕರ ಹತ್ಯೆಯಾಗಲಿ, ಆಗೆಲ್ಲ ಹಿದ್ಮಾನ ಹೆಸರೇ ಮುನ್ನೆಲೆಗೆ ಬರುತ್ತದೆ. ಈತನೇ ದಾಳಿಯ ರೂವಾರಿ ಎಂಬುದು ಜನರ ದೃಢ ನಂಬಿಕೆಯಾಗಿರುತ್ತದೆ. ಇದೇ ಕಾರಣಕ್ಕಾಗಿ, ಪುವರ್ತಿ ಗ್ರಾಮದಲ್ಲಿ ಶುಕ್ರವಾರ ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಿದರೂ, ಭದ್ರತಾ ಸಿಬ್ಬಂದಿಯು ಹೆಚ್ಚು ಭದ್ರತೆ ಒದಗಿಸಿದರೂ ಯಾರೊಬ್ಬರೂ ಮತದಾನ ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ಅಣಕವಾಗಿದೆ.

First Published on Vistara News.


Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!