Pralhad Joshi: ಯುಪಿಎ ಕಾಲದಲ್ಲಿ ಸತ್ತ ಉಗ್ರನಿಗಾಗಿ ಸೋನಿಯಾ ಗಾಂಧಿ ಕಣ್ಣೀರಿಟ್ಟಿದ್ದರು: ಪ್ರಲ್ಹಾದ್‌ ಜೋಶಿ

 Pralhad Joshi: ಉಗ್ರನ ಸಾವಿಗೆ ಕಣ್ಣೀರಿಟ್ಟ ನಾಯಕರು ಯಾರಾದರೂ ಇದ್ರೆ ಅದು ಸೋನಿಯಾ ಗಾಂಧಿ ಮಾತ್ರ. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ತುಷ್ಟೀಕರಣ ರಾಜಕಾರಣದ ಒಂದು ಭಾಗವಾಗಿಯೇ ಇದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.


ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ತುಷ್ಟೀಕರಣದ ಕೆಸರಲ್ಲೇ ಹೊರಳಾಡುತ್ತಿದೆ. ಅದರಿಂದ ಹೊರಗಡೆ ಬರುವ ಮಾನಸಿಕತೆಯೇ ಅದರ ನಾಯಕರಿಗೆ ಇಲ್ಲವಾಗಿದೆ. ಯುಪಿಎ ಕಾಲದಲ್ಲಿ ನಡೆದ ದೆಹಲಿಯ ಬಾಟ್ಲಾ ಹೌಸ್ ಪ್ರಕರಣದಲ್ಲಿ ಒಬ್ಬ ಉಗ್ರಗಾಮಿ ಮತ್ತು ಇನ್ಸ್‌ಪೆಕ್ಟರ್‌ ಮೋಹನ್ ಚಂದ್ ಶರ್ಮಾ ಹತರಾಗಿದ್ದರು. ಆದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಉಗ್ರ ಹತನಾಗಿದ್ದಕ್ಕೆ ಕಣ್ಣೀರಿಟ್ಟಿದ್ದರು ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯ ಹುಬ್ಬಳ್ಳಿಯ ಎಂ.ಆರ್. ಸಾಖರೆ ಶಾಲಾ ಆವರಣದಲ್ಲಿ ಭಾನುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ತುಷ್ಟೀಕರಣ ರಾಜಕಾರಣದ ಒಂದು ಭಾಗವಾಗಿಯೇ ಇದೆ. ಬಾಟ್ಲಾ ಹೌಸ್ ಪ್ರಕರಣದಲ್ಲಿ ಒಬ್ಬ ಅಮಾಯಕ ಮುಸಲ್ಮಾನ್ ಸತ್ತನೆಂದು ಸೋನಿಯಾ ಗಾಂಧಿ ರಾತ್ರಿಯಿಡಿ ನಿದ್ರೆ ಮಾಡದೇ ಕಣ್ಣೀರು ಹಾಕಿದ್ದರು. ಆದರೆ, ಇವರಿಗೆ ಒಬ್ಬ ಪೊಲೀಸ್ ಅಧಿಕಾರಿ ಪ್ರಾಣ ಬಿಟ್ಟಿರುವುದು ಗಣನೆಗೆ ಬರಲಿಲ್ಲ. ಉಗ್ರನ ಸಾವಿಗೆ ಕಣ್ಣೀರಿಟ್ಟ ನಾಯಕರು ಯಾರಾದರೂ ಇದ್ರೆ ಅದು ಸೋನಿಯಾ ಗಾಂಧಿ ಎಂದು ಜೋಶಿ ಹೇಳಿದರು.

First Published on Vistara News.

Comments

Popular posts from this blog

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!