Trust Of The Nation 2024 : ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ; ಡೈಲಿಹಂಟ್ ಸಮೀಕ್ಷೆ
Trust Of The Nation 2024: ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 61% ಜನರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ತುಂಬಾ ಸಂತೋಷವಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯಗಳನ್ನು ಭಾರತದಾದ್ಯಂತ ವಿವಿಧ ಜನ ಸಮುದಾಯ ಮತ್ತು ವೃತ್ತಿಪರ ಗುಂಪುಗಳಿಂದ ಸಂಗ್ರಹಿಸಲಾಗಿದೆ. ಹೀಗಾಗಿ ಅಭಿಪ್ರಾಯಗಳು ಬಹುತೇಕ ಜನರ ಇಂಗಿತದ ಪ್ರತಿಫಲನವಾಗಿದೆ.
ನವದೆಹಲಿ: 2024 ರ ಲೋಕಸಭಾ ಚುನಾವಣೆಯ (Lok Sabha Election) ಮೊದಲ ಹಂತ ಏಪ್ರಿಲ್ 19ರಂದು ನಡೆದಿದೆ. ಇನ್ನೂ ಆರು ಹಂತಗಳ ಮತದಾನ ಪ್ರಕ್ರಿಯೆ ಬಾಕಿ ಉಳಿದಿದೆ. ಮತದಾನ ಜಾತ್ರೆಯ ಹಿನ್ನೆಲೆಯಲ್ಲಿ ಸ್ಥಳೀಯ ಭಾಷೆಗಳ ಕಂಟೆಂಟ್ ಡಿಸ್ಕವರಿ ಫ್ಲ್ಯಾಟ್ಫಾರ್ಮ್ “ಡೈಲಿಹಂಟ್’ (Trust Of The Nation 2024) ನಡೆಸಿದ “ಟ್ರಸ್ಟ್ ಆಫ್ ದಿ ನೇಷನ್” ಸಮೀಕ್ಷೆಯು ಭಾರತದ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬುದನ್ನು ಬಹಿರಂಗ ಮಾಡಿದೆ. 77 ಲಕ್ಷಕ್ಕೂ ಹೆಚ್ಚು ಮತದಾರರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದು ಭಾರತದ ಉತ್ತಮ ನಾಯಕತ್ವ, ಸಮರ್ಥ ಆರ್ಥಿಕ ನಿರ್ವಹಣೆ ಮತ್ತು ಪ್ರಸ್ತುತ ಸರ್ಕಾರದ ಒಟ್ಟಾರೆ ಕಾರ್ಯಕ್ಷಮತೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳ ಇಲ್ಲ ವ್ಯಕ್ತಗೊಂಡಿವೆ. ಈ ಸಮೀಕ್ಷೆಯ ಸಮಗ್ರ ವಿವರ ಈ ಕೆಳಗೆ ನೀಡಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?
ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.63ರಷ್ಟು ಮಂದಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ವಿವರವಾದ ಅಂಕಿ ಅಂಶಗಳು ಪಿಎಂ ಮೋದಿಯವರನ್ನು ಭಾರತದ ಬಹುತೇಕ ರಾಜ್ಯಗಳ ಜನರು ತಮ್ಮ ನೆಚ್ಚಿನ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಈ ವಿಚಾರದಲ್ಲಿ ತಮಿಳುನಾಡು ಮತ್ತು ಕೇರಳದಲ್ಲಿ ವ್ಯತಿರಿಕ್ತ ಅಭಿಪ್ರಾಯಗಳು ಮೂಡಿ ಬಂದಿವೆ.
First Published on Vistara News.

Comments
Post a Comment