Posts

Showing posts from March, 2024

Lok Sabha Election 2024 : ಮೋದಿ ಜನಪ್ರಿಯತೆ ಉತ್ತುಂಗಕ್ಕೆ, ಮತ್ತೊಮ್ಮೆ ಸರ್ಕಾರ ಗ್ಯಾರಂಟಿ ಎಂದ ವಿಜಯೇಂದ್ರ

Image
  Lok Sabha Election 2024 : ಪ್ರಧಾನಿ ನರೇಂದ್ರ ಮೊದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿ ಗೆದ್ದು ಅಧಿಕಾರಕ್ಕೇರುವುದು ಖಚಿತ ಎಂದು ಬಿ.ವೈ ವಿಜಯೇಂದ್ರ ಹೇಳಿದರು. ಬೆಂಗಳೂರು:  ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 10 ವರ್ಷಗಳು ಕಳೆದರೂ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೇ ಏರುತ್ತಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ( Lok Sabha Election 2024 ) ಮುಂದಿನ ಬಾರಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ವಿಶ್ಲೇಷಿಸಿದ್ದಾರೆ. ಹೋಟೆಲ್ ಜಿ.ಎಂ. ರಿಜಾಯ್ಸ್‌ ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ (BJP Media Centre) ಉದ್ಘಾಟನೆ ಸಂದರ್ಭದಲ್ಲಿ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಮತ್ತೊಮ್ಮೆ ಮೋದಿ ಸರಕಾರ ಎಂಬುದು ಕೇವಲ ಬಿಜೆಪಿ ಕಾರ್ಯಕರ್ತರ ಆಶಯವಲ್ಲ; ಇದು ರಾಜ್ಯದ ಮತ್ತು ದೇಶದ ಜವಾಬ್ದಾರಿಯುತ ನಾಗರಿಕ ಮತದಾರರ ನಿರ್ಧಾರ. ನರೇಂದ್ರ ಮೋದಿಯವರ ಕಳೆದ 10 ವರ್ಷಗಳ ಕಾರ್ಯವೈಖರಿ, ಆಡಳಿತ ವೈಖರಿ, ಕೇಂದ್ರದ ಮೋದಿ ನೇತೃತ್ವದ ಜನಪರ ಯೋಜನೆಗಳ ಪರಿಣಾಮವಾಗಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದು 10 ವರ್ಷಗಳು ಕಳೆದರೂ ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿದೆ ಎಂದು ಹೇಳಿದರು. F...

Archana Patil: ಕಾಂಗ್ರೆಸ್‌ಗೆ ಶಾಕ್, ಕೇಂದ್ರದ ಮಾಜಿ ಸಚಿವನ ಸೊಸೆ ಬಿಜೆಪಿ ಸೇರ್ಪಡೆ!

Image
  Archana Patil : ಡಾ.ಅರ್ಚನಾ ಪಾಟೀಲ್‌ ಚಕುರ್ಕರ್‌ ಅವರು ಕಳೆದ ಸೋಮವಾರವೇ ಬಿಜೆಪಿ ಸೇರಬೇಕಿತ್ತು. ಆದರೆ, ಮಗಳ ಮದುವೆ ಇದ್ದ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯನ್ನು ಅವರು ಮುಂದೂಡಿದ್ದರು. ಇವರು ಡಾ.ಅರ್ಚನಾ ಪಾಟೀಲ್‌ ಅವರು ಲೈಫ್‌ಕೇರ್‌ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಚೇರ್‌ಪರ್ಸನ್‌ ಆಗಿದ್ದಾರೆ. ಆದಾಗ್ಯೂ, ಬಿಜೆಪಿಯಲ್ಲಿ ಇವರಿಗೆ ಯಾವ ಜವಾಬ್ದಾರಿ ನೀಡಲಾಗುತ್ತದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಮುಂಬೈ:  ಲೋಕಸಭೆ ಚುನಾವಣೆಗೆ ( Lok Sabha Election 2024 ) ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ಗೆ ಮಹಾರಾಷ್ಟ್ರದಲ್ಲಿ (Maharashtra) ಭಾರಿ ಹಿನ್ನಡೆಯಾಗಿದೆ. ಕೇಂದ್ರದ ಮಾಜಿ ಸಚಿವ, ಲೋಕಸಭೆ ಸ್ಪೀಕರ್‌, ಕಾಂಗ್ರೆಸ್‌ ನಾಯಕರೂ ಆದ ಶಿವರಾಜ್‌ ಪಾಟೀಲ್‌ ಅವರ ಸೊಸೆ ಡಾ.ಅರ್ಚನಾ ಪಾಟೀಲ್‌ ಚಕುರ್ಕರ್‌ (Dr Archana Patil Chakurkar) ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಸಮ್ಮುಖದಲ್ಲಿ ಡಾ.ಅರ್ಚನಾ ಪಾಟೀಲ್‌ ಚಕುರ್ಕರ್‌ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ದೇವೇಂದ್ರ ಫಡ್ನವಿಸ್‌ ಅವರ ಅಧಿಕೃತ ನಿವಾಸ ‘ಸಾಗರ್‌’ದಲ್ಲಿ ಡಾ.ಅರ್ಚನಾ ಪಾಟೀಲ್‌ ಚಕುರ್ಕರ್‌ ಅವರು ಬಿಜೆಪಿ ಸೇರಿದರು. ಇವರನ್ನು ದೇವೇಂದ್ರ ಫಡ್ನವಿಸ್‌ ಅವರು ಸ್ವಾಗತಿಸಿದರು. “ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ನಾರಿಶಕ್ತಿ ವಂದನ್‌ ಅಧಿನಿಯಮ ಯೋಜನೆಯನ್ನು ಮ...

Lok Sabha Election 2024: ಏ.3ಕ್ಕೆ ಮಂಡ್ಯದಲ್ಲೇ ನಿರ್ಧಾರ ಪ್ರಕಟಿಸುವೆ ಎಂದ ಸುಮಲತಾ! ಸ್ವತಂತ್ರ ಸ್ಪರ್ಧೆ ಸುಳಿವು?

Image
  Lok Sabha Election 2024 : ಚುನಾವಣೆ ಸ್ಪರ್ಧೆ ಸಂಬಂಧ ಸುಮಲತಾ ಅಂಬರೀಶ್‌ ಅವರು ಬೆಂಗಳೂರಿನ ನಿವಾಸದಲ್ಲಿ ಕರೆದಿದ್ದ ಮಹತ್ವದ ಸಭೆಯಲ್ಲಿ ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸಂಸದೆ, ತಮ್ಮ ರಾಜಕೀಯ ಮುಂದಿನ ನಡೆ ಬಗ್ಗೆ ಏ.3ರಂದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಬೆಂಗಳೂರು:  ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಎಂಬ ತೀರ್ಮಾನವನ್ನು ಏ.3ರಂದು ಮಂಡ್ಯದಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಸಭೆ ನಡೆಸಿ, ಘೋಷಣೆ ಮಾಡುವುದಾಗಿ ಸುಮಲತಾ ಅಂಬರೀಶ್‌ ಪ್ರಕಟಿಸಿದ್ದಾರೆ. ಹೀಗಾಗಿ ಅವರ ಸ್ಪರ್ಧೆ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿದೆ. ಅಲ್ಲದೇ ಅವರು ಅಭಿಮಾನಿಗಳ ಮುಂದೆ ಇಂದು ಆಡಿದ ಮಾತುಗಳನ್ನು ಗಮನಿಸಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದಂತಿದೆ. ಬೆಂಗಳೂರಿನ ಜೆ.ಪಿ.ನಗರದ ನಿವಾಸದಲ್ಲಿ ಸೇರಿದ್ದ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಸುಮಲತಾ ಮಾತನಾಡಿದ್ದಾರೆ. ಮಂಡ್ಯದಿಂದಲೇ ನನ್ನ ರಾಜಕೀಯ ಜೀವನ ಆರಂಭವಾಗಿದೆ. ಅಂಬರೀಶ್‌ ಅಭಿಮಾನಿಗಳ ಆಶೀರ್ವಾದದಿಂದ ನಾನು ಸಂಸದೆಯಾಗಿದ್ದೇನೆ. ಐದು ವರ್ಷಗಳ ಹಿಂದೆ ಈ ಪರಿಸ್ಥಿತಿಯೇ ನಿರ್ಮಾಣವಾಗಿತ್ತು. ಆಗ ನನಗೆ ಬೆಂಬಲವಾಗಿ ನಿಂತದ್ದು ಇದೇ ಅಭಿಮಾನಿಗಳು. ಮಂಡ್ಯ ಬಿಟ್ಟು ನನಗೆ ರಾಜಕಾರಣವೇ ಬೇಡ ಎಂದು ಹೇಳಿದ್ದೆ. ಈಗಲೂ ಅದೇ ನನ್ನ ಮ...

BJP Manifesto: ಪ್ರಣಾಳಿಕೆ ತಯಾರಿಸಲು ಸಮಿತಿ ರಚಿಸಿದ ಬಿಜೆಪಿ; ಯಾರೆಲ್ಲ ಇದ್ದಾರೆ?

Image
  BJP Manifesto : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಪ್ರಣಾಳಿಕೆ ತಯಾರಿಸುವ ದಿಸೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಪ್ರಣಾಳಿಕೆ ರಚಿಸಲು ಬಿಜೆಪಿಯು ಸಮಿತಿಯೊಂದನ್ನು ರಚಿಸಿದೆ. ಸಮಿತಿ ಶಿಫಾರಸಿನ ಬಳಿಕ ಬಿಜೆಪಿಯು ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ನವದೆಹಲಿ:  ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಶತಾಯಗತಾಯ ಗೆಲುವು ಸಾಧಿಸಲು ಮುಂದಾಗಿರುವ ಬಿಜೆಪಿಯು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಹಿಡಿದು ಪ್ರಮುಖ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೇ, ಪ್ರಣಾಳಿಕೆ ರಚಿಸುವ ದೃಷ್ಟಿಯಿಂದ ಬಿಜೆಪಿಯು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ನೇತೃತ್ವದಲ್ಲಿ ಬಿಜೆಪಿಯು ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ( BJP Election Manifesto Committee ) ರಚಿಸಿದೆ. ಸಮಿತಿಯಲ್ಲಿ ಬಿಜೆಪಿಯ 27 ನಾಯಕರಿದ್ದಾರೆ. ಸಮಿತಿಯಲ್ಲಿ ಯಾರಿದ್ದಾರೆ? ಬಿಜೆಪಿಯ ಪ್ರಣಾಳಿಕೆ ಸಮಿತಿಗೆ ರಾಜನಾಥ್‌ ಸಿಂಗ್‌ ಅವರು ಅಧ್ಯಕ್ಷರಾಗಿದ್ದಾರೆ. ಇನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಮಿತಿಯ ಸಂಚಾಲಕಿಯಾಗಿದ್ದಾರೆ. ಪಿಯೂಷ್‌ ಗೋಯಲ್‌ ಅವರು ಸಹ ಸಂಚಾಲಕರಾಗಿದ್ದಾರೆ. ಇನ್ನುಳಿದಂತೆ ಅರ್ಜುನ್‌...

CM Siddaramaiah: ಗ್ಯಾರಂಟಿ ಯೋಜನೆ ಬಗ್ಗೆ ಜನರಿಗೆ ಸತ್ಯ ತಿಳಿಸಿ; ಸಿಎಂ ಸಿದ್ದರಾಮಯ್ಯ ಕರೆ

Image
  PM Narendra Modi : ನಮ್ಮ ನಾಡಿನ ಜನತೆಗೆ, ಮಹಿಳೆಯರಿಗೆ, ಯುವ ಸಮೂಹಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುತ್ತಿರುವುದು ನಮ್ಮ ಕಾಂಗ್ರೆಸ್ ಸರ್ಕಾರ. ಆದರೆ ಬಿಜೆಪಿಯವರು ಮಾಮೂಲಿಯಂತೆ ಸುಳ್ಳು ಹೇಳುತ್ತಾ ನಮ್ಮ ಕಾರ್ಯಕ್ರಮಗಳನ್ನು ಅವರ ಕಾರ್ಯಕ್ರಮ ಎಂದು ಹೇಳಿಕೊಳ್ಳುವ ಅಪಾಯ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು:  ನಾವು ಬಿಜೆಪಿಯವರಂತೆ ಕೇವಲ ಭಾವನಾತ್ಮಕವಾಗಿ ಕೆರಳಿಸಿ ನಿಮ್ಮ ಕೈಬಿಡುವುದಿಲ್ಲ. ಬಿಜೆಪಿಯವರಂತೆ ಸುಳ್ಳು ಹೇಳಲ್ಲ. ನಿಮ್ಮ ಬದುಕಿಗೆ ಸ್ಪಂದಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ( CM Siddaramaiah ) ಪ್ರಶ್ನೆ ಮಾಡಿದರು. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ (Guarantee Scheme) ಅನುಷ್ಠಾನ ಸಮಿತಿಯ ರಾಜ್ಯ, ಜಿಲ್ಲೆ, ತಾಲೂಕು ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಗ್ಯಾರಂಟಿ ಯೋಜನೆಗಳು ಎಲ್ಲ ಧರ್ಮ, ಎಲ್ಲ ಜಾತಿ, ಎಲ್ಲ ವರ್ಗದವರಿಗೆ ಸೇರಿವೆ. ಸರ್ವರನ್ನೂ ಸಮಾನವಾಗಿ ಕಾಣುವ ಕಾರ್ಯಕ್ರಮಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ರೂಪಿಸುತ್ತಿದೆ. ಜಾರಿ ಮಾಡುತ್ತಿದೆ. ಇವೆಲ್ಲವನ್ನೂ ನೀವುಗಳು ನಾಡಿನ ಜನರಿಗೆ ಸರಿಯಾಗಿ ಅರ್ಥ ಮಾಡಿಸಿ ಬಿಜೆಪಿಯ ಸುಳ್ಳುಗಳಿಗೆ ತಕ್ಕ ಸತ್ಯದ ದಾಖಲೆಗಳನ್ನು ಮಂಡಿಸಿ ಎಂದು ಸಿಎಂ ಸಿದ್ದರಾಮಯ್ಯ ಕ...

Lok Sabha Election 2024: ಸುಮಲತಾ ಆಗ್ತಾರಾ ರೆಬೆಲ್?;‌ 3 ಕ್ಷೇತ್ರದಲ್ಲೂ ಜೆಡಿಎಸ್‌ಗೆ ಬಂಡಾಯದ ಟ್ರಬಲ್‌!

Image
  Lok Sabha Election 2024 : ಕಳೆದ ಬಾರಿಯೇ ಮಂಡ್ಯದಂತಹ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ನಿಂತು ಗೆದ್ದು ತೋರಿಸಿದ್ದ ಸುಮಲತಾ ಅವರು ಈ ಬಾರಿ ರೆಬೆಲ್‌ ಆಗುತ್ತಾರಾ? ಜೆಡಿಎಸ್‌ಗೆ ಟ್ರಬಲ್‌ ಕೊಡುತ್ತಾರಾ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಯಾವುದಕ್ಕೂ ಈ ಬಗ್ಗೆ ಸೋಮವಾರ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ಅಲ್ಲದೆ, ಬಾಕಿ 2 ಕ್ಷೇತ್ರಗಳಾದ ಕೋಲಾರ ಹಾಗೂ ಹಾಸನದಲ್ಲಿ ಸಹ ಜೆಡಿಎಸ್‌ಗೆ ಬಿಜೆಪಿ ರೆಬೆಲ್‌ಗಳು ತಲೆನೋವು ತಂದಿದ್ದಾರೆ. ಬೆಂಗಳೂರು:  ಲೋಕಸಭಾ ಚುನಾವಣೆ  2024 ( Lok Sabha Election 2024 ) ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಯಾರಿಗಳು ಜೋರಾಗಿ ನಡೆಯುತ್ತಿವೆ. ಕರ್ನಾಟಕದಲ್ಲಿಯೂ ಕೆಲವು ಹೈವೋಲ್ಟೇಜ್‌ ಕ್ಷೇತ್ರಗಳಿದ್ದು, ಎಲ್ಲರ ಕಣ್ಣು ಅದರತ್ತ ನೆಟ್ಟಿದೆ. ಇದರ ಭಾಗವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ಷೇತ್ರದ ಮೇಲೆ ಬಿಜೆಪಿ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಕಣ್ಣಿಟ್ಟಿರುವ ಹಾಲಿ ಸಂಸದೆ  ಸುಮಲತಾ  ಅಂಬರೀಶ್‌ಗೆ ಈಗ ಭಾರಿ ನಿರಾಸೆಯಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಎಂದು ಬಿಜೆಪಿ ಅಧಿಕೃತವಾಗಿ ಘೋಷಣೆ ಮಾಡಿದ ಬೆನ್ನಲ್ಲೆ ಎಚ್ಚೆತ್ತ ಸುಮಲತಾ ಮಂಡ್ಯದಲ್ಲಿ ಸೋಮವಾರ (ಮಾ. 25) ಮುಖಂಡರ ಸಭೆ ಕರೆದಿದ್ದಾರೆ. ಕಳೆದ ಬಾರಿಯೇ ಮಂಡ್ಯದಂತಹ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ನಿಂತು ಗೆದ್ದು ತೋರಿಸಿದ್ದ ಸುಮಲತಾ ಅವರು ಈ ಬಾರಿ...

Lok Sabha Election 2024: ಕೋಲಾರ ಟಿಕೆಟ್‌ ಮಿಸ್‌; ಸಿಟ್ಟೆದ್ದು ದೆಹಲಿಗೆ ದೌಡಾಯಿಸಿದ ಮುನಿಸ್ವಾಮಿ!

Image
  Lok Sabha Election 2024 : ದೆಹಲಿಗೆ ದೌಡಾಯಿಸಿರುವ ಹಾಲಿ ಸಂಸದ ಮುನಿಸ್ವಾಮಿ, ಕೋಲಾರ ಕ್ಷೇತ್ರದ ಬಗ್ಗೆ ಜೆ.ಪಿ. ನಡ್ಡಾ ಬಳಿ ಚರ್ಚೆ ಮಾಡಿದ್ದಾರೆ. ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಹೈಕಮಾಂಡ್‌ ಬಳಿ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ. ನವ ದೆಹಲಿ/ಬೆಂಗಳೂರು:  ಲೋಕಸಭಾ ಚುನಾವಣಾ  ( Lok Sabha Election 2024 ) ಸಮರ ಜೋರಾಗುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಪಕ್ಷಗಳು ಹೋರಾಟಕ್ಕೆ ಅಣಿಯಾಗಿವೆ. ಕಾಂಗ್ರೆಸ್‌ ಸಹ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಮೈತ್ರಿ ಪಕ್ಷಗಳಲ್ಲಿ ಸೀಟು ಹಂಚಿಕೆಯಾಗಿದ್ದು,  ಕೋಲಾರ ಲೋಕಸಭಾ ಕ್ಷೇತ್ರ ವು (Kolara Lok Sabha Constituency) ಜೆಡಿಎಸ್‌ ಪಾಲಾಗಿದ್ದರಿಂದ ಹಾಲಿ ಸಂಸದ ಮುನಿಸ್ವಾಮಿಗೆ ಭಾರಿ ನಿರಾಸೆಯಾಗಿದೆ. ಅವರು ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರನ್ನು ಭೇಟಿಯಾಗಿ ತಮ್ಮ ರಿಪೋರ್ಟ್‌ ಕಾರ್ಡ್‌ ನೀಡಿದ್ದಾರೆ. ಅಲ್ಲದೆ, ಕೋಲಾರ ಲೋಕಸಭಾ ಕ್ಷೇತ್ರವು ಬಿಜೆಪಿಯದ್ದು, ಇದನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ನಡುವೆ ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌ (Radha Mohandas Agarwal), ಎಸ...

Lok Sabha Election 2024 : ಬಾಗಲಕೋಟೆ ಕೈ ಟಿಕೆಟ್‌; ಸಂಯುಕ್ತಾ ಪಾಟೀಲ್‌ಗೆ GO BACK ಬಿಸಿ ಮುಟ್ಟಿಸಿದ ವೀಣಾ

Image
  Lok Sabha Election 2024 : ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗಾಗಿ ವೀಣಾ ಕಾಶಪ್ಪನವರ್‌ ಮತ್ತು ಸಂಯುಕ್ತಾ ಪಾಟೀಲ್‌ ನಡುವಿನ ಫೈಟ್‌ ಮುಗಿಲು ಮುಟ್ಟಿದೆ. ಬಾಗಲಕೋಟೆ :  ಬಾಗಲಕೋಟೆ ಲೋಕಸಭಾ ಕ್ಷೇತ್ರದ (Bagalakote Constituency) ಕಾಂಗ್ರೆಸ್‌ ಟಿಕೆಟ್‌ (Bagalakote Congress Ticket) ರಾಜ್ಯದ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಅವರ ಪುತ್ರಿ ಸಂಯುಕ್ತಾ ಪಾಟೀಲ್‌ (Samyukta Patil) ಅವರಿಗೆ ಸಿಗಲಿದೆ ಎಂಬ ಸುದ್ದಿ ಹರಡಿದೆ. ಅದರ ಬೆನ್ನಿಗೇ ಜಿಲ್ಲೆಯಲ್ಲಿ ಗೋ ಬ್ಯಾಕ್‌ ಸಂಯುಕ್ತಾ ಪಾಟೀಲ್‌ (Go Back Samyukta Patil) ಅಭಿಯಾನವೂ ಶುರುವಾಗಿದೆ. ಈ ಕ್ಷೇತ್ರದ ( Lok Sabha Election 2024 ) ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ವೀಣಾ ಕಾಶಪ್ಪನವರ್‌ (Veena Kashappanavar) ಅವರ ಬೆಂಬಲಿಗರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅತ್ತ ವೀಣಾ ಕಾಶಪ್ಪನವರ್‌ ಅವರು ದಿಲ್ಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಮುಂದೆಯೇ ಟಿಕೆಟ್‌ಗಾಗಿ ಕಣ್ಣೀರು ಹಾಕಿದ್ದಾರೆ. ವೀಣಾ ಕಾಶಪ್ಪನವರ್‌ ಅವರು ಬಾಗಲಕೋಟೆ ಜಿಲ್ಲೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರ ಪತ್ನಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಆದರೆ, ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡುತ್ತಲೇ ಚುನಾವಣೆಗೆ ಸಿದ್ಧತೆ...

Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

Image
  Gift Politics : ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಉಜ್ಜನಿ ಗ್ರಾಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ವಿರುದ್ಧ ವೃದ್ಧೆ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ತುಮಕೂರು:  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಆರಂಭಿಸಿವೆ. ಮತದಾರರನ್ನು ಸೆಳೆಯಲು ವಿವಿಧ ರೀತಿಯ ಉಡುಗೊರೆಗಳನ್ನು ನೀಡುತ್ತಿರುವುದೂ ಕಂಡುಬರುತ್ತಿದೆ. ಈ ನಡುವೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಉಜ್ಜನಿ ಗ್ರಾಮದಲ್ಲಿ ಮತದಾರರಿಗೆ ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಹಂಚಿಕೆ ಆರೋಪ ಕೇಳಿಬಂದಿದೆ. ಗ್ರಾಮದಲ್ಲಿ ಕುಕ್ಕರ್ ವಿತರಣೆಯಲ್ಲಿ ತಾರತಮ್ಯ ಮಾಡಿದ್ದಾರೆ, ನನಗ್ಯಾಕೆ ಕುಕ್ಕರ್‌ ನೀಡಿಲ್ಲ ಎಂದು ಕೇಳಿದ ವೃದ್ಧೆ ಮೇಲೆ ಹಲ್ಲೆ ಮಾಡಿರುವುದು ಕಂಡುಬಂದಿದೆ. ಉಜ್ಜನಿ ಗ್ರಾಮದ ಗಂಗಮ್ಮ (75) ಹಲ್ಲೆಗೊಳಗಾದ ವೃದ್ಧೆ. ಕಾಂಗ್ರೆಸ್ ಕಾರ್ಯಕರ್ತ ನಾರಾಯಣ್ ಎಂಬಾತನ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಹಲ್ಲೆಯಿಂದ ಗಾಯಗೊಂಡ ವೃದ್ಧೆಗೆ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್‌ಗೆ ಮತ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತ ನಾರಾಯಣ್, ಕುಕ್ಕರ್‌ ಹಂಚಿ ಹಂಚಿ ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ. ಕುಕ್ಕರ್‌ ಹಂಚಿದಾಗ ಗ್ರಾಮದಲ್ಲಿ ಗಂಗಮ್ಮ ಇರಲಿಲ್ಲ. ಮನೆಗೆ ಬರುತ್ತಿದ್ದಂತೆ ಕುಕ್ಕ...

Vistara News Polling Booth: ತುಮಕೂರು ಕ್ಷೇತ್ರದಲ್ಲಿ ಮತ್ತೆ ಬಿಜೆಪಿಗೆ ಜೈ ಎಂದ ಮತದಾರರು!

Image
  Vistara News Polling Booth : ‘ವಿಸ್ತಾರ ಪೋಲಿಂಗ್ ಬೂತ್’ ಕ್ಯಾಂಪೇನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ತುಮಕೂರು ಕ್ಷೇತ್ರದ ಭವಿಷ್ಯದ ಸಂಸದರು ಯಾರು ಎಂದು ಮತದಾರರು ಅಭಿಪ್ರಾಯ ಹಂಚಿಕೊಂಡಿದ್ದು, ಮತ್ತೊಮ್ಮೆ ಬಿಜೆಪಿಯೇ ಜಯಭೇರಿ ಬಾರಿಸಲಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರು:  ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ (Vistara News) ಸೋಮವಾರ (ಮಾ.18) ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಡೆಸಿದ ಪೋಲಿಂಗ್‌ ಬೂತ್‌ ಸಮೀಕ್ಷೆಯಲ್ಲಿ ( Vistara news polling booth ) ಮತ್ತೆ ಬಿಜೆಪಿಗೆ ಮತದಾರರು ಜೈ ಎಂದಿದ್ದಾರೆ. ಕ್ಷೇತ್ರದಿಂದ ಸಾವಿರಾರು ಕರೆಗಳು ಬಂದಿದ್ದು, ಅವುಗಳಲ್ಲಿ ಒಟ್ಟು 6557 ಕರೆಗಳನ್ನು ಸ್ವೀಕಾರ ಮಾಡಲಾಗಿದೆ. ಇದರಲ್ಲಿ ಶೇ. 60ರಷ್ಟು ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದರೆ, ಶೇಕಡಾ 40ರಷ್ಟು ಜನರು ಕಾಂಗ್ರೆಸ್‌ ಪಕ್ಷದ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಸ್ತಾರ ಪೋಲಿಂಗ್‌ ಬೂತ್‌ನಲ್ಲಿ ಸಂಗ್ರಹಿಸಿದ ಜನಾಭಿಪ್ರಾಯದ ಪ್ರಕಾರ ತುಮಕೂರು ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಗೆ 3934 ಮತದಾರರು ಮತ ನೀಡಿದ್ದು, ಕಾಂಗ್ರೆಸ್‌ ಪಕ್ಷಕ್ಕೆ 2623 ಮತಗಳು ಬಂದಿವೆ. ಹೀಗಾಗಿ ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಜನ ಬೆಂಬಲ ವ್ಯಕ್ತವಾಗಿರುವುದು ಕಂಡು ಬಂದಿದೆ. Firs...

Modi in Shivamogga : ಕರ್ನಾಟಕದಲ್ಲಿ ಎಷ್ಟು ಸಿಎಂಗಳಿದ್ದಾರೆ ಗೊತ್ತಾ? ಇದು ಮೋದಿ ಲೆಕ್ಕ!

Image
  Modi in Shivamogga : ರಾಜ್ಯದಲ್ಲಿ ಎಷ್ಟು ಸಿಎಂಗಳಿದ್ದಾರೆ ಗೊತ್ತಾ? ಹೀಗೆಂದು ಪ್ರಶ್ನಿಸಿದ ಸಿಎಂ ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದಾರೆ. ಹಾಗಿದ್ದರೆ ಅವರ ಪ್ರಕಾರ ರಾಜ್ಯದಲ್ಲಿರುವ ಸಿಎಂಗಳೆಷ್ಟು? ಶಿವಮೊಗ್ಗ :  ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಆಡಳಿತ ನಡೆಸುವ ಒಂದು ಅವಕಾಶವನ್ನು ಜನರು ಒದಗಿಸಿದ್ದರು. ಆದರೆ, ಆ ಪಕ್ಷ ಅದನ್ನೂ ಹಾಳು ಮಾಡಿಕೊಂಡಿದೆ. ಕಾಂಗ್ರೆಸ್‌ ರಾಜ್ಯವನ್ನು ಪಕ್ಷದ ಎಟಿಎಂ ಆಗಿ (Karnataka Congress) ಬಳಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಾಗ್ದಾಳಿ ನಡೆಸಿದರು. ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿ ( Modi in Shivamogga ) ನಡೆದ ಲೋಕಸಭಾ ಚುನಾವಣಾ (Lok Sabha Election 2024) ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿರುವ ಮುಖ್ಯಮಂತ್ರಿಗಳ ಪಟ್ಟಿಯನ್ನೂ (How many CMs in Karnataka) ತೆರೆದಿಟ್ಟರು. ಶಿವಮೊಗ್ಗ, ದಾವಣಗೆರೆ, ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಬಂಧಿಸಿದ ಈ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ಕೈಯಲ್ಲಿ ಅಭಿವೃದ್ಧಿಯ ಒಂದೇ ಒಂದು ಅಜೆಂಡಾ ಇಲ್ಲ ಎಂದು ಆರೋಪಿಸಿದರು. ಕರ್ನಾಟಕದಲ್ಲಂತೂ ಅಭಿವೃದ್ಧಿ ಮಾಡಲು ಒಂದು ನಯಾ ಪೈಸೆ ಕೂಡಾ ಇಲ್ಲ ಎಂದು ಹೇಳಿದರು. First Published on Vistara News .

PM Narendra Modi : ಕಾಂಗ್ರೆಸ್‌ಗೆ ಭ್ರಷ್ಟಾಚಾರವೇ ಉಸಿರು, ಅದರ ಉಸಿರು ನಿಲ್ಲಿಸಿ: ಕಲಬುರಗಿಯಲ್ಲಿ ಮೋದಿ ಕರೆ

Image
  PM Narendra Modi : ಕರ್ನಾಟಕದ ಚುನಾವಣಾ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವೇಶ ಮಾಡಿದ್ದಾರೆ. ಕಲಬುರಗಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು. ಕಲಬುರಗಿ : ಕಾಂಗ್ರೆಸ್‌ ಮತ್ತು ಭ್ರಷ್ಟಾಚಾರವನ್ನು ಬೇರೆ ಬೇರೆ ಮಾಡಲು ಸಾಧ್ಯವೇ ಇಲ್ಲ. ಕಾಂಗ್ರೆಸ್‌ಗೆ ಭ್ರಷ್ಟಾಚಾರವೇ ಉಸಿರು. ಅದಿಲ್ಲದೆ ಒಂದು ಕ್ಷಣವೂ ಅದು ಬದುಕದು. ಕಾಂಗ್ರೆಸ್‌ ಕರ್ನಾಟಕವನ್ನು ಫ್ಯಾಮಿಲಿ ಎಟಿಎಂ ಮಾಡಿಕೊಂಡಿದೆ. ಕರ್ನಾಟಕದ ನಾಯಕರು ಕೆಲವರು ತಿಜೋರಿ ತುಂಬಲು, ಜೇಬು ತುಂಬಲು ಪ್ರಯತ್ನಿಸುತ್ತಿದ್ದಾರೆ. ಈಗ ಭ್ರಷ್ಟಾಚಾರದ ಉಸಿರನ್ನು ನಿಲ್ಲಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ( Lok sabha Election 2024 ) 400 ಸ್ಥಾನಗಳ ಗುರಿ ಹೊತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರ್ನಾಟಕದ ಚುನಾವಣಾ ಅಖಾಡಕ್ಕೆ ಕಲಬುರಗಿ ಮೂಲಕ ಎಂಟ್ರಿ ಕೊಟ್ಟು ಬೃಹತ್‌ ಸಮಾವೇಶದಲ್ಲಿ ಮಾತನಾಡಿದರು. ಕಲಬುರಗಿಯ ಎನ್‌.ವಿ. ಆಟದ ಮೈದಾನದಲ್ಲಿ (Kalaburagi Samavesha) ನಡೆದ ಬೃಹತ್‌ ಸಮಾವೇಶದಲ್ಲಿ ಮಾನಾಡಿದ ಅವರು ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದರು. First Published on Vistara news .

Lok Sabha Election: ಲೋಕಸಭೆ ಚುನಾವಣೆ ಘೋಷಣೆ; 97 ಕೋಟಿ ಜನ ಮತದಾನಕ್ಕೆ ಸಜ್ಜು

Image
  Lok Sabha Election : ಲೋಕಸಭೆ ಚುನಾವಣೆ ದಿನಾಂಕವನ್ನು ಚುನಾವಣೆ ಆಯೋಗವು ಘೋಷಣೆ ಮಾಡಿದೆ. ಈ ಬಾರಿ 97 ಕೋಟಿ ಮತದಾರರು ಹಕ್ಕು ಚಲಾಯಿಸಲು ಸಜ್ಜಾಗಿದ್ದಾರೆ ಎಂದು ಆಯೋಗ ತಿಳಿಸಿದೆ. ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ( Election Commission Of India ) ಲೋಕಸಭೆ ಚುನಾವಣೆ ದಿನಾಂಕ (Lok Sabha Election) ಘೋಷಿಸಿದೆ. ಅದರಲ್ಲೂ. ಈ ಬಾರಿ 97 ಕೋಟಿ ಮತದಾರರು ಹಕ್ಕು ಚಲಾವಣೆ ಮಾಡಲು ಸಜ್ಜಾಗಿದ್ದಾರೆ ಎಂದು ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‌ ಕುಮಾರ್‌ ಮಾಹಿತಿ ನೀಡಿದರು. ಸಮರ್ಪಕ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಆಯೋಗವು ಸಜ್ಜಾಗಿದೆ ಎಂದು ತಿಳಿಸಿದರು. ಈಗಿನಿಂದಲೇ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಯಾರು ಕೂಡ ನಿಯಮಗಳನ್ನು ಮೀರಬಾರದು. ಮಾದರಿ ನೀತಿ ಸಂಹಿತೆ ಜಾರಿ ವೇಳೆ ಹಿಂಸಾಚಾರ ಎಸಗಿದವರ ವಿರುದ್ಧ ಜಾಮೀನು ರಹಿತ ಕೇಸ್‌ ದಾಖಲಿಸಲಾಗುತ್ತದೆ. ಹಣ, ತೋಳ್ಬಲ, ತಪ್ಪು ಮಾಹಿತಿ ರವಾನೆಯನ್ನು ತಡೆಯಲು ಆಯೋಗವು ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಇನ್ನು, ರಾಜಕೀಯ ವ್ಯಕ್ತಿಗಳು ಕೂಡ ವಿಷಯಗಳ ಆಧಾರಿತವಾಗಿ ಪ್ರಚಾರ ಮಾಡಬೇಕೇ ಹೊರತು, ಗೊಂದಲ, ಗಲಾಟೆಗೆ ಅವಕಾಶ ಮಾಡಿಕೊಡಬಾರದು ಎಂದು ಸೂಚಿಸಿದರು. First Published on Vistara News .

‌Lok Sabha Election 2024: ಪ್ರತಾಪ್‌ ಸಿಂಹ, ಕರಡಿ, ಡಿವಿಎಸ್‌ಗೆ ಕಾಂಗ್ರೆಸ್‌ನಿಂದ ಟಿಕೆಟ್‌? ಏನಿದು ಡಿಕೆಶಿ ಪ್ಲ್ಯಾನ್?

Image
  ‌ Lok Sabha Election 2024 : ಲೋಕಸಭೆಯಲ್ಲಿ ಗೆಲವೊಂದೇ ಮಾನದಂಡ ಎಂಬ ಫಾರ್ಮಲಾವನ್ನು ಅಳವಡಿಸಿಕೊಳ್ಳಲು ಪ್ಲ್ಯಾನ್‌ ಮಾಡಿಕೊಂಡಿರುವ ಕೈ ನಾಯಕರು, ಈಗ ಬಿಜೆಪಿಯಲ್ಲಿ ಯಾರು ಯಾರಿಗೆ ಟಿಕೆಟ್ ಮಿಸ್ ಆಗುತ್ತದೆ ಎಂದು ಕಾದು ಕುಳಿತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಡಸಾಲೆಯಲ್ಲಿ ಹಾಲಿ ಸಂಸದರನ್ನು ಸೆಳೆಯುವ ಚರ್ಚೆ ತುಸು ಜೋರಾಗಿಯೇ ಕೇಳಿಬರುತ್ತಿದೆ. ಬೆಂಗಳೂರು:  ಲೋಕಸಭಾ ಚುನಾವಣೆ (‌ Lok Sabha Election 2024 ) ಸಮೀಪಕ್ಕೆ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ತಂತ್ರಗಾರಿಕೆಯೂ ಹೆಚ್ಚಾಗಿದೆ. ಈಗಾಗಲೇ ಬಿಜೆಪಿಯಿಂದ ರಾಜ್ಯದ 20 ಕ್ಷೇತ್ರಗಳಿಗೆ ಟಿಕೆಟ್‌ ಅನ್ನು ಘೋಷಣೆ ಮಾಡಲಾಗಿದೆ. ಇವರಲ್ಲಿ ಹಾಲಿ ಎಂಟು ಜನ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ. ಹೀಗಾಗಿ ಕಾಂಗ್ರೆಸ್‌ (Congress Karnataka) ತನ್ನ ವ್ಯೂಹತಂತ್ರವನ್ನೇ ಬದಲಿಸಿಕೊಂಡಿದೆ. ಇವರಲ್ಲಿ ಕೆಲವು ಹಾಲಿಗಳಿಗೆ ಮಣೆ ಹಾಕಲು ಮುಂದಾಗಿದೆ ಎನ್ನಲಾಗಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ (Bangalore North Lok Sabha constituency,), ಮೈಸೂರು ಲೋಕಸಭಾ ಕ್ಷೇತ್ರ (Mysuru Lok Sabha constituency) ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರಗಳ (Koppal Lok Sabha constituency) ಹಾಲಿ ಸಂಸದರನ್ನು ಸೆಳೆಯಲು ಮುಂದಾಗಿದೆ ಎನ್ನಲಾಗಿದೆ. ವಿಧಾನಸಭೆ ಮಾದರಿಯಲ್ಲೇ ಲೋಕಸಭೆಗೂ ಕಾಂಗ್ರೆಸ್‌ ತನ್ನ ಫಾರ್ಮಾಲಾವನ್ನು ಅಪ್ಲೈ ಮಾಡಲು ಮುಂದಾಗಿದೆ. ಲೋಕಸಭೆಯಲ್ಲಿ ಗೆಲವೊಂದೇ ಮಾ...

Basavaraja Bommai : ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಗ್ತಿಲ್ಲ, ಸಚಿವರೂ ಹೆದರುತ್ತಿದ್ದಾರೆ ಎಂದ ಬೊಮ್ಮಾಯಿ

Image
  Basavaraja Bommai : ಲೋಕಸಭಾ ಚುನಾವಣೆಯ ಕಣಕ್ಕಿಳಿಯಲು ಕಾಂಗ್ರೆಸ್‌ಗೆ ಕೆಲವು ಕಡೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಸಚಿವರನ್ನು ಕಣಕ್ಕಿಳಿಸಲು ಯತ್ನಿಸಿದರೆ ಅವರೂ ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ. ಬೆಂಗಳೂರು:  ಲೋಕಸಭೆ ಚುನಾವಣೆಯಲ್ಲಿ (Lok sabha Election 2024) ಸೋಲುವ ಭೀತಿಯಿಂದ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳು (No Candidates for Congress) ಸಿಗುತ್ತಿಲ್ಲ. ಸಚಿವರನ್ನು ಸ್ಪರ್ಧೆಗೆ ಒತ್ತಡ ಹೇರಲಾಗುತ್ತಿದ್ದು, ಅವರೂ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Basavaraja Bommai ) ಹೇಳಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆದುಕೊಂಡಿರುವ ಬೊಮ್ಮಾಯಿ ಅವರು ಗುರುವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. First Published On Vistara News .

Lok Sabha Election 2024: ಹೊಸ ಅಭ್ಯರ್ಥಿಗಳಿಗೆ ಬಿಜೆಪಿ ಟಾಸ್ಕ್‌; ಬಿ.ವೈ. ವಿಜಯೇಂದ್ರ ಹೇಳಿದ್ದೇನು?

Image
  Lok Sabha Election 2024 : ಎಲ್ಲೆಲ್ಲಿ ಅಭ್ಯರ್ಥಿಗಳ ಬದಲಾವಣೆಯಾಗಿದೆಯೋ ಆ ಅಭ್ಯರ್ಥಿಗಳು ಮೊದಲು ಮಾಡಬೇಕಾದ ಕೆಲಸ ಎಂದರೆ, ಹಾಲಿ ಸಂಸದರನ್ನು ಭೇಟಿ ಮಾಡಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕಿದೆ. ಈ ಮೂಲಕ ನೂತನ ಅಭ್ಯರ್ಥಿಗಳಿಗೆ ಇನ್ನಷ್ಟು ಟಾಸ್ಕ್‌ಗಳನ್ನು ಬಿಜೆಪಿ ಹೈಕಮಾಂಡ್‌ ನೀಡಿದೆ. ಬೆಂಗಳೂರು:  ಲೋಕಸಭಾ ಚುನಾವಣೆ ( Lok Sabha Election 2024 ) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುವಲ್ಲಿ ನಿರತವಾಗಿವೆ. ಹಲವು ಲೆಕ್ಕಾಚಾರಗಳೊಂದಿಗೆ, ಅಳೆದೂ ತೂಗಿ ಟಿಕೆಟ್‌ ಕೊಡಲಾಗುತ್ತಿದೆ. ಎಲ್ಲ ಪಕ್ಷಗಳಿಗೂ ಗೆಲ್ಲುವ ಅಭ್ಯರ್ಥಿಯೇ ಬೇಕಿದೆ. ಹೀಗಾಗಿ ಈ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ಹೆಣೆಯುತ್ತಿವೆ. ಇದೇ ವೇಳೆ ಬಿಜೆಪಿ ಹಲವು ಪ್ರಯೋಗಗಳನ್ನು ಮಾಡಿದೆ. ಈ ಬಾರಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳ ಟಿಕೆಟ್‌ ಅನ್ನು ಘೋಷಣೆ ಮಾಡಿದೆ. ಅದರಲ್ಲಿ ಹಾಲಿ 8 ಸಂಸದರಿಗೆ ಟಿಕೆಟ್‌ ಮಿಸ್‌ ಆಗಿದೆ. ಇದೇ ವೇಳೆ ಬಿಜೆಪಿ ನೂತನ ಅಭ್ಯರ್ಥಿಗಳಿಗೆ ಬಿಜೆಪಿ ಹೈಕಮಾಂಡ್ (BJP high command) ಕೆಲವೊಂದು ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದೆ. ಎಲ್ಲರನ್ನೂ ಒಳಗೊಂಡು ಪ್ರಚಾರ ಮಾಡಲು ಸೂಚನೆ ಕೊಟ್ಟಿದೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಸಹ ಮಾತನಾಡಿದ್ದು, ಕೆಲವರ ಗೊಂದಲಕ್ಕೆ ಮೂರ್ನಾಲ್ಕು ದಿನದಲ್ಲಿ ಉತ್ತರ ಸಿಗುತ್ತದೆ ಎಂದು...

Lok sabha Election 2024 : ಟಿಕೆಟ್‌ ಕೈತಪ್ಪಿದ ಆಕ್ರೋಶ; ಬಿಜೆಪಿ ಕಚೇರಿಗೇ ಸಂಗಣ್ಣ ಕರಡಿ ಬೆಂಬಲಿಗರ ದಾಳಿ

Image
  Lok sabha Election 2024 : ಕೊಪ್ಪಳದಲ್ಲಿ ಟಿಕೆಟ್‌ ಮಿಸ್‌ ಆಗಿರುವ ಸಂಗಣ್ಣ ಕರಡಿ ಅವರ ಬೆಂಬಲಿಗರು ಆಕ್ರೋಶಿತರಾಗಿ ಬಿಜೆಪಿ ಕಚೇರಿಗೇ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದಾರೆ. ಅಭ್ಯರ್ಥಿ ಬಸವರಾಜ ಅವರಿಗೂ ಮುತ್ತಿಗೆ ಹಾಕಿದ್ದಾರೆ. ಕೊಪ್ಪಳ:  ಕೊಪ್ಪಳ ಸಂಸದರಾಗಿರುವ ಕರಡಿ ಸಂಗಣ್ಣ (Koppala MP Sanganna Karadi) ಅವರಿಗೆ ಬಿಜೆಪಿ ಟಿಕೆಟ್‌ ಮಿಸ್‌ ಆಗಿರುವುದು ಅವರ ಬೆಂಬಲಿಗರನ್ನು ಕೆರಳಿಸಿದೆ. ಅವರು ಎಷ್ಟರ ಮಟ್ಟಿಗೆ ಆಕ್ರೋಶಿತರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಕಚೇರಿಗೇ ನುಗ್ಗಿ ದಾಂಧಲೆ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ( Lok sabha Election 2024 ) ಸಂಗಣ್ಣ ಕರಡಿ ಬದಲು ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್‌ ಪಡೆದಿರುವ ಡಾ. ಕೆ. ಬಸವರಾಜ (BJP Candidate Dr. K Basavaraja) ಹಾಗೂ ದೊಡ್ಡನಗೌಡ ಪಾಟೀಲ್ ಮಾಧ್ಯಮಗೋಷ್ಠಿ ನಡೆಯುತ್ತಿದ್ದಾಗಲೇ ಲಗ್ಗೆ ಇಟ್ಟ ಅಭಿಮಾನಿಗಳು ಕಲ್ಲು ತೂರಾಟ ನಡೆಸಿ ಕಿಟಕಿಗಳನ್ನು ಒಡೆದು ಹಾಕಿದ್ದಾರೆ. ಭಾರತ ಮಾತೆಯ ಫೋಟೊವನ್ನೂ ಪುಡಿಗಟ್ಟಿದ್ದಾರೆ. ಸಂಗಣ್ಣ ಕರಡಿ ಮನೆಗೆ ಬಂದ ಅಭ್ಯರ್ಥಿ ಬಸವರಾಜ ಘೇರಾವ್‌ ಈ ನಡುವೆ, ನೂತನ ಅಭ್ಯರ್ಥಿ ಡಾ. ಕೆ. ಬಸವರಾಜ ಅವರು ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ಭೇಟಿಯಾಗಲು ಮನೆಗೆ ಬಂದಾಗಲೂ ಬೆಂಬಲಿಗರ ಆಕ್ರೋಶ ಜೋರಾಗಿತ್ತು. ಅಭ್ಯರ್ಥಿ ಡಾ. ಕೆ. ಬಸವರಾಜ ಅವರು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಜೊತೆಗೆ ಆ...

KS Eshwarappa : ಹಾವೇರಿ ಟಿಕೆಟ್‌ ಸಿಗದಿದ್ರೆ ಕೆ.ಎಸ್ ಈಶ್ವರಪ್ಪ ರೆಬೆಲ್‌ ಆಗೋದು ಗ್ಯಾರಂಟಿ?

Image
  KS Eshwarappa : ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರ ಕಾಂತೇಶ್‌ಗೆ ಟಿಕೆಟ್‌ ಕೊಡಿಸಲೇಕು ಎಂದು ಹಠ ತೊಟ್ಟಿರುವ ಕೆ.ಎಸ್‌.ಈಶ್ವರಪ್ಪ ಅವರು ಟಿಕೆಟ್‌ ಸಿಗದಿದ್ದರೆ ಬಂಡೇಳುವ ಸೂಚನೆಯನ್ನು ನೀಡಿದ್ದಾರೆ. ಶಿವಮೊಗ್ಗ:  ರಾಜ್ಯದ ಹಿರಿಯ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ( KS Eshwarappa ) ಅವರು ಹಾವೇರಿ ಲೋಕಸಭಾ ಕ್ಷೇತ್ರದ (Haveri Lokasabha Constituency) ಬಿಜೆಪಿ ಟಿಕೆಟ್‌ ಸಿಗದೆ ಇದ್ದರೆ ಬಂಡಾಯ ಅಭ್ಯರ್ಥಿಯಾಗಿ (Rebel Candidate) ಕಣಕ್ಕೆ ಇಳಿಯುವ ಸಾಧ್ಯತೆಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ ಎಂದು ಸ್ವತಃ ಕೆ.ಎಸ್‌. ಈಶ್ವರಪ್ಪ ಅವರೇ ಹೇಳಿಕೊಂಡಿದ್ದಾರೆ. ಕೆ.ಎಸ್‌. ಈಶ್ವರಪ್ಪ ಅವರು ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಕಣದಿಂದ ಹಿಂದೆ ಸರಿದಿದ್ದರು. ಆಗ ಅವರು ತಮ್ಮ ಪುತ್ರ ಕೆಇ ಕಾಂತೇಶ್‌ (KE Kantesh) ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‌ ಕೇಳಿದ್ದರು. ಆದರೆ, ಬಿಜೆಪಿ ಕೊಟ್ಟಿರಲಿಲ್ಲ. ಇದಾದ ಬಳಿಕ ಅವರು ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟನ್ನು ಮಗನಿಗೆ ಕೊಡಬೇಕು ಎಂದು ಕೇಳಿದ್ದರು. ಆದರೆ, ಅದು ಕೂಡಾ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. First Published on Vistara News .